ಇನ್ವೆಸ್ಟ್‌ ಕರ್ನಾಟಕದಲ್ಲಿ ಏರ್‌ ಟ್ಯಾಕ್ಸಿ ಅನಾವರಣ: 10 ನಿಮಿಷದಲ್ಲೇ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಯಾಣ

|

Updated on: Feb 12, 2025 | 6:13 PM

ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಏರ್‌ ಟ್ಯಾಕ್ಸಿ ಗಮನ ಸೆಳೆಯುತ್ತಿದೆ. ಅಮೆರಿಕ, ಯುರೋಪ್, ಚೀನಾ, ಯುಕೆಯಲ್ಲಿ ಮಾತ್ರ ಸದ್ಯ ಏರ್ ಟ್ಯಾಕ್ಸಿ ಇದೆ. ಇದೀಗ ಭಾರತದಲ್ಲೂ ಈಗ ಕಮಾಲ್ ಮಾಡಲು ಏರ್ ಟ್ಯಾಕ್ಸಿ ಸಿದ್ದವಾಗಿದೆ. ಸದ್ಯ ಇನ್ವೆಸ್ಟ್ ಕರ್ನಾಟಕದಲ್ಲಿ ಈ ಏರ್ ಟ್ಯಾಕ್ಸಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದು, ರಕ್ಷಣಾ ಇಲಾಖೆಯಿಂದ ಅನುಮತಿ ಸಿಕ್ಕರೆ 2027ಕ್ಕೆ ಲಾಂಚ್ ಆಗಲಿದೆ. ಹಾಗಾದ್ರೆ, ಈ ಏರ್ ಟ್ಯಾಕಿ ವಿಶೇಷತೆಗಳೇನು? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಇನ್ವೆಸ್ಟ್‌ ಕರ್ನಾಟಕದಲ್ಲಿ ಏರ್‌ ಟ್ಯಾಕ್ಸಿ ಅನಾವರಣ: 10 ನಿಮಿಷದಲ್ಲೇ ಬೆಂಗಳೂರು ಏರ್‌ಪೋರ್ಟ್‌ಗೆ ಪ್ರಯಾಣ
Air Taxi
Follow us on

ಬೆಂಗಳೂರು, (ಫೆಬ್ರವರಿ 12): ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಲ್ ಸ್ಕೂಟರ್, ಎಲೆಕ್ಟ್ರಿಲ್ ಕಾರು, ಬಸ್​ ರಸ್ತೆಗಳಿದಿವೆ. ಈಗ ಎಲೆಕ್ಟ್ರಿಲ್ ಹೆಲಿಕಾಪ್ಟರ್ ಸರದಿ. ಹೌದು..ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕದಲ್ಲಿ ಈ ಬಾರಿ ​ಏರ್ ಟ್ಯಾಕ್ಸಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದೆ. ಇನ್ನು ಹೂಡಿಕೆದಾರರ ಸಮಾವೇಶದ ವಸ್ತು ಪ್ರದರ್ಶನ ಕೇಂದ್ರದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಏರ್ ಟ್ಯಾಕ್ಸಿ ನೋಡಲು ಜನರು ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದು, . ಸಾಕಷ್ಟು ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಎಲೆಕ್ಟ್ರಿಕ್ ಹೆಲಿಕಾಪ್ಟರ್ ಆರ್ಥಾತ್ ವಿದ್ಯುತ್ ಚಾಲಿತ ಏರ್ ಟ್ಯಾಕ್ಸಿ ಎಲ್ಲರ ಗಮನಸೆಳೆದಿದ್ದು, ಇದೀಗ ಬೆಂಗಳೂರಿನಲ್ಲೂ ಹಾರಾಟಕ್ಕೆ ಸಿದ್ಧವಾಗಿದೆ. ಒಂದು ವೇಳೆ ಈ ಏರ್ ಟ್ಯಾಕ್ಸಿ ಶುರುವಾದರೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕೆಲವೇ ನಿಮಿಷಗಳಲ್ಲಿ ತಲುಪಬಹುದಾಗಿದೆ.

ಸರಳ ಏವಿಯೇಷನ್‌ ಸಿದ್ದ ಮಾಡಿರುವ ಹೆಲಿಕಾಪ್ಟರ್ ಮಾದರಿ ಹೋಲುವ ಏರ್ ಟ್ಯಾಕ್ಸಿ ಈಗಾಗಲೇ ಅಮೆರಿಕ, ಯುರೋಪ್, ಚೀನಾ, ಯುಕೆಯಲ್ಲಿ ಮಾತ್ರ ಈ ಏರ್ ಟ್ಯಾಕ್ಸಿ ಇದೆ. ಈಗ ಭಾರತದಲ್ಲೂ ಈಗ ಕಮಾಲ್ ಮಾಡಲು ಸಿದ್ದವಾಗಿದ್ದು, ರಕ್ಷಣಾ ಇಲಾಖೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ 2027ಕ್ಕೆ ಈ ಏರ್ ಟ್ಯಾಕ್ಸಿ ಹಾರಾಟ ಶುರುವಾಗಲಿದೆ. ಇನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಿಂದ ಜಕ್ಕೂರು, ಎಲೆಕ್ಟ್ರಾನಿಕ್ ಸಿಟಿ, ಹೆಚ್‌ಎಎಲ್‌‌ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ಏರ್​ ಟ್ಯಾಕ್ಸಿಯ ವಿಶೇಷತೆಗಳೇನು?

ಸರಳ ಏವಿಯೆಷನ್ ಸಂಸ್ಥೆ ತಯಾರಿಸಿದ ಈ ಏರ್ ಟ್ಯಾಕ್ಸಿ ಸಂಪೂರ್ಣ ಬ್ಯಾಟರಿ ಚಾಲಿತವಾಗಿದೆ. 20 ನಿಮಿಷಗಳ ಕಾಲ ಬ್ಯಾಟರಿ ಚಾರ್ಜ್ ಮಾಡಿದರೆ ಈ ಹೆಲಿಕಾಪ್ಟರ್ ನಿಗದಿತ ಸ್ಥಳಕ್ಕೆ ಹಾರಾಡುತ್ತದೆ. ಪೈಲೆಟ್ ಸೇರಿ ಒಟ್ಟು 7 ಜನರು ಕುಳಿತುಕೊಳ್ಳಲು ಇದರಲ್ಲಿ ಆಸನಗಳಿವೆ. ಗಂಟೆಗೆ 250 ವೇಗದಲ್ಲಿ ಪ್ರಯಾಣ ಮಾಡುವಂತೆ ಈ ಹೆಲಿಕಾಪ್ಟರ್‌ ಅಭಿವೃದ್ದಿ ಪಡಿಸಲಾಗಿದ್ದು, ಒಮ್ಮೆ 3 ಗಂಟೆ ಕಾಲ ಚಾರ್ಜ್ ಮಾಡಿದರೆ ಸುಮಾರು 180 ಕಿಲೋಮೀಟರ್ ಮೈಲೇಜ್ ಕೊಡುತ್ತೆ.