ಹೆಚ್ಚಾದ ಸೈಬರ್ ಕ್ರೈಂ ಪ್ರಕರಣ; ಬೆಂಗಳೂರಲ್ಲಿ ಆ್ಯಪ್ ಡೌನ್​ಲೋಡ್ ಮಾಡಿಸಿ ನಿವೃತ್ತ ಯೋಧನಿಗೆ 1 ಲಕ್ಷ ಹಣ ವಂಚನೆ

ಅಮೇಜಾನ್​​​ ಆರ್ಡರ್ ಕ್ಯಾನ್ಸಲ್ ಆಗಿ ಹಣ ಜಮೆ ಆಗದ ಕಾರಣ ಗೂಗಲ್ ಮಾಡಿ ಸಹಾಯವಾಣಿಗೆ ಕರೆ ಮಾಡಿದ್ದ ನಿವೃತ್ತ ಯೋಧ ಮಹೇಶರಿಗೆ ಖದೀಮರು ಕರೆ ಮಾಡಿ ಹಂತ ಹಂತವಾಗಿ ಹಣ ಎಗರಿಸಿದ್ದಾರೆ.

ಹೆಚ್ಚಾದ ಸೈಬರ್ ಕ್ರೈಂ ಪ್ರಕರಣ; ಬೆಂಗಳೂರಲ್ಲಿ ಆ್ಯಪ್ ಡೌನ್​ಲೋಡ್ ಮಾಡಿಸಿ ನಿವೃತ್ತ ಯೋಧನಿಗೆ 1 ಲಕ್ಷ ಹಣ ವಂಚನೆ
ಸಾಂದರ್ಭಿಕ ಚಿತ್ರ
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Jul 29, 2023 | 7:01 AM

ಬೆಂಗಳೂರು, ಜುಲೈ 29: ಟೆಕ್ನಾಲಜಿ ಎಷ್ಟು ಸ್ಮಾರ್ಟ್ ಆಗುತ್ತಾ ಹೋಗುತ್ತಿದೆಯೋ ಸೈಬರ್ ಖದೀಮರು ಕೂಡ ಅಷ್ಟೇ ಸ್ಮಾರ್ಟ್ ಆಗುತ್ತಿದ್ದಾರೆ. ನಕಲಿ ಬ್ಯಾಂಕ್ ಐಡಿ ನೀಡಿ 1 ಲಕ್ಷ ಹಣ ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖದೀಮನೋರ್ವ ಮೋಸ ಮಾಡಲೆಂದೇ MOSA1122@SBI ಯುಪಿಐ ಐಡಿ ಕ್ರಿಎಟ್ ಮಾಡಿದ್ದಾನೆ. ಫೋನ್ ಮಾಡುವವರಿಗೆ, ಅಕೌಂಟ್ ಚೆಕ್ ಮಾಡಿ ಅಂತಾನೆ. ಬ್ಯಾಂಕ್ ಅಪ್ಲಿಕೇಶನ್ ಓಪನ್ ಮಾಡ್ತಿದ್ದಂತೆ ಹಣ ಮಂಗಮಾಯ ಆಗಿಬಿಡುತ್ತೆ. ಇಂತಹದೊಂದು ವಂಚನೆ ಬೆಂಗಳೂರಿನಲ್ಲಿ ನಡೆದಿದ್ದು ವಂಚನೆಗೊಳಗಾದ ನಿವೃತ್ತ ಯೋಧ ಮಹೇಶ್ ಎಂಬುವವರು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿವೃತ್ತ ಯೋಧ ಮಹೇಶ್ ಅಮೇಜಾನ್​​​ನಲ್ಲಿ ₹5,499 ಮೌಲ್ಯದ ಸ್ಪೀಕರ್ ಬುಕ್​ ಮಾಡಿದ್ದರು. ನಂತರ ಬುಕ್ಕಿಂಗ್ ಕ್ಯಾನ್ಸಲ್ ಆಗಿತ್ತು. ಬುಕ್ಕಿಂಗ್​ ಕ್ಯಾನ್ಸಲ್ ಆಗಿ 3 ದಿನದಲ್ಲಿ ಹಣ ವಾಪಸ್​ ಬರುತ್ತೆಂದು ಮೊಬೈಲ್​ಗೆ ಸಂದೇಶ ಬಂದಿತ್ತು. ಹಣ ಜಮೆ ಆಗದಿದ್ದಕ್ಕೆ ಗೂಗುಲ್​​ನಲ್ಲಿ ಸಹಾಯವಾಣಿ ಹುಡುಕಿ ಮಹೇಶ್ ಕರೆ ಮಾಡಿದ್ದರು. ಬಳಿಕ ಮತ್ತೊಂದು ನಂಬರ್​​ನಿಂದ ವಂಚಕರು ಕರೆ ಮಾಡಿದ್ದಾರೆ. RUSKDESK ಅಪ್ಲಿಕೇಶನ್ ಡೌನ್​​​​ಲೋಡ್ ಮಾಡಲು ಹೇಳಿದ್ದಾರೆ. ಌಪ್​​ ಡೌನ್​​​​ಲೋಡ್ ಮಾಡಿ ಬಟನ್​ ಪ್ರೆಸ್​ ಮಾಡಲು ಹೇಳಿದ್ದಾರೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಕಷ್ಟಕ್ಕೆ ಮರುಗಿದ ರ್ಯಾಪಿಡೋ ಚಾಲಕನಿಗೇ ವಂಚಿಸಿದ ಗ್ರಾಹಕ

ವಂಚಕರ ಜಾಲ ತಿಳಿಯದೆ ಇದನ್ನು ನಂಬಿದ ಮಹೇಶ್ ಖದೀಮರು ಹೇಳಿದನ್ನು ಫಾಲೋ ಮಾಡಿದ್ದಾರೆ. ಆ್ಯಪ್ ಡೌನ್​​​​ಲೋಡ್ ಮಾಡಿ ಓಕೆ ಬಟನ್​ ಪ್ರೆಸ್​ ಮಾಡುತ್ತಿದ್ದಂತೆ ಮಹೇಶ್ ಅವರ ಬ್ಯಾಂಕ್ ಖಾತೆಯಿಂದ 81 ಸಾವಿರ ಹಣ ಕಡಿತಗೊಂಡಿದೆ. ಬಳಿಕ ವಂಚಕರು ಮಾತನಾಡಿ ಫೋನ್ ಇಟ್ಟಿದ್ದಾರೆ. ಬ್ಯಾಂಕ್​ನಿಂದ ಹಣ ಕಟ್ ಆದ ಬಗ್ಗೆ ತಿಳಿದ ಮಹೇಶ್ ಮತ್ತೆ ಕರೆ ಮಾಡಿ ವಿಚಾರಿಸಿದಾಗ ತಪ್ಪಾಗಿ ನಂಬರ್ ಟೈಪ್ ಮಾಡಿದ್ದೀರಿ ಎಂದಿದ್ದಾರೆ. ಹಣ ನಿಮ್ಮ ಖಾತೆಗೆ ಬರುತ್ತೆ ಎಂದು ಪದೇ ಪದೇ ಅಕೌಂಟ್ ಪರೀಕ್ಷಿಸಲು ಹೇಳಿದ್ದಾರೆ. ಹೀಗೆ ಹಂತ ಹಂತವಾಗಿ 1 ಲಕ್ಷ ಹಣವನ್ನು ಅಕೌಂಟ್ ನಿಂದ ಮಾಯ ಮಾಡಲಾಗಿದೆ. ಸದ್ಯ ಮೋಸ ಮಾಡಲೆಂದೇ ಬ್ಯಾಂಕ್​ನ ನಕಲಿ ಯುಪಿಐ ಐಡಿ ನೀಡಿ ವಂಚನೆ ಮಾಡಿರುವ ಬಗ್ಗೆ ಮಹೇಶ್ ಅವರು ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ