ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಅನ್ನೋದು ನಿರ್ವಿವಾದ, ಆದರೆ ಯಾತಕ್ಕಾಗಿ ಹೋರಾಡಿದ ಎಂಬುದು ಪ್ರಶ್ನಾರ್ಥಕ ಚಿಹ್ನೆ: ಸಿ.ಟಿ.ರವಿ

ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಅನ್ನೋದು ನಿರ್ವಿವಾದ. ಅದರೆ ಯಾತಕ್ಕಾಗಿ ಹೋರಾಡಿದ ಎಂಬುದು ಪ್ರಶ್ನಾರ್ಥಕ ಚಿಹ್ನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ಅನ್ನೋದು ನಿರ್ವಿವಾದ, ಆದರೆ ಯಾತಕ್ಕಾಗಿ ಹೋರಾಡಿದ ಎಂಬುದು ಪ್ರಶ್ನಾರ್ಥಕ ಚಿಹ್ನೆ: ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 14, 2022 | 4:36 PM

ಬೆಂಗಳೂರು: ಟಿಪ್ಪು (Tipu) ಬ್ರಿಟಿಷರ ವಿರುದ್ಧ ಹೋರಾಡಿದ ಅನ್ನೋದು ನಿರ್ವಿವಾದ. ಅದರೆ ಯಾತಕ್ಕಾಗಿ ಹೋರಾಡಿದ ಎಂಬುದು ಪ್ರಶ್ನಾರ್ಥಕ ಚಿಹ್ನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಬದಲಾಗಿ ಅಬ್ದುಲ್ ಕಲಾಂ ಪ್ರತಿಮೆ ಸ್ಥಾಪಿಸುತ್ತಿದ್ದರೆ ಬೆಂಬಲವಾಗಿ ನಿಲ್ಲುತ್ತಿದ್ದೆ. ಕಾಂಗ್ರೆಸ್​ನವರು ಒಡೆಯರ್ ಕುಟುಂಬದ ಪರವಾಗಿ ನಿಲ್ತಾರೋ, ಟಿಪ್ಪು ಪರವಾಗಿ ನಿಲ್ತಾರೋ ಎಂಬ ಆಯ್ಕೆ ಅವರಿಗೆ ಬಿಡುತ್ತೇನೆ. ಶುದ್ಧ ರಕ್ತದವರು ಒಡೆಯರ್, ಮದಕರಿ ನಾಯಕ ಪರ ನಿಲ್ಲುತ್ತಾರೆ. ನಾನು ಶುದ್ಧ ರಕ್ತ ಇರುವವನು ಎಂದು ಕಾಂಗ್ರೆಸ್​ಗೆ ಸಿ.ಟಿ.ರವಿ ಟಾಂಗ್ ನೀಡಿದರು.

ಟಿಪ್ಪು ಅದ್ಯಾವ ಹುಲಿ ಅಂತಾ ಗೊತ್ತಿಲ್ಲ: 

ಟಿಪ್ಪು ನೇತೃತ್ವದಲ್ಲಿ ಯಾವುದೇ ನಿರ್ಣಾಯಕ ಯುದ್ಧ ಗೆದ್ದಿಲ್ಲ. ಆದರೂ ಟಿಪ್ಪು ಹುಲಿ, ಯಾವ ಹುಲಿ ಅಂತಾ ಗೊತ್ತಿಲ್ಲ. ಟಿಪ್ಪು ಸುಲ್ತಾನ್ ಮತ್ತು ಹೈದರಾಲಿಯ ಸಂತಾನ ಮುಂದುವರಿದಿದ್ದರೆ, ಇವತ್ತು ಹಾಸನದ ಹೆಸರು ಕೈಮಾಬಾದ್ ಎಂದು ಆಗುತ್ತಿತ್ತು. ಓಟಿಗಾಗಿ ಜೊಲ್ಲು ಸುರಿಸುವ ಜನರು ಇದನ್ನು ನೋಡಬೇಕು. ರಾಮನಗರದ ಹೆಸರು ಶಂಶೇರಾಬಾದ್ ಎಂದು ಆಗುತ್ತಿತ್ತು. ಜಮೀರ್ ಖಾನ್ ಜೊತೆ ಇನ್ನಷ್ಟು ಖಾನ್​ಗಳು ಹುಟ್ಟಿಕೊಳ್ಳುತ್ತಿದ್ದರು. ಮೈಸೂರಿನಲ್ಲಿ ನಿಜವಾಗಿಯೂ ಪ್ರತಿಮೆ ಸ್ಥಾಪನೆ ಮಾಡುವುದಿದ್ದರೆ ಉರಿಗೌಡ ಮತ್ತು ದೊಡ್ಡನಂಜೇಗೌಡ ಪ್ರತಿಮೆ ನಿರ್ಮಿಸಬೇಕು ಎಂದು ಸಿ.ಟಿ.ರವಿ ಹೇಳಿದರು.

ಕಾಂಗ್ರೆಸ್​ನವರು ಇತಿಹಾಸ ಮೊದಲು ಓದಲಿ: 

ಶಾಲೆಗಳಿಗೆ ಕೇಸರಿ ಬಣ್ಣಕ್ಕೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​ನವರು ಇತಿಹಾಸ ಮೊದಲು ಓದಲಿ. ಕಾಮರಾಜ ಸಮಿತಿ ಮೊದಲು ಶಿಫಾರಸು ಮಾಡಿದ್ದೇ ಭಗವಾ ಧ್ವಜವನ್ನು. ಕೆಲವರಿಗೆ ಕುಂಕುಮ, ಕೇಸರಿ ಪೇಟ ಕಂಡರೆ ಆಗಲ್ಲ. ಕಾಂಗ್ರೆಸ್​ನವರಿಗೆ ತಾಕತ್ ಇದ್ದರೆ ರಾಷ್ಟ್ರಧ್ವಜದಲ್ಲಿ ಇರುವ ಕೇಸರಿ ಬಣ್ಣವನ್ನು ತೆಗೆದು ಹಾಕಲಿ. ಆನಂತರ ಮಾತಾಡೋಣ ಎಂದು ಹೇಳಿದರು.

ಧ್ವಂಸ ಮಾಡೋದೇ ಪ್ರತಾಪ ಸಿಂಹ ಜಾಯಮಾನ: ಶಾಸಕ ಪ್ರಿಯಾಂಕ ಖರ್ಗೆ

ಪ್ರತಾಪ್ ಸಿಂಹ ಮತ್ತೆ ಏನಾದ್ರೂ ಧ್ವಂಸ ಮಾಡುತ್ತೇವೆ ಅನ್ನೋದರಲ್ಲಿ ಆಶ್ಚರ್ಯ ಇಲ್ಲ. ಧ್ವಂಸ ಮಾಡೋದೇ ಪ್ರತಾಪ ಸಿಂಹ ಜಾಯಮಾನ ಎಂದು ಕಾಂಗ್ರೆಸ್​​ ಶಾಸಕ ಪ್ರಿಯಾಂಕ ಖರ್ಗೆ ಆರೋಪಿಸಿದರು. ನಗರದಲ್ಲಿ ಮಾತನಾಡಿದ ಅವರು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ವಾ? ಟಿಪ್ಪು ಕಾರಣದಿಂದ ಸಿಲ್ಕ್ ಇಂಡಸ್ಟ್ರಿ ಆಗ್ತಾ ಇಲ್ವಾ ಎಂದು ಪ್ರಶ್ನಿಸಿದರು. ಇತಿಹಾಸದ ಮತ್ತು ಜ್ಞಾನದ ಕೊರತೆ ಅವರಿಗಿದೆ. ಇತಿಹಾಸ ಸರಿಯಾಗಿ ಓದಿ ಚರ್ಚೆಗೆ ಬರುವುದಕ್ಕೆ ಅವರು ತಯಾರಿಲ್ಲ ಎಂದರು.

ಚುನಾವಣೆ ಗೋಸ್ಕರ ಕೆಂಪೇಗೌಡ ಪ್ರತಿಮೆ ನಿರ್ಮಾಣ

ಕೆಂಪೇಗೌಡ ಪ್ರತಿಮೆ ಸಾರ್ವಜನಿಕರಿಗೆ ಯಾಕೆ ಇನ್ನೂ ಓಪನ್ ಮಾಡಿಲ್ಲ. ಕೆಂಪೇಗೌಡ ಪ್ರತಿಮೆ ಇನ್ನೂ ಕೆಲಸ ಬಾಕಿ ಇದೆಯಂತೆ. ಟರ್ಮಿನಲ್ 2 ಕೂಡ ಇನ್ನೂ ಕೆಲಸ ಬಾಕಿ ಇದೆ. ಯಾರನ್ನು ತೃಪ್ತಿ ಪಡಿಸಲು ಇದನ್ನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.  ಕೆಲಸ ಬಾಕಿ ಉಳಿಸಿಕೊಂಡು ಉದ್ಘಾಟನೆ ಮಾಡಿದ್ದಾರೆ. ಕೆಂಪೇಗೌಡ ಪ್ರತಿಮೆ ಮಾಡಿರುವುದು ಖಂಡಿತ ಚುನಾವಣೆಗೋಸ್ಕರ. ಒಕ್ಕಲಿಗ ಲೀಡರ್ ಯಾರೂ ಅಂತ ಅವರ ನಡುವೆಯೇ ಫೈಟ್ ನಡೆಯುತ್ತಿದೆ. ಅವರ ಆಂತರಿಕ ಜಗಳದಿಂದಾಗಿ ಕೆಲಸಕ್ಕೂ ಮೊದಲೇ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:26 pm, Mon, 14 November 22

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ