AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಟೆಲ್, ಆಲ್ಕೋಹಾಲ್​ಗೆ ದಿನಕ್ಕೆ 3 ಲಕ್ಷ ಖರ್ಚು ಮಾಡುತ್ತಿದ್ದ ಶ್ರೀಕಿಯ ಮೊದಲ ದೊಡ್ಡ ಬಿಟ್​ಕಾಯಿನ್ ಕನ್ನ ನೆದರ್​ಲೆಂಡ್ಸ್​ನಲ್ಲಿ

ಕರ್ನಾಟಕ ಬಿಟ್​ಕಾಯಿನ್​ ಹಗರಣದ ಪ್ರಮುಖ ಆರೋಪಿ ಶ್ರೀಕಿ ಪೊಲೀಸರ ಮುಂದೆ ಹೇಳಿಕೊಂಡಿರುವುದು ಏನು ಎಂಬ ಬಗ್ಗೆ ಸ್ಫೋಟಕವಾದ ಸಂಗತಿಗಳು ಇಲ್ಲಿವೆ.

ಹೋಟೆಲ್, ಆಲ್ಕೋಹಾಲ್​ಗೆ ದಿನಕ್ಕೆ 3 ಲಕ್ಷ ಖರ್ಚು ಮಾಡುತ್ತಿದ್ದ ಶ್ರೀಕಿಯ ಮೊದಲ ದೊಡ್ಡ ಬಿಟ್​ಕಾಯಿನ್ ಕನ್ನ ನೆದರ್​ಲೆಂಡ್ಸ್​ನಲ್ಲಿ
ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ
TV9 Web
| Edited By: |

Updated on: Nov 13, 2021 | 1:54 PM

Share

ಕರ್ನಾಟಕದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಿಟ್​ಕಾಯಿನ್ ಹಗರಣದ ಆರೋಪಿ ಆಗಿರುವ 26 ವರ್ಷದ ಆರೋಪಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ, ನೆದರ್​ಲೆಂಡ್ಸ್​ನ ಬಿಟ್​ಫಿನೆಕ್ಸ್ ವಿನಿಮಯ ಕೇಂದ್ರವನ್ನು ಎರಡು ಸಲ ಹ್ಯಾಕ್​ ಮಾಡಿದ್ದಾನೆ. “ಬಿಟ್​ಫಿನೆಕ್ಸ್ ನಾನು ಹ್ಯಾಕ್​ ಮಾಡಿದ ದೊಡ್ಡ ಬಿಟ್​ಕಾಯಿನ್​ ವಿನಿಮಯ ಕೇಂದ್ರ. ಆ ಎಕ್ಸ್​ಚೇಂಜ್​ ಎರಡು ಸಲ ಹ್ಯಾಕ್ ಮಾಡಿದೆ. ಮತ್ತು ಹಾಗೆ ಮಾಡಿದ ಮೊದಲ ವ್ಯಕ್ತಿ ನಾನು. ಎರಡನೇ ಘಟನೆ ಸರಳವಾದ ಫೀಷಿಂಗ್ ದಾಳಿ. ಅದರ ಮೂಲಕ ಸೇನೆಗಾಗಿ ಕೆಲಸ ಮಾಡುವ ಇಬ್ಬರು ಇಸ್ರೇಲಿ ಹ್ಯಾಕರ್​ಗಳಿಗೆ. ಉದ್ಯೋಗಿಯೊಬ್ಬರ ಕಂಪ್ಯೂಟರ್​ಗೆ ಸಂಪರ್ಕ ಸಿಗುವಂತಾಯಿತು. ಅದರಿಂದ ಎಡಬ್ಲ್ಯುಎಸ್ ಕ್ಲೌಡ್ ಅಕೌಂಟ್​ಗೆ ಸಂಪರ್ಕ ಸಿಕ್ಕಿತು,” ಎಂದು ಶ್ರೀಕಿ ತನ್ನ ಹೇಳಿಕೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾನೆ.

ತಾನು ಹೇಗೆ ಬಿಟ್​ಕಾಯಿನ್ ಎಕ್ಸ್​ಚೇಂಜ್ ಹ್ಯಾಕ್ ಮಾಡಲು ಸಾಧ್ಯವಾಯಿತು ಎಂಬುದನ್ನು ಆತ ಪೊಲೀಸರಿಗೆ ವಿವರಿಸಿದ್ದಾನೆ. ಡೇಟಾ ಸೆಂಟರ್​ನಲ್ಲಿ ಬಗ್ ಬಳಸಿಕೊಂಡೆ ಆ ಮೂಲಕ ಕರ್ನೆಲ್ ಬೇಸ್ಡ್ ವರ್ಚುವಲ್ ಮಶೀನ್ (KVM) ಸಂಪರ್ಕವು ಸರ್ವರ್​ಗೆ ದೊರೆಯಿತು. ಆ ಸರ್ವರ್​ ಅನ್ನು GRUB ಮೋಡ್​ಗೆ ರೀಬೂಟ್ ಮಾಡಿ, ರೂಟ್ ಪಾಸ್​ವರ್ಡ್ ರೀಸೆಟ್ ಮಾಡಿ, ಲಾಗ್ ಇನ್ ನಂತರ ವಿಥ್​ಡ್ರಾವಲ್ ಸರ್ವರ್ ಪಾಸ್​ವರ್ಡ್​ಗಳನ್ನು ರೀಸೆಟ್ ಮಾಡಿದೆ. ಹಣವನ್ನು ಬಿಟ್​ಕಾಯಿನ್​ ಮೂಲಕವಾಗಿ ನನ್ನ ಬಿಟ್​ಕಾಯಿನ್ ವಿಳಾಸಕ್ಕೆ ರೂಟ್ ಮಾಡಿದೆ ಎಂದಿದ್ದಾನೆ. ಆತ ಹೇಳಿರುವಂತೆ 20,008 ಬಿಟ್​ಕಾಯಿನ್ ಲಾಭ ಮಾಡಿದ್ದಾನೆ.

ಆತ ಹೇಳಿರುವಂತೆ, ನಾನು ಏನನ್ನೂ ಉಳಿಸಿಲ್ಲ. ಆಲ್ಕೋಹಾಲ್​ಗಾಗಿ ಮತ್ತು ಹೋಟೆಲ್​ ಬಿಲ್​ಗಾಗಿ ಸರಾಸರಿ ದಿನಕ್ಕೆ 1ರಿಂದ 3 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದೆ. ಹ್ಯಾಕ್​ ಮಾಡುವ ಸಂದರ್ಭದಲ್ಲಿ ಬಿಟ್​ ಕಾಯಿನ್​ ಬೆಲೆ 100ರಿಂದ 200 ಅಮೆರಿಕನ್ ಡಾಲರ್ ಇದ್ದವು. ಅವುಗಳನ್ನು ಯು.ಕೆ. ಸ್ನೇಹಿತ ಆ್ಯಂಡಿಗೆ ಹಂಚಿಕೊಳ್ಳುತ್ತಿದ್ದೆ ಎಂದಿದ್ದಾನೆ. ಜತೆಗೆ 2019ರಲ್ಲಿ ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್​ಮೆಂಟ್ ಸೈಟ್​ನ ಕೂಡ ಹ್ಯಾಕ್ ಮಾಡಿದ್ದಾಗಿ ಆತ ಹೇಳಿದ್ದಾನೆ.

ನಾವು 2019ರಲ್ಲಿ ಈ ಸೈಟ್ ಹ್ಯಾಕ್ ಮಾಡಿ, ಮೂರು ಪ್ರತ್ಯೇಕ ವರ್ಗಾವಣೆ ಮಾಡಿದೆವು. ಎರಡು ಖಾತೆಯನ್ನು ಹೇಮಂತ್ ಮುದ್ದಪ್ಪ ನನಗೆ ಕೊಟ್ಟ. ಒಂದು ಖಾತೆಯಲ್ಲಿ 18 ಕೋಟಿ, ಮತ್ತೊಂದರಲ್ಲಿ 28 ಕೋಟಿ ರೂಪಾಯಿ ಮಾಡಲಾಯಿತು. ಹೇಮಂತ್ ಹೇಳಿಕೊಂಡಂತೆ, ಅಯೂಬ್ ಎಂಬ ಸಂಸ್ಥೆಯಿಂದ ಆತ 2 ಕೋಟಿ ರೂಪಾಯಿ ಸಂಗ್ರಹಿಸಿದ. ನನಗೆ ಆತ ಯಾರು ಅಂತ ಗೊತ್ತಿಲ್ಲ. ಆದರೆ ಸಿಐಡಿ ಹೇಳುವಂತೆ, ಹೇಮಂತ್ ಮುದ್ದಪ್ಪ 11 ಕೋಟಿ ಸಂಗ್ರಹಿಸಿದ್ದಾನೆ ಎಂದಿದ್ದಾನೆ ಶ್ರೀಕಿ.

ನಾನು ಹಿಮಾಲಯದಲ್ಲಿದ್ದಾಗ ಎರಡನೇ ವರ್ಗಾವಣೆ 28 ಕೋಟಿ ವರ್ಗಾವಣೆ ಆರಂಭಿಸಿದೆ. ಈ ವಹಿವಾಟು ಮುಂಚಿತವಾಗಿಯೇ ರೀಫಂಡ್​ ಆಯಿತು. ಏಕೆಂದರೆ, ಸರ್ಕಾರವು ಇದನ್ನು ವಂಚನೆಯ ವಹಿವಾಟು ಎಂಬುದನ್ನು ಕಂಡುಕೊಂಡಿತು. ಇದರಿಂದ ನನಗೆ ಏನೂ ಲಾಭ ಆಗಿತ್ತು. ಆದರೆ ಈ ಅಪರಾಧದಲ್ಲಿ ಸಕತ್ ಎಂಜಾಯ್ ಮಾಡಿದೆ. ಫೈವ್ ಸ್ಟಾರ್ ಹೋಟೆಲ್​ಗಳಲ್ಲಿ ಉಳಿದುಕೊಂಡೆ ಮತ್ತು ವಿಲಾಸಿ ಜೀವನಶೈಲಿ ಅನುಭವಿಸಿದೆ ಎಂದಿದ್ದಾರೆ. ಅಂದಹಾಗೆ, ಕರ್ನಾಟಕ ಸರ್ಕಾರವು ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ವಹಿಸಿದೆ.

ಇದನ್ನೂ ಓದಿ: Hacker Shreeki: ಬರಿಗಾಲಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬಂದ ಹ್ಯಾಕರ್ ಶ್ರೀಕಿ

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!