ರಾಚೇನಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ; ಕಾರಣವೇನು?

| Updated By: ಆಯೇಷಾ ಬಾನು

Updated on: May 07, 2024 | 7:55 AM

ಅದು ಆ ಭಾಗದ ಅತಿದೊಡ್ಡ ಕೆರೆ. ಈ ಕೆರೆಯಲ್ಲಿ ಲಕ್ಷಾಂತರ ಮೀನುಗಳಿವೆ. ಪ್ರತಿದಿನ ಸಾವಿರಾರು ವಾಯುವಿಹಾರಿಗಳು ವಾಕ್ ಮಾಡಲು ಈ ಕೆರೆಗೆ ಬರ್ತಾರೆ, ಆದರೆ ಯಾರೋ ಕೆಲವರು ಮಾಡಿದ ತಪ್ಪಿಗೆ ಸಾವಿರಾರು ಮೂಖ ಜಲಚರಗಳು ಸಾವನ್ನಪ್ಪಿವೆ. ಕಾರಣ ಏನು ಎಂದು ತಿಳಿಯಬೇಕಿದ್ರೆ ಈ ಸುದ್ದಿ ಓದಿ.

ರಾಚೇನಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ; ಕಾರಣವೇನು?
ರಾಚೇನಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ
Follow us on

ಬೆಂಗಳೂರು, ಮೇ.07: ಕೆರೆಯ ನೀರು ಕಡುಕಪ್ಪು ಬಣ್ಣಕ್ಕೆ ತಿರುಗಿದೆ. ಕೆರೆ ನೀರು ಕಲುಷಿತವಾಗಿದೆ. ಇನ್ನೊಂದು ಕಡೆ ಕೆರೆಯ ದಡದಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿವೆ. ಕೆರೆಯಲ್ಲಿ ಸತ್ತ ಮೀನುಗಳನ್ನು ತಿನ್ನಲು ಪಕ್ಷಿಗಳು ಬರುತ್ತಿರುವ ದೃಶ್ಯ ಕಂಡು ಬಂದದ್ದು ಬ್ಯಾಟರಾಯನಪುರ ಕ್ಷೇತ್ರದ ರಾಚೇನಹಳ್ಳಿ ಕೆರೆಯಲ್ಲಿ (Rachenahalli Lake).‌

ರಾಚೇನಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮವಾಗಿದೆ. ಸಾವಿರಾರು ಮೀನುಗಳು ಸತ್ತು ತೇಲುತ್ತಿವೆ. ಸತ್ತ ಮೀನುಗಳ ವಾಸನೆಯಿಂದಾಗಿ ವಾಯುವಿಹಾರಿಗಳು ಬೆಳಗ್ಗೆ-ಸಂಜೆ ವಾಕ್​ ಮಾಡಲು ಈ ಕೆರೆಗೆ ಬರುತ್ತಿಲ್ಲ. ರಣಹದ್ದುಗಳು ಮತ್ತು ನಾಯಿಗಳು ಸತ್ತ ಮೀನುಗಳನ್ನು ತಿನ್ನಲು ಬರುತ್ತಿವೆ. ಸತ್ತ ಮೀನುಗಳನ್ನು ಅರ್ಧಂಬರ್ಧ ತಿಂದು ಕೆರೆ ಅಕ್ಕಪಕ್ಕದ ಮನೆಗಳ ಬಳಿ ಬಿಟ್ಟು ಹೋಗುತ್ತಿವೆಯಂತೆ. ಇದರಿಂದ ವಾಸನೆ ತಾಳಲಾಗದೆ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಥಣಿಸಂದ್ರ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ರಾಚೇನಹಳ್ಳಿ ಕೆರೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿರುವ 148 ಎಕರೆ ವಿಸ್ತೀರ್ಣ ಹೊಂದಿದೆ. ಅಕ್ಕಪಕ್ಕದ ಮನೆಗಳಿಂದ ನೇರವಾಗಿ ನೀರನ್ನು ಬಿಡಲಾಗ್ತಿದೆ. ಇದರಿಂದ ಕೆರೆಯಲ್ಲಿರುವ ಮೀನುಗಳು ಸಾವನ್ನಪ್ಪುತ್ತಿವೆ ಎಂದು ಕೆಲವರು ತಿಳಿಸಿದ್ದಾರೆ. ಕೆರೆಯಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಪ್ರತಿನಿತ್ಯ ವಾಕ್ ಮಾಡಲು ಬರ್ತಿನಿ ಆದರೆ ಸತ್ತಿರುವ ಮೀನುಗಳಿಂದ ತುಂಬಾ ಕೆಟ್ಟ ವಾಸನೆ ಬರ್ತಿದೆ. ದಯವಿಟ್ಟು ಬಿಬಿಎಂಪಿ ಅಧಿಕಾರಿಗಳು ಕೆರೆಯನ್ನು ಕ್ಲೀನ್ ಮಾಡಿಸಬೇಕು ಎಂದು ಸ್ಥಳೀಯ ನಿವಾಸಿ ಪ್ರವೀಣ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Karnataka Rain: ಇಂದು ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವೆಡೆ ಭಾರಿ ಮಳೆ ಸಾಧ್ಯತೆ

ಇನ್ನೂ ಬ್ಯಾಟರಾಯನಪುರ ಕ್ಷೇತ್ರದ ರಾಚೇನಹಳ್ಳಿ ಕೆರೆಗೆ ಅಪಾರ್ಟ್ಮೆಂಟ್ ಗಳ ನೀರು ಸೇರಿರುವ ಶಂಕೆ ವ್ಯಕ್ತವಾಗ್ತಿದೆ. ಕೆರೆಯ ಸುತ್ತಲೂ ಸಾಕಷ್ಟು ಮನೆಗಳು ಇವೆ. ಆ ಮನೆಯ ಡ್ರೈನೇಜ್​ ನೀರೆಲ್ಲ ಕೆರೆಯ ಒಡಲನ್ನ ಸೇರ್ತಿದೆ ಅನ್ನೊ ದೂರಿದೆ. ಇದು ಕೇವಲ ರಾಚೇನಹಳ್ಳಿ ಕೆರೆಯ ಕಥೆಯಲ್ಲ. ಅಕ್ಕಪಕ್ಕದ ಸಾಕಷ್ಟು ಕೆರೆಗಳಲ್ಲೂ ಇದೆ ಪರಿಸ್ಥಿತಿ ಇದೆ. ಈ ಬಗ್ಗೆ ಮೀನು ಸಾಕಣೆದಾರನನ್ನ ಕೇಳಿದ್ರೆ ವಿಪರೀತವಾದ ಬಿಸಿಲು, ಮಳೆ ಬರುವ ಸಂಭವ ಹೆಚ್ಚಿತ್ತು ಹಾಗಾಗಿ ಗಾಳಿ ಕಮ್ಮಿ ಆಯಿತು. ಅದರಿಂದ ಮೀನುಗಳಿಗೆ ಆಕ್ಸಿಜನ್ ಕಮ್ಮಿ ಆಗಿದೆ. ಇದರಿಂದ ಮೀನುಗಳು ಸತ್ತು ಹೋಗಿದೆ. ಈಗಾಗಲೇ ಸತ್ತಿರುವ ಮೀನುಗಳನ್ನು ಮಣ್ಣಿನಲ್ಲಿ ಮುಚ್ಚಲಾಗಿದೆ. ಕಾಟ್ಲಾ, ಸಿಸಿ ಜಾತಿಯ ಸಾವಿರಾರು ಮೀನುಗಳು ಕೆರೆಯಲ್ಲಿದ್ವು ಎಂದು ಮೀನು ಸಾಕಾಣಿಕೆದಾರ ಹೃದಯರಾಜ್ ತಿಳಿಸಿದರು.

ಒಟ್ನಲ್ಲಿ ಅಪಾರ್ಟ್ಮೆಂಟ್​ಗಳ ಕೊಳಚೆ ನೀರಿನಿಂದ ಸಾವಿರಾರು ಮೀನುಗಳು ಸಾವನ್ನಪುತ್ತಿದ್ದು, ಇದರಿಂದ ವಾಕರ್ಸ್ ಮತ್ತು ನಿವಾಸಿಗಳು ಯಾರು ಕೆರೆಯತ್ತ ಮುಖ ಮಾಡ್ತಿಲ್ಲ. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ