ಮೊಹಮ್ಮದ್ ನಲಪಾಡ್ ಬೆಂಬಲಿಗರಿಂದ ಕ್ಲಬ್​ನಲ್ಲಿ ಪಾರ್ಟಿ ವೇಳೆ ಹಲ್ಲೆ ಆರೋಪ; ಅಂತಹ ಘಟನೆ ನಡೆದಿಲ್ಲ ಎಂದ ನಲಪಾಡ್

ಅಲ್ಲಿ ಯಾವುದೇ ರೀತಿಯ ಹಲ್ಲೆ ಘಟನೆ ನಡೆದಿಲ್ಲ. ಬೇಕಿದ್ದರೆ ರೆಸಾರ್ಟ್ ಸಿಸಿ ಕ್ಯಾಮರಾ ಪರಿಶೀಲಿಸಲಿ. ಸಿದ್ದು ಹಳ್ಳೇಗೌಡ, ನಾನು ಚೆನ್ನಾಗಿಯೇ ಇದ್ದೇವೆ ಎಂದು ಈ ಘಟನೆಯ ಬಗ್ಗೆ ಬೆಂಗಳೂರಿನಲ್ಲಿ ಮೊಹಮ್ಮದ್ ನಲಪಾಡ್ ಹೇಳಿಕೆ ನೀಡಿದ್ದಾರೆ.

ಮೊಹಮ್ಮದ್ ನಲಪಾಡ್ ಬೆಂಬಲಿಗರಿಂದ ಕ್ಲಬ್​ನಲ್ಲಿ ಪಾರ್ಟಿ ವೇಳೆ ಹಲ್ಲೆ ಆರೋಪ; ಅಂತಹ ಘಟನೆ ನಡೆದಿಲ್ಲ ಎಂದ ನಲಪಾಡ್
ಮೊಹಮ್ಮದ್ ನಲಪಾಡ್ (ಸಂಗ್ರಹ ಚಿತ್ರ)
Updated By: ganapathi bhat

Updated on: Jan 20, 2022 | 12:51 PM

ಬೆಂಗಳೂರು: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಬೆಂಬಲಿಗರಿಂದ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಹಳ್ಳೇಗೌಡ ಈ ಬಗ್ಗೆ ಆರೋಪ ಮಾಡಿದ್ದಾರೆ. ನಿನ್ನೆ (ಜನವರಿ 19) ಖಾಸಗಿ ಹೋಟೆಲ್​​ನಲ್ಲಿ ಯೂತ್ ಕಾಂಗ್ರೆಸ್ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ನಲಪಾಡ್ ಪದಗ್ರಹಣ ವಿಚಾರದ ಬಗ್ಗೆ ಚರ್ಚೆ ಮಾಡಲಾಗಿತ್ತು. ಚರ್ಚೆ ನಂತರ ಸಂಜೆ ಅಮೃತಹಳ್ಳಿಯ ಕ್ಲಬ್​​​ನಲ್ಲಿ ಪಾರ್ಟಿ ನಡೆಸಿದ್ದು, ಪಾರ್ಟಿ ವೇಳೆ ಹಳ್ಳೇಗೌಡನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.

ನಲಪಾಡ್ ಖಾಸಗಿ ಹೋಟೆಲ್ ಒಂದರಲ್ಲಿ ಮಧ್ಯಾಹ್ನ ಗೆಟ್ ಟುಗೆದರ್ ರೀತಿಯಲ್ಲಿ ಪೂರ್ವಭಾವಿ ಸಭೆ ಕರೆದಿದ್ದರು. ಅಲ್ಲಿ ನಲಪಾಡ್ ಮುಂದಿನ ಅಧ್ಯಕ್ಷನಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತೇನೆ ಎಂದು ಪ್ರಸ್ತಾಪಿಸಿದರು. ಮತ್ತು ರಾತ್ರಿ ಯಲಹಂಕದ ಒಂದು ಕ್ಲಬ್ ನಲ್ಲಿ ಭೋಜನಕ್ಕೆ ಕರೆದು, ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ಹಳ್ಳೇಗೌಡ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ್ ಗೌಡ ಅವರ ಸದಸ್ಯ ಎಂದು ತಿಳಿದು ಹಲ್ಲೆ ನಡೆಸಿದ್ದಾರೆ.

ಸಮಯ ನೋಡಿ ‘ಏನು ಲೇ ನೀವು ಮಂಜುಗೌಡಗೆ ಸಪ್ಪೋರ್ಟ್ ಮಾಡುತ್ತೀರಾ’ ಎಂದು ಜಿಲ್ಲಾಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದದಿದೆ. ಮತ್ತು ಅವರ ತಮ್ಮ ಮತ್ತು ಸ್ನೇಹಿತನ ಮೇಲೆ ಹಾಗೂ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿಂದ ಅವರನ್ನು ರಾಜ್ಯ ಉಪಾಧ್ಯಕ್ಷರಾದ ಮಂಜುಗೌಡ ವಾಹನವನ್ನು ಹಿಂಬಾಲಿಸಿ ಬಂದು ಎಲ್ಲರನ್ನೂ ಪ್ರಾಣಾಪಾಯದಿಂದ ಪಾರುಮಾಡಿ ಆ ಸ್ಥಳದಿಂದ ತಪ್ಪಿಸಿ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ. ನಾಲಪಾಡ್ ಸ್ನೇಹಿತರಿಂದ ಮತ್ತು ಕುಟುಂಬ ಸದಸ್ಯರಿಂದ ಜಿಲ್ಲಾಧ್ಯಕ್ಷರಾದ ನನಗೆ ಜೀವ ಬೆದರಿಕೆ ಇದೆ. ಈ ಕುರಿತು ಇಂದು ಬೆಂಗಳೂರಿನಲ್ಲಿ ಸುದ್ದಿ ಗೋಷ್ಠಿ ಕರೆಯಲಿದ್ದೆನೆ ಎಂದು ತಿಳಿಸಲಾಗಿದೆ.

ಘಟನೆಯ ಬಗ್ಗೆ ಮೊಹಮದ್ ನಲಪಾಡ್ ಪ್ರತಿಕ್ರಿಯೆ

ಬೆಂಗಳೂರಿನಲ್ಲಿ ನಿನ್ನೆ ನಾವು ಸಭೆ ಸೇರಿರುವುದು ನಿಜ. ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿದ್ದೇವೆ. ನಿನ್ನೆ ರಾತ್ರಿ ಹುಡುಗರು ಸೇರಿ ಪಾರ್ಟಿ ಮಾಡಿದ್ದಾರೆ. ನಾನು ರಾತ್ರಿ 9.30ರ ಸುಮಾರಿಗೆ ವಾಪಸಾಗಿದ್ದೆ. ಅಲ್ಲಿ ಯಾವುದೇ ರೀತಿಯ ಹಲ್ಲೆ ಘಟನೆ ನಡೆದಿಲ್ಲ. ಬೇಕಿದ್ದರೆ ರೆಸಾರ್ಟ್ ಸಿಸಿ ಕ್ಯಾಮರಾ ಪರಿಶೀಲಿಸಲಿ. ಸಿದ್ದು ಹಳ್ಳೇಗೌಡ, ನಾನು ಚೆನ್ನಾಗಿಯೇ ಇದ್ದೇವೆ ಎಂದು ಈ ಘಟನೆಯ ಬಗ್ಗೆ ಬೆಂಗಳೂರಿನಲ್ಲಿ ಮೊಹಮ್ಮದ್ ನಲಪಾಡ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಗುಜರಿ ಬಸ್ ಜಮೀರು ಸಿದ್ದರಾಮಯ್ಯ ಟೀಂ ವೈಸ್ ಕ್ಯಾಪ್ಟನ್! ಫರ್ಜಿ ಕೆಫೆ ಪುಂಡ ನಲಪಾಡ್ ಡಿಕೆಶಿ ಗ್ಯಾಂಗ್ ವೈಸ್ ಕ್ಯಾಪ್ಟನ್ ಎಂದ ಸಂಸದ ಪ್ರತಾಪ್

ಇದನ್ನೂ ಓದಿ: ನನಗೂ ಶ್ರೀಕಿಗೂ ಪರಿಚಯವಿಲ್ಲ ಅಂದ್ರೆ ತಪ್ಪಾಗುತ್ತದೆ ನನಗೆ ಶ್ರೀಕಿ ಪರಿಚಯವಿದೆ -ಮೊಹಮ್ಮದ್ ಹ್ಯಾರಿಸ್ ನಲಪಾಡ್

Published On - 12:32 pm, Thu, 20 January 22