S-VYASA ಯೂನಿವರ್ಸಿಟಿಯಲ್ಲಿ ಎಐ ಲ್ಯಾಬ್ ಅನಾವರಣ ಮತ್ತು ‘ದಿ ರೋಡ್ ಅಹೆಡ್ 2.0’ ಪುಸ್ತಕ ಬಿಡುಗಡೆ
S-VYASA ಯೂನಿವರ್ಸಿಟಿಯಲ್ಲಿ ಇತ್ತೀಚೆಗೆ ಚರಿತ್ರಾರ್ಹ ಎನಿಸುವಂತಹ ಎಐ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಎಐ ಸಂವಾದ, ದಿ ರೋಡ್ ಅಹೆಡ್ 2.0 ಎನ್ನುವ ಪುಸ್ತಕದ ಬಿಡುಗಡೆ ಮಾಡಲಾಯಿತು. ಸ್ಟ್ಯಾನ್ಫೋರ್ಡ್ ವಿವಿಯ ಪರಿಣಿತರು ರೂಪಿಸಿದ ಎಐ ಲ್ಯಾಬ್ ಸ್ಥಾಪನೆಯನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು. ಎಐಸಿಟಿಇ ಛೇರ್ಮನ್ ಪ್ರೊ| ಟಿ.ಜಿ. ಸೀತಾರಾಮ್ ಮತ್ತು ಪದ್ಮಶ್ರೀ ಡಾ| ಎಚ್.ಆರ್ ನಾಗೇಂದ್ರ ಮೊದಲಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಉನ್ನತ ಶಿಕ್ಷಣದಲ್ಲಿ ಯಾಂತ್ರಿಕ ಬುದ್ಧಿಮತ್ತೆಯನ್ನು (ಎಐ- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಒಳಗೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ S-VYASA ಯೂನಿವರ್ಸಿಟಿಯಲ್ಲಿ ಎಐ ಕಾರ್ಯಕ್ರಮವೊಂದು ಆಯೋಜನೆಯಾಗಿತ್ತು. S-VYASA ವಿಶ್ವವಿದ್ಯಾಲಯದ ಅಧ್ಯಕ್ಷರು ಮತ್ತು ಪದ್ಮಶ್ರೀ ಪುರಸ್ಕೃತರೂ ಆದ ಡಾ| ಎಚ್.ಆರ್. ನಾಗೇಂದ್ರ, ಎಐಸಿಟಿಇ ಛೇರ್ಮನ್ ಆದ ಪ್ರೊ| ಟಿ.ಜಿ. ಸೀತಾರಾಮನ್ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉನ್ನತ ಶಿಕ್ಷಣ ಸಂಸ್ಥೆಗಳಿಗೆ 2025ರ ವರ್ಷವು ಎಐನ ಮಹಾಕುಂಭ ಎಂಬ ಘೋಷಣೆ ಆಯಿತು.
ಎಐ ಮಹಾಕುಂಭದ ಮೂರು ಮುಖ್ಯಾಂಶಗಳು
- ‘ಎಐ ಆಫ್ ಎಐ- ಅಡಾಪ್ಷನ್ ಇಂಪೀರೇಟಿವ್ಸ್ ಆಫ್ ಎಐ’ (ಎಐ ತಂತ್ರಜ್ಞಾನ ಅಳವಡಿಕೆಗೆ ಸಂಬಂಧಿಸಿದ್ದು) ವಿಚಾರದ ಕುರಿತು ಪ್ರಬಲ ಎಐಸಿಟಿಇ ಸಂವಾದಗಳು.
- ದಿ ರೋಡ್ ಅಹೆಡ್ 2.0 ಎನ್ನುವ ಎರಡು ಭಾಗಗಳ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ.
- ಎಸ್ ವ್ಯಾಸ ಯೂನಿವರ್ಸಿಟಿಯಲ್ಲಿ ವಿಶೇಷವಾದ ಎಐ ಲ್ಯಾಬ್ವೊಂದರ ಸ್ಥಾಪನೆಯಾಗಲಿರುವುದರ ಘೋಷಣೆ.
ದಿ ರೋಡ್ ಅಹೆಡ್ 2.0 ಪುಸ್ತಕದ ಕರ್ತೃ ಪ್ರೊ| ಟಿ.ಜಿ. ಸೀತಾರಾಮ್ ಅವರು. ಇದು ಎಐ ಪಾತ್ರದ ಕುರಿತದಾದ ಅಧ್ಯಯನ ಕೃತಿ. ಯೋಗಿ ಕೋಚರ್ ಅವರು ಈ ಪುಸ್ತಕದ ಸಹ-ಕರ್ತೃ.
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು 30 ವರ್ಷದ ಹಿಂದೆ ಬರೆದಿದ್ದ ‘ದಿ ರೋಡ್ ಅಹೆಡ್’ ಮೂಲಕೃತಿಯ ಪ್ರಭಾವದಲ್ಲಿ ‘ದಿ ರೋಡ್ ಅಹೆಡ್ 2.0’ ಕೃತಿಯನ್ನು ಬರೆಯಲಾಗಿದೆ.

ದಿ ರೋಡ್ ಅಹೆಡ್ 2.0
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ಪರಿಣಾಮದಿಂದ ಮನುಷ್ಯ, ಸಾಮಾಜಿಕ ಆರ್ಥಿಕತೆ, ಉದ್ಯಮ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಇಕೋಸಿಸ್ಟಂ ಹೇಗೆ ವೇಗವಾಗಿ ಪರಿವರ್ತನೆ ಹೊಂದಬಹುದು ಎಂದು ವಿಶ್ಲೇಷಿಸಿ ಈ ಕೃತಿಯಲ್ಲಿ ಬರೆಯಲಾಗಿದೆ ಎಂದು ಎಸ್-ವ್ಯಾಸ ಯೂನಿವರ್ಸಿಟಿ ಚಾನ್ಸಲರ್ ಡಾ. ಎಚ್.ಆರ್. ನಾಗೇಂದ್ರ ಹೇಳಿದರು.
ಎರಡು ಭಾಗಗಳಿರುವ ಈ ಕೃತಿಯಲ್ಲಿ 750ಕ್ಕೂ ಹೆಚ್ಚು ಪುಟಗಳು, 80ಕ್ಕೂ ಹೆಚ್ಚು ಅಧ್ಯಾಯಗಳಿವೆ. ತಂತ್ರಜ್ಞಾನ ಹೊಸ ಮಹಾ ಪರ್ವವನ್ನು ಒಪ್ಪಿಕೊಂಡು ಅಳವಡಿಸಿಕೊಳ್ಳುವ ಅವಶ್ಯಕತೆ ಬಹಳ ಇದೆ ಎನ್ನುವ ದೃಷ್ಟಿ ಈ ಕರತಿಯಲ್ಲಿ ಕಾಣಬಹುದು. ಪುಸ್ತಕದಲ್ಲಿ ಬರೆದಿರುವ ಭಾಷೆ ಬಹಳ ಸರಳವಾಗಿದ್ದು, ಕಥೆಗಳು, ನಿದರ್ಶನಗಳ ಮೂಲಕ ಓದುಗರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮತ್ತು ಶಕ್ತಿ ಈ ಪುಸ್ತಕಕ್ಕಿದೆ ಎನ್ನಲಾಗಿದೆ.
‘ಎಐ ಅಳವಡಿಕೆಯಿಂದ ಪ್ರೇರಿತವಾದ ಭಾರತದ ಶಿಕ್ಷಣದ ಭವಿಷ್ಯದ ಬಗ್ಗೆ ಅರ್ಥಪೂರ್ಣವಾದ ಸಂವಾದ ನಡೆಸಲು ಈ ಕಾರ್ಯಕ್ರಮ ಒಂದು ಉತ್ತಮ ವೇದಿಕೆಯಾಗಿದೆ. ಉನ್ನತ ಶಿಕ್ಷಣದಲ್ಲಿ ಎಐನ ಅಳವಡಿಕೆ ಮಾಡಬೇಕು ಎನ್ನುವ ಎಐಸಿಟಿಇ ಛೇರ್ಮನ್ ಅವರ ವಿಚಾರವನ್ನು ನಾವು ಬೆಂಬಲಿಸುತ್ತೇವೆ. ಅವರು ಈ ಕಾರ್ಯಕ್ರಮದಲ್ಲಿರುವುದು ನಮಗೆ ಸಿಕ್ಕ ಗೌರವ. ಈ ಪ್ರದೇಶದಲ್ಲೇ ವಿನೂತನ ಎನ್ನಬಹುದಾದ ಎಐ ಪ್ರಯೋಗಾಲಯವೊಂದನ್ನು ಸ್ಥಾಪಿಸುತ್ತಿರುವ ಸಂಗತಿಯನ್ನು ಇವತ್ತು ಘೋಷಿಸಲು ಬಯಸುತ್ತೇವೆ. ಸ್ಟಾನ್ಫೋರ್ಡ್ ಯೂನಿವರ್ಸಿಟಿಯ ತಜ್ಞರು ಈ ಲ್ಯಾಬ್ ಅನ್ನು ರೂಪಿಸಿದ್ದಾರೆ’ ಎಂದು ಡಾ| ಎಚ್ ಆರ್ ನಾಗೇಂದ್ರ ತಿಳಿಸಿದರು.
ಇದೇ ವೇಳೆ ಮಾತನಾಡಿದ ಪ್ರೊ| ಸೀತಾರಾಮ್ ಅವರು ಉನ್ನತ ಶಿಕ್ಷಣ ಮೂಲಸೌಕರ್ಯಕ್ಕೆ ಸಿದ್ಧತೆಯಾಗಿ DMAIC (Define, Measure, Analyse, Improve ಮತ್ತು Control) ಸೂತ್ರ ಬಳಸಿ ಎಐಸಿಟಿಇಯಿಂದ ನಡೆಸಲಾಗುತ್ತಿರುವ ಎಐ ಮಿಷನ್ ಬಗ್ಗೆ ಮಾತನಾಡಿದರು.
‘ಭಾರತದಲ್ಲಿ ಎಐನ ಭವಿಷ್ಯ ಎಂದರೆ ಆಟೊಮೇಶನ್ (ಯಾಂತ್ರಿಕತೆ) ಮಾತ್ರವಲ್ಲ, ಆಗ್ಮೆಂಟೇಶನ್ (ಮೌಲ್ಯವರ್ಧನೆ) ಹೌದು. ಉದ್ಯಮಗಳನ್ನು ಬಲಗೊಳಿಸುವ, ಮನುಷ್ಯನ ಶಕ್ತಿ ಹೆಚ್ಚಿಸುವ, ನಾವೀನ್ಯತೆಯ ಪರಿಧಿಯನ್ನು ಬದಲಿಸುವಂತಹ ಮೌಲ್ಯವರ್ಧನೆ ಅದು. ಭಾರತದ ಅಗಣಿತ ಪ್ರತಿಭಾ ಸಮೂಹ, ಬೃಹತ್ ಪಬ್ಲಿಕ್ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಮತ್ತು ಡಿಜಿಟಲ್ ಕ್ರಾಂತಿಯೊಂದಿಗೆ ಎಐ ಮಿಳಿತಗೊಂಡಲ್ಲಿ ಒಂದು ದೇಶದ ಶಿಕ್ಷಣದ, ಆಡಳಿತ, ಬೆಳವಣಿಗೆ ಹೇಗಾಗಬಹುದು ಎಂಬುದಕ್ಕೆ ಹೊಸ ದೃಷ್ಟಿಕೋನ ಸಿಗುತ್ತದೆ. ಹೊಸ ದೃಷ್ಟಿಯಲ್ಲಿ 2047ರ ವಿಕಸಿತ ಭಾರತದತ್ತ ಹೆಜ್ಜೆ ಹಾಕಲು ಸಾಧ್ಯ’ ಎಂದು ಪ್ರೊಫೆಸರ್ ವಿವರಣೆ ನೀಡಿದರು.
‘ಪ್ರತ್ಯೇಕವಾಗಿರುವ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಿಭಾಗದಲ್ಲಿರುವ ಲ್ಯಾಬ್ಗಳು ಮನುಷ್ಯನಿಂದ ಬೇರ್ಪಟ್ಟ ಕೈಕಾಲುಗಳಂತೆ ಎನ್ನಬಹುದು. ಅರ್ಥಪೂರ್ಣ ಬಳಕೆ ಆಗದೇ ಹೋದರೆ ಇವುಗಳು ನಿರುಪಯುಕ್ತವಾಗುತ್ತವೆ. ಎಐ ಲ್ಯಾಬ್ ಈ ವಿಭಾಗಗಳಿಗೆ ಕೊಂಡಿಯಾಗಿ ಜೀವ ತುಂಬಬಲ್ಲುದು’ ಎಂದು ಎಐಸಿಟಿಇ ಛೇರ್ಮನ್ ಹೇಳಿದರು.

S-VYASA ಯೂನಿವರ್ಸಿಟಿಯಲ್ಲಿ ಎಐ ಲ್ಯಾಬ್ ಅನಾವರಣ
ದಿ ರೋಡ್ ಅಹೆಡ್ 2.0 ಪುಸ್ತಕದ ಸಹ-ಕರ್ತೃ ಯೋಗಿ ಕೋಚರ್ ಮಾತನಾಡಿ, ‘ಕ್ವಾಂಟಂ ಮೆಕ್ಯಾನಿಕ್ಸ್, ನ್ಯಾನೋ ಟೆಕ್ನಾಲಜಿ, ಔಷಧ, ಕೃಷಿ, ವೈಮಾನಿಕ, ಶಿಕ್ಷಣ ಇತ್ಯಾದಿ ಕ್ಷೇತ್ರಗಳು, ಹಾಗೂ ಮ್ಯಾನುಫ್ಯಾಕ್ಚರಿಂಗ್, ಹೋಟೆಲ್, ಇಕಾಮರ್ಸ್, ಬ್ಯೂಟಿ ಸಲೂನ್, ಹೆಲ್ತ್ ಕ್ಲಬ್ ಇತ್ಯಾದಿ ಸಣ್ಣ ಉದ್ದಿಮೆಗಳವರೆಗೆ ಎಐ ಪರಿಣಾಮ ಹೇಗಿರುತ್ತೆ ಎಂದು ಈ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ’ ಎಂದು ಮಾಹಿತಿ ನೀಡಿದರು.
‘ಎಐ ಈಗ ಸಂವೇದಕವೂ ಹೌದು ವಿವೇಕವೂ ಹೌದು. ತನ್ನದೇ ಸ್ವಂತ ಭಾವನೆಗಳನ್ನು ಬೆಳೆಸಿಕೊಂಡಿದೆ. ಮನುಷ್ಯ ಬೌದ್ಧಿಕತೆಯನ್ನು ಮೀರಿಸುವ ಜಾಣ್ಮೆ ಬೆಳೆಸಿಕೊಂಡಿದೆ. ಈ ಪುಸ್ತಕದ ನೆರವಿನಿಂದ ಎಐ ಬೆಳವಣಿಗೆಯ ಕಾಲಘಟ್ಟಗಳನ್ನು ಕಾಣಬಹುದು’ ಎಂದೂ ಯೋಗಿ ಕೋಚರ್ ಹೇಳಿದರು.
ಎಐ ಲ್ಯಾಬ್ ಸ್ಥಾಪನೆ
ಇದೇ ವೇಳೆ, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್ ವ್ಯಾಸ) ವಿಶ್ವವಿದ್ಯಾಲಯವು ಉನ್ನತ ಮಟ್ಟದ ಎಐ ಲ್ಯಾಬ್ ಸ್ಥಾಪನೆಯನ್ನು ಘೋಷಿಸಿದೆ. ಅಮೆರಿಕದ ಸ್ಟಾನ್ಫೋರ್ಡ್ ಯೂನಿವರ್ಸಿಟಿ ಮತ್ತು ಉದ್ಯಮ ನಾಯಕರ ತಂಡವೊಂದ ರೂಪಿಸಿದ ಇಂಥದ್ದೊಂದು ಲ್ಯಾಬ್ ಈ ಪ್ರದೇಶದಲ್ಲಿ ಇದೇ ಮೊದಲು ಸ್ಥಾಪನೆಯಾಗುತ್ತಿರುವುದು.
ಇನ್ನಷ್ಟು ಶಿಕ್ಷಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ