Kempegowda International Airport: ಮದ್ಯದ ಅಮಲಿನಲ್ಲಿ ವಿಮಾನದ ಎಕ್ಸಿಟ್ ಡೋರ್ ತೆಗೆಯಲು ಯತ್ನಿಸಿದ ಪ್ರಯಾಣಿಕ
ಮದ್ಯದ ಅಮಲಿನಲ್ಲಿ ಸಹ ಪ್ರಯಾಣಿಕನ ಜೊತೆ ಕಿರಿಕ್ ನಡೆಸಿ ವಿಮಾನದ ಪ್ಲಾಪ್ ಆಪ್ ದಿ ಒವರ್ ವಿಂಗ್ ಎಕ್ಸಿಟ್ ಡೋರ್ ತೆಗೆಯಲು ಯತ್ನಿಸಿದ ಘಟನೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ 6E308 ವಿಮಾನದಲ್ಲಿ ನಡೆದಿದೆ.
ಬೆಂಗಳೂರು: ಮದ್ಯದ ಅಮಲಿನಲ್ಲಿ ಸಹ ಪ್ರಯಾಣಿಕನ ಜೊತೆ ಕಿರಿಕ್ ನಡೆಸಿ ವಿಮಾನದ ಪ್ಲಾಪ್ ಆಪ್ ದಿ ಒವರ್ ವಿಂಗ್ ಎಕ್ಸಿಟ್ ಡೋರ್ ತೆಗೆಯಲು ಯತ್ನಿಸಿದ ಘಟನೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ(IndiGo) 6E308 ವಿಮಾನದಲ್ಲಿ ನಡೆದಿದೆ. ಹೌದು ಕುಡಿದ ನಶೆಯಲ್ಲಿ ಪ್ರತೀಕ್ ಎಂಬುವವನು ಸಹ ಪ್ರಯಾಣಿಕನ ಜೊತೆ ಜಗಳ ಮಾಡಿ, ಎಕ್ಸಿಟ್ ಡೋರ್ ತೆಗೆಯಲು ಯತ್ನಿಸಿದ್ದಾನೆ. ಇತನ ವರ್ತನೆಯಿಂದ ವಿಮಾನದಲ್ಲಿದ್ದ ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಬಳಿಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಆತನನ್ನ ಬಂಧಿಸಲಾಗಿದೆ.
ದುಬೈನಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಇಬ್ಬರು ಕುಡಿದು ಅನುಚಿತ ವರ್ತನೆ ತೋರಿದ್ದರು
ಹೌದು ಕೆಲ ದಿನಗಳ ಹಿಂದೆ ಇಬ್ಬರು ಪ್ರಯಾಣಿಕರು ಕುಡಿದ ಮತ್ತಿನಲ್ಲಿ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆ ಇಂಡಿಗೋ ವಿಮಾನದಲ್ಲಿ ನಡೆದಿದೆ. ದುಬೈನಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಮುಂಬೈನಲ್ಲಿ ವಿಮಾನ ಇಳಿದ ನಂತರ ಅವರನ್ನು ಬಂಧಿಸಲಾಯಿತು ಮತ್ತು ನ್ಯಾಯಾಲಯದಿಂದ ಜಾಮೀನು ನೀಡಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಇಬ್ಬರು ಆರೋಪಿಗಳು ಪಾಲ್ಘರ್ ಮತ್ತು ಕೊಲ್ಹಾಪುರದ ನಲಸೋಪಾರದವರು, ಅವರು ಗಲ್ಫ್‌ನಲ್ಲಿ ಒಂದು ವರ್ಷ ಕೆಲಸ ಮಾಡಿ ಹಿಂತಿರುಗುತ್ತಿದ್ದರು ಮತ್ತು ಸುಂಕ ರಹಿತ ಅಂಗಡಿಯಿಂದ ತಂದ ಮದ್ಯವನ್ನು ಸೇವಿಸಿ ಜೋರಾಗಿ ಮಾತನಾಡಲು ಆರಂಭಿಸಿದ್ದರು. ಆಗ ಸಹ ಪ್ರಯಾಣಿಕರು ಅವರ ವಿರುದ್ಧ ಧ್ವನಿ ಎತ್ತಿದಾಗ ವಿಮಾನ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರ ಜತೆ ಅಸಭ್ಯವಾಗಿ ನಡೆದುಕೊಂಡಿದ್ದರು. ಅಧಿಕಾರಿಗಳ ಪ್ರಕಾರ, ಈ ವರ್ಷದಲ್ಲಿ ಇದು ಏಳನೇ ಘಟನೆಯಾಗಿದ್ದು, ಇದೀಗ 8ನೇ ಬಾರಿ ನಡೆದಿದೆ. ವಿಮಾನ ಪ್ರಯಾಣಿಕರ ಅಶಿಸ್ತಿನ ವರ್ತನೆಗಾಗಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ:ರಸ್ತೆ, ವಿಮಾನ ನಿಲ್ದಾಣ, ಬಂದರು ಹೀಗೆ ಎಲ್ಲ ಯೋಜನೆಗಳನ್ನು ಅದಾನಿಗೆ ಕೊಡುತ್ತಿರುವುದೇಕೆ?: ಮಲ್ಲಿಕಾರ್ಜುನ ಖರ್ಗೆ
ವಿಮಾನದಲ್ಲಿ ಪ್ರಯಾಣದ ವೇಳೆ ಸಿಗರೇಟ್ ಸೇದಿದ್ದ ಭೂಪ
ದೇವನಹಳ್ಳಿ: ಕೆಲ ದಿನಗಳ ಹಿಂದೆ ಅಷ್ಟೇ ಅಸ್ಸಾಂನಿಂದ ಬೆಂಗಳೂರಿಗೆ ಬರುತ್ತಿದ್ದ ಪ್ರಯಾಣಿಕ ಶೇಹರಿ ಚೌದರಿ ಎಂಬಾತ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ್ದಾನೆ. 6E 716 ಇಂಡಿಗೂ ವಿಮಾನದಲ್ಲಿ ಮಧ್ಯರಾತ್ರಿ 01:30 ರ ವೇಳೆ ಈ ಘಟನೆ ನಡೆದಿದೆ. ವಿಮಾನದ ಶೌಚಾಲಯದಲ್ಲಿ ಹೊಗೆ ಮತ್ತು ವಾಸನೆ ಬಂದ ಹಿನ್ನೆಲೆ ವಿಮಾನದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರಯಾಣಿಕ ಸಿಗರೇಟ್ ಸೇದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಬೆಂಗಳೂರಿಗೆ ಬಂದ ಕೂಡಲೆ ಏರ್ಲೈನ್ಸ್ ಸಿಬ್ಬಂದಿ ಪ್ರಯಾಣಿಕನನ್ನ ಭದ್ರತಾ ಪಡೆಗೆ ನೀಡಿದ್ದಾರೆ. ಪ್ರಯಾಣಿಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಏರ್ಪೋಟ್ ಪೊಲೀಸರು ಬಂಧಿಸಿದ್ದಾರೆ. ಏರ್ಪೋಟ್ಗಳಲ್ಲಿ ಭದ್ರತಾ ಪಡೆಯ ನಿರ್ಲಕ್ಷ್ಯದಿಂದ ಪದೇ ಪದೇ ಫ್ಲೈಟ್ಗಳಲ್ಲಿ ದೂಮಫಾನ ಪ್ರಕರಣ ಪತ್ತೆಯಾಗುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಆಕಾಶದಲ್ಲಿ ಹಾರುವ ವೇಳೆ ಧೂಮಪಾನದಿಂದ ಅಗ್ನಿ ಅವಾಂತರವಾದರೆ ಯಾರು ಹೊಣೆ ಎನ್ನುವ ಆತಂಕ ಎದುರಾಗಿದೆ.
ಮಾ.5ರಂದು ವಿಮಾನದಲ್ಲಿ ಸಿಗರೇಟ್ ಸೇದಿ ಆತಂಕ ಸೃಷ್ಟಿಸಿದ್ದ ಯುವತಿ
ಮಾ.5ರಂದು ರಾತ್ರಿ 9.50ಕ್ಕೆ ಕೋಲ್ಕತ್ತಾದಿಂದ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಪ್ರಿಯಾಂಕ ಎಂಬ ಯುವತಿ ಇಂಡಿಗೋ 6E716 ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದಳು. ವಿಮಾನ ಬೆಂಗಳೂರಿಗೆ ಲ್ಯಾಂಡ್ ಆಗುವ ಅರ್ಧ ಗಂಟೆ ಮುನ್ನ ಸಿಗರೇಟ್ ಸೇದಿದ್ದಳು. ಶೌಚಾಲಯ ಬಾಗಿಲು ತೆಗಿಸಿದಾಗ ಡಸ್ಟ್ ಬಿನ್ನಲ್ಲಿ ಸಿಗರೇಟ್ ತುಂಡು ಪತ್ತೆಯಾಗಿತ್ತು. ಸಿಗರೇಟ್ ಕಂಡು ತಕ್ಷಣ ಸಿಬ್ಬಂದಿ ಡಸ್ಟ್ ಬಿನ್ಗೆ ನೀರು ಸುರಿದಿದ್ದರು. ಬಳಿಕ ಫ್ಲೈಟ್ ಲ್ಯಾಂಡ್ ಆಗುತ್ತಿದ್ದಂತೆ ಯುವತಿಯನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಕೆಲಕಾಲ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಇತರರ ಜೀವ & ವೈಯಕ್ತಿಕ ಸುರಕ್ಷತೆಗೆ ಅಪಾಯ ಆರೋಪದಡಿ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇನ್ನಷ್ಟು ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:56 am, Sat, 8 April 23