ಬೆಂಗಳೂರಿನಿಂದ ಸಿಂಗಾಪುರಕ್ಕೆ ನಾನ್ ಸ್ಟಾಪ್ ವಿಮಾನ ಸೇವೆ ಆರಂಭ: ಇಲ್ಲಿದೆ ಟೈಮಿಂಗ್ ಮಾಹಿತಿ

ಏರ್ ಇಂಡಿಯಾ ಬೆಂಗಳೂರು ಮತ್ತು ಸಿಂಗಾಪುರ ನಡುವೆ ತಡೆರಹಿತ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. ಏರ್ ಇಂಡಿಯಾ ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಸೇರಿ ವಾರದಲ್ಲಿ ನಾಲ್ಕು ದಿನ ಹಾರಾಟ ನಡೆಸಲಿದೆ. ಈ ಹೊಸ ವಿಮಾನ ಸಂಪರ್ಕವು ಎರಡು ನಗರಗಳಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಬೆಂಗಳೂರಿನಿಂದ ಸಿಂಗಾಪುರಕ್ಕೆ ನಾನ್ ಸ್ಟಾಪ್ ವಿಮಾನ ಸೇವೆ ಆರಂಭ: ಇಲ್ಲಿದೆ ಟೈಮಿಂಗ್ ಮಾಹಿತಿ
ಏರ್ ಇಂಡಿಯಾ
Follow us
|

Updated on: Oct 24, 2023 | 7:58 AM

ಬೆಂಗಳೂರು, ಅ.24: ಏರ್ ಇಂಡಿಯಾ (Air India) ತನ್ನ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ಮತ್ತು ಸಿಂಗಾಪುರ (Non-Stop Bengaluru and Singapore Flight) ನಡುವೆ ತಡೆರಹಿತ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. ಹೊಸ ಸೇವೆಯು ಬೆಂಗಳೂರು ಹಾಗೂ ಸಿಂಗಾಪುರ ನಡುವೆ ನೇರ ಸಂಪರ್ಗ ಹೊಂದಿದೆ. ಇದರಿಂದ ಅಂತರವೂ ಕಡಿಮೆಯಾಗಿದೆ.

ಏರ್ ಇಂಡಿಯಾದ AI392 ಎಂಬ ಹೊಸ ವಿಮಾನವು ರಾತ್ರಿ 10.30ಕ್ಕೆ ಬೆಂಗಳೂರಿನಿಂದ ಹಾರಾಟ ಆರಂಭಿಸಲಿದೆ. ಮರುದಿನ ಬೆಳಗ್ಗೆ 5.30ಕ್ಕೆ ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ರಿಟರ್ನ್ ಫ್ಲೈಟ್ AI393 ವಿಮಾನ ಸಿಂಗಾಪುರದಿಂದ ಬೆಳಿಗ್ಗೆ 6. 40 ಕ್ಕೆ ಹೊರಟು ರಾತ್ರಿ 8.35 ಕ್ಕೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಲಿದೆ.

ಬೆಂಗಳೂರು ಟು ಸಿಂಗಾಪುರ ವಿಮಾನದಲ್ಲಿ 170 ಎಕಾನಮಿ ಸೀಟು, 12 ಐಷಾರಾಮಿ ಬಿಸಿನೆಸ್ ಕ್ಲಾಸ್ ಸೀಟುಗಳು ಲಭ್ಯವಿದೆ. ಏರ್ ಇಂಡಿಯಾ ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಸೇರಿ ವಾರದಲ್ಲಿ ನಾಲ್ಕು ದಿನ ಹಾರಾಟ ನಡೆಸಲಿದೆ. ಶೀಘ್ರದಲ್ಲೇ ಪ್ರತಿ ದಿನ ಏರ್ ಇಂಡಿಯಾ ಬೆಂಗಳೂರಿನಿಂದ ಸಿಂಗಾಪುರಕ್ಕೆ ಸೇವೆ ನೀಡಲಿದೆ. ಈ ಹೊಸ ವಿಮಾನ ಸಂಪರ್ಕವು ಎರಡು ನಗರಗಳಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಇತ್ತೀಚೆಗೆ ಯುವಕರಿಗೆ ಹೆಚ್ಚು ಹೃದಯಾಘಾತ; ಇದಕ್ಕೆ ಕಾರಣ ಏನು? ವೈದ್ಯರು ಹೇಳಿದ್ದಿಷ್ಟು

ಏರ್ ಇಂಡಿಯಾ ಮುಂಬೈನಿಂದ ಸಿಂಗಾಪುರಕ್ಕೆ ವಾರಕ್ಕೆ ಏಳು ವಿಮಾನಗಳಿಂದ ವಾರಕ್ಕೆ 13 ವಿಮಾನಗಳಿಗೆ ಹೆಚ್ಚಿಸುವುದಾಗಿ ಘೋಷಿಸಿತು. ಭಾನುವಾರದಿಂದ ಅದು ಪ್ರಾರಂಭವಾಗಲಿದೆ. ಏರ್ ಇಂಡಿಯಾ ಪ್ರಸ್ತುತ ದೆಹಲಿಯಿಂದ (14 ವಿಮಾನಗಳು), ಮುಂಬೈ (13 ವಿಮಾನಗಳು), ಚೆನ್ನೈ (7 ವಿಮಾನಗಳು) ಮತ್ತು ಬೆಂಗಳೂರು (4 ವಿಮಾನಗಳು) ಮೆರ್ಲಿಯನ್ ಸಿಟಿಯನ್ನು ಸಂಪರ್ಕಿಸುವ ಮೂಲಕ ಸಿಂಗಾಪುರಕ್ಕೆ ವಾರಕ್ಕೆ ಒಟ್ಟು 38 ತಡೆರಹಿತ ವಿಮಾನಗಳು ಹಾರಾಡುತ್ತಿವೆ.

ಏರ್ ಇಂಡಿಯಾದ ವೆಬ್‌ಸೈಟ್: (www.airindia.com), ಮೊಬೈಲ್ ಅಪ್ಲಿಕೇಶನ್ ಮತ್ತು ಟ್ರಾವೆಲ್ ಏಜೆಂಟ್‌ಗಳ ಮೂಲಕ (ಆನ್‌ಲೈನ್ ಟ್ರಾವೆಲ್ ಏಜೆಂಟ್‌ಗಳನ್ನು ಒಳಗೊಂಡಂತೆ) ಸೇರಿದಂತೆ ಎಲ್ಲಾ ರೀತಿಯಲ್ಲೂ ವಿಮಾನಗಳ ಬುಕಿಂಗ್‌ ಮಾಡಬಹುದು ಎಂದು ಏರ್‌ಲೈನ್ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ