ಆದಾಯ ಮೀರಿ ಆಸ್ತಿಗಳಿಕೆ ಆರೋಪ: ಬಿಬಿಎಂಪಿ ಎಆರ್‌ಒಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಲೋಕಾಯುಕ್ತ ಕೋರ್ಟ್​

| Updated By: ವಿವೇಕ ಬಿರಾದಾರ

Updated on: Nov 14, 2022 | 7:53 PM

ನಿಗದಿತ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಡಿ ಬಿಬಿಎಂಪಿ ಎಆರ್‌ಒ ಪ್ರಸನ್ನ ಕುಮಾರ್‌ಗೆ 4 ವರ್ಷ ಜೈಲು ಶಿಕ್ಷೆ ಹಾಗೂ 40 ಲಕ್ಷ ರೂಪಾಯಿ ದಂಡ ವಿಧಿಸಿ ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಆದಾಯ ಮೀರಿ ಆಸ್ತಿಗಳಿಕೆ ಆರೋಪ: ಬಿಬಿಎಂಪಿ ಎಆರ್‌ಒಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ  ಲೋಕಾಯುಕ್ತ ಕೋರ್ಟ್​
ಲೋಕಾಯುಕ್ತ ಕಚೇರಿ
Follow us on

ಬೆಂಗಳೂರು: ನಿಗದಿತ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣದಡಿ ಬಿಬಿಎಂಪಿ (BBMP) ಎಆರ್‌ಒ ಪ್ರಸನ್ನ ಕುಮಾರ್‌ಗೆ 4 ವರ್ಷ ಜೈಲು ಶಿಕ್ಷೆ ಹಾಗೂ 40 ಲಕ್ಷ ರೂಪಾಯಿ ದಂಡ ವಿಧಿಸಿ ಬೆಂಗಳೂರಿನ ಲೋಕಾಯುಕ್ತ (Lokayukata) ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಶೇ.61.69ರಷ್ಟು ಆದಾಯ ಮೀರಿ ಆಸ್ತಿ ಗಳಿಸಿದ್ದ ಆರೋಪದಡಿ 2013ರಲ್ಲಿ ಲೋಕಾಯುಕ್ತ ಪೊಲೀಸರು ಪ್ರಸನ್ನ ಕುಮಾರ್‌ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದರು. ಈ ವೇಳೆ 38,96,310 ರೂ. ಆದಾಯ ಮೀರಿ ಆಸ್ತಿಗಳಿಕೆ ಮಾಡಿದ್ದಾಗಿ ಸಾಬೀತಾಗಿತ್ತು.

ಲೋಕ ಅದಾಲತ್ ಮೂಲಕ ದಾಖಲೆ ಪ್ರಮಾಣದ ಕೇಸ್ ಇತ್ಯರ್ಥ

ಇಂದು (ನ.14) ಲೋಕ ಅದಾಲತ್ ಮೂಲಕ ಒಟ್ಟು 14,77,285 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಬಿ.ವೀರಪ್ಪ ಮಾಹಿತಿ ನೀಡಿದ್ದಾರೆ. 1,75,900 ವ್ಯಾಜ್ಯ, 13,00,784 ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥಗೊಂಡಿವೆ. 1282 ಕೋಟಿ ರೂಪಾಯಿ ಪರಿಹಾರ ಸಂದಾಯ ಮಾಡಲಾಗಿದೆ. 4,18,775 ಟ್ರಾಫಿಕ್ ಚಲನ್ ಪ್ರಕರಣ ಇತ್ಯರ್ಥಗೊಂಡಿವೆ. 2,887 ಆಸ್ತಿ ವಿಭಾಗ ವ್ಯಾಜ್ಯ, 174ಕ್ಕೂ ಹೆಚ್ಚು ದಂಪತಿಗಳನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:48 pm, Mon, 14 November 22