ಬೆಂಗಳೂರು, ಜನವರಿ 17: ಪ್ರತಿ ನಿತ್ಯ ದೇಶ ವಿದೇಶಗಳಿಗೆ ಸಾವಿರಾರು ಜನ ಪ್ರಯಾಣಿಸುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ತಂದಿದ್ದ ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಗಾಂಜಾವನ್ನು ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಬ್ಯಾಂಕಾಕ್ನಿಂದ ಬೆಂಗಳೂರಿಗೆ ಬಂದಿದ್ದ ಹೈಡ್ರೋಪೋನಿಕ್ಸ್ ಗಾಂಜಾ, ಮೈರವಾನ್ ಗಾಂಜಾ ಹೂ ಸೇರಿದಂತೆ ವಿವಿಧ ಬಗೆಯ 23 ಕೋಟಿ ರೂ. ಮೌಲ್ಯದ 23 ಕೆಜಿ ಗಾಂಜಾ ವನ್ನು ವಶಕ್ಕೆ ಪಡೆಯಲಾಗಿದೆ.
ಈ ಗಾಂಜಾವನ್ನು ಪ್ರತಿಷ್ಠಿತ ಶಾಲಾ ಕಾಲೇಜು ಹಾಗೂ ಪಾರ್ಟಿಗಳು ನಡೆಯುವ ಜಾಗಗಳಿಗೆ ತಲುಪಿಸಲು ತರಲಾಗಿತ್ತು ಎಂದು ಹೇಳಲಾಗುತ್ತಿದ್ದು, ಶ್ರೀಮಂತರು ಹೆಚ್ಚಾಗಿ ಬಳಸುವ ಗಾಂಜಾ ಇದಾಗಿದೆ.
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡುವ ವೇಳೆ, ಪ್ರತ್ಯೇಕ ಕವರ್ಗಳಲ್ಲಿ ಪ್ಯಾಕ್ ಮಾಡಿಕೊಂಡು ಲಗೇಜ್ ಬ್ಯಾಗ್ನಲ್ಲಿ ಇಟ್ಟಿಕೊಂಡು ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವುದು ಪತ್ತೆಯಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಲಗೇಜ್ ಚೆಕ್ ಮಾಡುವ ವೇಳೆ ಗಾಂಜಾ ಸಮೇತ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಬಾಳುವ ಹೈಡ್ರೋಪೋನಿಕ್ ಗಾಂಜಾವನ್ನು ಆರೋಪಿಗಳು ಸಾಗಿಸುತ್ತಿದ್ದು, ಆರೋಪಿಗಳ ಮೇಲೆ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಮಾವ ಎನ್ನುವ ಕಾಮ ಕ್ರಿಮಿಯ ಸಂಗ ಮಾಡಿ ಸಾವಿನ ಮನೆ ಸೇರಿದ ಸೊಸೆ ಟೆಕ್ಕಿ
ಒಟ್ಟಾರೆ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಡ್ರಗ್ಸ್ ಜೊತೆಗೆ ವಿದೇಶದಿಂದ ಹೆಚ್ಚು ಬೆಲೆ ಬಾಳುವ ಗಾಂಜಾದಂತಹ ಮಾದಕ ವಸ್ತುಗಳ ಸಾಗಾಣಿಕೆ ಮಾಡಲು ಯತ್ನಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈ ಗಾಂಜಾವನ್ನು ಎಲ್ಲಿಗೆ ಪೂರೈಸಲು ತರಲಾಗಿತ್ತು? ಯಾರಿಗೆ ಕೊಡಲು ತಂದಿದ್ದರು ಎಂಬುದನ್ನು ಇನ್ನಷ್ಟೇ ಅಧಿಕಾರಿಗಳು ತನಿಖೆ ನಡೆಸಿ ಪತ್ತೆ ಹಚ್ಚಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ