ನನಗೂ ಶ್ರೀಕಿಗೂ ಪರಿಚಯವಿಲ್ಲ ಅಂದ್ರೆ ತಪ್ಪಾಗುತ್ತದೆ ನನಗೆ ಶ್ರೀಕಿ ಪರಿಚಯವಿದೆ -ಮೊಹಮ್ಮದ್ ಹ್ಯಾರಿಸ್ ನಲಪಾಡ್

ನನಗೂ ಶ್ರೀಕಿಗೂ ಪರಿಚಯವಿಲ್ಲ ಅಂದ್ರೆ ತಪ್ಪಾಗುತ್ತದೆ. ನನಗೆ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪರಿಚಯ ಇದೆ. ನನ್ನ ತಮ್ಮನ ಸ್ನೇಹಿತ ಮನೀಶ್ ಮೂಲಕ ಶ್ರೀಕಿ ಪರಿಚಯವಾಯ್ತು. ಶ್ರೀಕಿ ಹ್ಯಾಕ್ ಮಾಡ್ತಾನೋ ಇಲ್ವೋ ನನಗೆ ಗೊತ್ತಿಲ್ಲ. -ಮೊಹಮ್ಮದ್ ಹ್ಯಾರಿಸ್ ನಲಪಾಡ್

ನನಗೂ ಶ್ರೀಕಿಗೂ ಪರಿಚಯವಿಲ್ಲ ಅಂದ್ರೆ ತಪ್ಪಾಗುತ್ತದೆ ನನಗೆ ಶ್ರೀಕಿ ಪರಿಚಯವಿದೆ -ಮೊಹಮ್ಮದ್ ಹ್ಯಾರಿಸ್ ನಲಪಾಡ್
ಡಿಕೆ ಶಿವಕುಮಾರ್, ಮಹಮ್ಮದ್ ನಲಪಾಡ್
Follow us
TV9 Web
| Updated By: ಆಯೇಷಾ ಬಾನು

Updated on:Nov 14, 2021 | 10:02 AM

ಬೆಂಗಳೂರು: ಶ್ರೀಕಿ ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ದಿನದಿಂದ ದಿನಕ್ಕೆ ಬಿಟ್ ಕಾಯಿನ್ ಕಿತ್ತಾಟ ತಾರಕಕ್ಕೇರಿದೆ. ಒಂದ್ಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ವಿಚಾರವನ್ನ ನಾವ್ ಕೈ ಬಿಡೋದಿಲ್ಲ ಅಂತಾ ಗರ್ಜಿಸ್ತಿದ್ರೆ. ಮತ್ತೊಂದ್ಕಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಟ್ ಕಾಯಿನ್ ಸತ್ಯ ಹೊರಗೆ ಬಂದ್ರೆ ಸರ್ಕಾರ ಉಳಿಯುತ್ತಾ ಅಂತಾ ಸವಾಲ್ ಹಾಕ್ತಿದ್ದಾರೆ. ಸದ್ಯ ನನಗೆ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪರಿಚಯ ಇದೆ ಎಂದು ಟಿವಿ9ಗೆ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿಕೆ ನೀಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿದ ಹ್ಯಾರಿಸ್ ನಲಪಾಡ್, ನನಗೂ ಶ್ರೀಕಿಗೂ ಪರಿಚಯವಿಲ್ಲ ಅಂದ್ರೆ ತಪ್ಪಾಗುತ್ತದೆ. ನನಗೆ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪರಿಚಯ ಇದೆ ಎಂದರು. ನನ್ನ ತಮ್ಮನ ಸ್ನೇಹಿತ ಮನೀಶ್ ಮೂಲಕ ಶ್ರೀಕಿ ಪರಿಚಯವಾಯ್ತು. ಶ್ರೀಕಿ ಹ್ಯಾಕ್ ಮಾಡ್ತಾನೋ ಇಲ್ವೋ ನನಗೆ ಗೊತ್ತಿಲ್ಲ. ಫರ್ಜಿ ಕೆಫೆ ಘಟನೆ ಬಳಿಕ ಶ್ರೀಕಿಗೂ ನನಗೆ ಸಂಬಂಧವಿಲ್ಲ. ಇದನ್ನೇ ಶ್ರೀಕಿ ತನ್ನ ಸ್ವಯಂ ಹೇಳಿಕೆಯಲ್ಲಿ ಹೇಳಿದ್ದಾನೆ. ಬಿಟ್ ಕಾಯಿನ್ ಬಗ್ಗೆ ನಾನು ಎಂದೂ ಚರ್ಚೆ ಮಾಡಿಲ್ಲ. ಬಿಟ್ ಕಾಯಿನ್‌ನಲ್ಲಿ ನಾನು ಭಾಗಿಯಾಗಿದ್ದರೆ ಬಿಡ್ತಿದ್ರಾ? ನಾನು ಯುವುದೇ ತಪ್ಪು ಮಾಡಿಲ್ಲ, ನನಗೇಕೆ ಆತಂಕ? ನಾನು, ಶ್ರೀಕೃಷ್ಣ ಒಂದು ಕೇಸ್‌ನಲ್ಲಿದ್ದೇವೆ ಅಷ್ಟೆ. ಅದು ಬಿಟ್ಟು ನನಗೂ ಅವನಿಗೂ ಯಾವುದೇ ಸಂಬಂಧವಿಲ್ಲ ಎಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ತಿಳಿಸಿದ್ದಾರೆ.

ಇನ್ನು ಕಾಂಗ್ರೆಸ್ ಒಳಗೆ ಮೊಹಮ್ಮದ್ ನಲಪಾಡ್ ವಿರುದ್ಧ ಷಡ್ಯಂತ್ರ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ನಲಪಾಡ್, 2018ರಲ್ಲಿ ಒಂದು ತಪ್ಪಿಗೆ 117 ದಿನಗಳ ಕಾಲ ಜೈಲಿನಲ್ಲಿದ್ದೆ. ನಾನು ಶಾಸಕನ ಪುತ್ರನಾಗಿದ್ದಕ್ಕೆ ದೊಡ್ಡ ವಿಚಾರವಾಗಿತ್ತು. ನಾನು ಹುಷಾರಾಗಿ ಇರಬೇಕಿತ್ತು. ಸಾಮಾನ್ಯ ವ್ಯಕ್ತಿಯಾಗಿದ್ದರೆ 17 ದಿನದಲ್ಲಿ ಹೊರಗೆ ಬರ್ತಿದ್ರು. ನಾನು ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದೆ. ಆದರೆ ಈಗ ಇದೇ ಕೇಸ್ ನನಗೆ ಅಡ್ಡಿಯಾಗಿದೆ ಎಂದರು.

ಇದನ್ನೂ ಓದಿ: ಹೋಟೆಲ್, ಆಲ್ಕೋಹಾಲ್​ಗೆ ದಿನಕ್ಕೆ 3 ಲಕ್ಷ ಖರ್ಚು ಮಾಡುತ್ತಿದ್ದ ಶ್ರೀಕಿಯ ಮೊದಲ ದೊಡ್ಡ ಬಿಟ್​ಕಾಯಿನ್ ಕನ್ನ ನೆದರ್​ಲೆಂಡ್ಸ್​ನಲ್ಲಿ

Published On - 9:16 am, Sun, 14 November 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್