ಅಮುಲ್ ಕ್ವಿಕ್ ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಬೆಂಗಳೂರಿನಲ್ಲಿ ಮುಂದಿನ ವಾರ ಆರಂಭ; ನಂದಿನಿ ಜತೆ ಪೈಪೋಟಿ ಇಲ್ಲವೆಂದ ಕಂಪನಿ

|

Updated on: Apr 08, 2023 | 1:42 PM

ರಾಜ್ಯ ರಾಜಧಾನಿಯಲ್ಲಿ ಅಮುಲ್ ಹಾಲು, ಮೊಸರು ಮಾರಾಟ ವಿಚಾರವಾಗಿ ರಾಜಕೀಯ ವಾಕ್ಸಮರ ತೀವ್ರಗೊಂಡಿರುವ ಬೆನ್ನಲ್ಲೇ ಮುಂದಿನ ವಾರ ಅಮುಲ್ ಕ್ವಿಕ್ ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಆರಂಭವಾಗಲಿದೆ ಎಂದು ಕಂಪನಿಯ ಎಂಡಿ ಜಯನ್ ಮೆಹ್ತಾ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ.

ಅಮುಲ್ ಕ್ವಿಕ್ ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಬೆಂಗಳೂರಿನಲ್ಲಿ ಮುಂದಿನ ವಾರ ಆರಂಭ; ನಂದಿನಿ ಜತೆ ಪೈಪೋಟಿ ಇಲ್ಲವೆಂದ ಕಂಪನಿ
ಅಮುಲ್
Image Credit source: Twitter
Follow us on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಮುಲ್ ಹಾಲು, ಮೊಸರು (Amul) ಮಾರಾಟ ವಿಚಾರವಾಗಿ ರಾಜಕೀಯ ವಾಕ್ಸಮರ ತೀವ್ರಗೊಂಡಿರುವ ಬೆನ್ನಲ್ಲೇ ಮುಂದಿನ ವಾರ ಅಮುಲ್ ಕ್ವಿಕ್ ಇ-ಕಾಮರ್ಸ್ ಪ್ಲಾಟ್​ಫಾರ್ಮ್ ಆರಂಭವಾಗಲಿದೆ ಎಂದು ಕಂಪನಿಯ ಎಂಡಿ ಜಯನ್ ಮೆಹ್ತಾ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ. ಆಂಧ್ರದ ಮದನಪಲ್ಲಿಯಿಂದ ಬೆಂಗಳೂರಿಗೆ ಹಾಲು, ಮೊಸರು ಸರಬರಾಜಾಗಲಿದೆ. ಇ-ಕಾರ್ಮಸ್ ಮೂಲಕ ಅಮುಲ್​ ಹಾಲು, ಮೊಸರು ಮಾರಾಟ ಮಾಡುತ್ತೇವೆ. ನಂದಿನಿ ಅಥವಾ ಕರ್ನಾಟಕ ಹಾಲು ಉತ್ಪಾದಕರ ಜತೆ ಪೈಪೋಟಿ ನಡೆಸಲ್ಲ ಎಂದು ಅವರು ಹೇಳಿದ್ದಾರೆ.

ಅಮುಲ್​​ ಹಾಗೂ ಕೆಎಂಎಫ್ ಸಂಬಂಧ ಚೆನ್ನಾಗಿದೆ. ನಂದಿನಿ ಹಾಲಿನ ಮಳಿಗೆ ರೀತಿ ನಾವು ಸ್ಟಾಲ್, ಬೂತ್​ ಹಾಕುವುದಿಲ್ಲ ಎಂದು ಜಯನ್ ಮೆಹ್ತಾ ಮಾಹಿತಿ ನೀಡಿದ್ದಾರೆ.

ಯಾರಿಗೆ ಅಮುಲ್ ಉತ್ಪನ್ನ ಬೇಕೋ ಅವರು ಇ- ಕಾರ್ಮಸ್ ಪ್ಲಾಟ್​ಫಾರ್ಮ್ ಮೂಲಕ ಖರೀದಿ ಮಾಡಬಹುದು. ಬೆಂಗಳೂರಿನಿಂದ‌ 100 ಕಿಲೋ ಮೀಟರ್ ದೂರದ ಮದನಪಲ್ಲಿಯಲ್ಲಿ ಅಮುಲ್ ಪ್ಲಾಂಟ್ ಇದೆ. ಅಲ್ಲಿಂದ ಕಳುಹಿಸುತ್ತೇವೆಯೇ ವಿನಃ ನಂದಿನಿಯ ರೀತಿ ಬೂತ್, ಮಳಿಗೆಗಳನ್ನು ತೆರೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಂದಿನಿ ರಾಷ್ಟ್ರ ಮಟ್ಟದ ಬ್ರ್ಯಾಂಡ್​, ಕಾಂಗ್ರೆಸ್​ನಿಂದ ಅಮುಲ್ ವಿಚಾರದಲ್ಲಿ ರಾಜಕೀಯ; ಸಿಎಂ ಬೊಮ್ಮಾಯಿ

ರಾಜ್ಯದ ನಂದಿನಿಯನ್ನು ಮುಗಿಸಲು ಅಮುಲ್​ ಮುಂದಾಗಿದೆ ಎಂಬ ಪ್ರತಿಪಕ್ಷಗಳ ನಾಯಕರ ಅರೋಪದ ಸಂದರ್ಭದಲ್ಲೇ ಜಯನ್ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.

ಅಮುಲ್ ಜತೆ ಕೆಎಂಎಫ್​ ವಿಲೀನಕ್ಕೆ ಹುನ್ನಾರ; ನಾರಾಯಣಗೌಡ

ಅಮುಲ್ ಜತೆ ಕೆಎಂಎಫ್​ ವಿಲೀನಕ್ಕೆ ಹುನ್ನಾರ ನಡೆಯುತ್ತಿದೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ‘ಟಿವಿ9’ಗೆ ಹೇಳಿಕೆ ನೀಡಿದ್ದಾರೆ. ಕೆಎಂಎಫ್​ ಕರ್ನಾಟಕ ರೈತರ ಬದುಕು. ಅಮುಲ್ ಪದಾರ್ಥಗಳನ್ನು ಮಾರಾಟ ಮಾಡಲು ಬಿಡುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥನೆ ಮಾಡಿಕೊಳ್ಳಬಾರದು. ಅಮುಲ್​ ಉತ್ಪನ್ನಗಳನ್ನು ವಿರೋಧಿಸಿ ಚಳವಳಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ