Hacker Shreeki: ಬರಿಗಾಲಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗೆ ಬಂದ ಹ್ಯಾಕರ್ ಶ್ರೀಕಿ
ತನ್ನ ಮೇಲೆ ಬಂದಿರುವ ಆರೋಪಗಳನ್ನು ಅಲ್ಲಗೆಳೆದಿರುವ ಶ್ರೀಕೃಷ್ಣ ಜೈಲಿನಿಂದ ಬರಿಗಾಲಿನಲ್ಲೇ ಹೊರ ಬಂದಿದ್ದಾನೆ
ಬೆಂಗಳೂರು: ಬಿಟ್ ಕಾಯಿಲ್ ದಂಧೆಯ ಆರೋಪ ಹೊತ್ತಿರುವ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ (ಶ್ರೀಕಿ) ಬುಧವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ತನ್ನ ಮೇಲೆ ಬಂದಿರುವ ಆರೋಪಗಳನ್ನು ಅಲ್ಲಗೆಳೆದಿರುವ ಶ್ರೀಕೃಷ್ಣ ಜೈಲಿನಿಂದ ಬರಿಗಾಲಿನಲ್ಲೇ ಹೊರ ಬಂದಿದ್ದಾನೆ. ಕರೆದುಕೊಂಡು ಹೋಗಲು ಯಾರು ಬಾರದ ಕಾರಣ ಆಟೊ ಹತ್ತಿದ. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀಕಿ, ‘ನನಗೆ ಜಾಮೀನು ಕೊಟ್ಟವರು ಯಾರು ಎಂಬುದು ಗೊತ್ತಿಲ್ಲ. ನಾನು ಅಂತಹ ಯಾವ ಕೆಲಸವನ್ನೂ ಮಾಡಿಲ್ಲ’ ಎಂದು ಹೇಳಿಕೆ ನೀಡಿದ್ದಾನೆ.
ಹೋಟೆಲ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿಯನ್ನು ಪೊಲೀಸರು ಬಂಧಿಸಿದ್ದರು. ಬಿಟ್ ಕಾಯಿನ್ ಪ್ರಕರಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಜಾಮೀನು ಕೊಡಿಸಿದವರು ಯಾರು ಎಂಬುದೂ ತಿಳಿದಿಲ್ಲ. ದೊಡ್ಡವರು ದೊಡ್ಡ ದೊಡ್ಡವರ ಹೆಸರು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ. ಮಾಧ್ಯಮಗಳಲ್ಲಿ ಸುಮ್ಮನೆ ಹೈಪ್ ಕ್ರಿಯೇಟ್ ಆಗಿದೆ. ನನಗೆ ಏನೂ ಗೊತ್ತಿಲ್ಲ. ದಯವಿಟ್ಟು ನನ್ನನ್ನು ಹಿಂಬಾಲಿಸಬೇಡಿ ಎಂದು ವಿನಂತಿಸಿದ.
4ನೇ ತರಗತಿಯಿಂದಲೂ ಕಂಪ್ಯೂಟರ್ ಆಸಕ್ತಿ ಹ್ಯಾಕರ್ ಶ್ರೀಕಿ ಮೂಲತಃ ಬೆಂಗಳೂರಿನ ಜಯನಗರ ನಿವಾಸಿ. ಗೋಪಾಲ್ ರಮೇಶ್ ಮತ್ತು ಕೌಸಲ್ಯ ದಂಪತಿ ಪುತ್ರ. ಶ್ರೀಕಿ ಬಾಲ್ಯದಲ್ಲೇ ಕಂಪ್ಯೂಟರ್ ಟೆಕ್ನಾಲಜಿ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ. 4 ನೇ ತರಗತಿ ಓದುವಾಗಲೇ ವೆಬ್ ಟೆಕ್ನಾಲಜಿ ಬಗೆಗೆ ಒಲವು ಮೂಡಿತ್ತು. ಗೇಮ್ ಸೃಷ್ಟಿ ಮಾಡುವುದು ಮತ್ತು ರಿವರ್ಸ್ ಇಂಜಿನಿಯರಿಂಗ್ ಬಗ್ಗೆ ತಿಳಿದಿದ್ದ. ಈ ನಿಟ್ಟಿನಲ್ಲಿ ಬಾಲ್ಯದಿಂದ ಕಂಪ್ಯೂಟರ್ ಟೆಕ್ನಾಲಜಿ ಬಗೆಗೆ ನೈಪುಣ್ಯತೆ ಗಳಿಸಲು ಇಚ್ಚಿಸಿದ್ದ ಎಂದು ಪೊಲೀಸರ ತನಿಖೆ ಮೇಳೆ ಶ್ರೀಕಿ ಮಾಹಿತಿ ನೀಡಿದ್ದಾನೆ.
ಶ್ರೀಕಿ ಇಂಟರ್ನ್ಯಾಷನಲ್ ಹ್ಯಾಕರ್ ಆಗಿದ್ದೇಗೆ? ಶ್ರೀಕಿ ತಾನೊಬ್ಬ ಹ್ಯಾಕರ್ ಆಗಬೇಕೆಂದು ಬಾಲ್ಯದಲ್ಲೇ ತೀರ್ಮಾನಿಸಿದ್ದ. ಈ ನಿಟ್ಟಿನಲ್ಲಿ ಬಾಲ್ಯದಲ್ಲೇ IRS(ಇಂಟರ್ ನೆಟ್ ರೆಲೇ ಚಾಟ್)ಮೂಲಕ ಹ್ಯಾಕರ್ ಸಂಪರ್ಕ ಸಾಧಿಸಿದ್ದ. 4 ನೇ ತರಗತಿಯಲ್ಲಿ ಓದುವಾಗ್ಲೆ ‘ಬ್ಲಾಕ್ ಹ್ಯಾಟ್’ ಎಂಬ ಹ್ಯಾಕರ್ಸ್ ತಂಡದ ಸದಸ್ಯನಾಗಿದ್ದ. 6 ವರ್ಷಗಳ ಕಾಲ ಅಂದ್ರೆ 10 ನೇ ತರಗತಿ ವರೆಗೂ ಅದೇ ತಂಡದಲ್ಲಿದ್ದ. 8 ನೇ ತರಗತಿ ವೇಳೆಗೆ ಬ್ಲಾಕ್ ಹ್ಯಾಟ್ ತಂಡದ ಅಡ್ಮಿನಿಸ್ಟ್ರೇಟರ್ ಆಗಿ ಪ್ರಮೋಷನ್ ಕೂಡ ಪಡ್ತೆದಿದ್ದ. ರೋಸ್/ ಬಿಗ್ ಬಾಸ್ ಅನ್ನೋ ನಿಗೂಢ ಹೆಸರಿನ ಮೂಲಕ ಟೀಂ ಲೀಡ್ ಮಾಡ್ತಿದ್ದ. ಸದಸ್ಯರ ವೈಮನಸ್ಸಿನಿಂದ ಬ್ಲಾಕ್ ಹ್ಯಾಟ್ ವಿಭಾಗವಾಯ್ತು. ನಂತರ ಬೇರೊಂದು ತಂಡದೊಂದಿಗೆ ಶ್ರೀಕಿ ಹ್ಯಾಂಕಿಂಗ್ ಮುಂದುವರೆಸಿದ್ದ. ಶಾಲೆಯ ಪುಪಿಲ್ ಪಾಡ್ ವೆಬ್ ಸೈಟ್ ಹ್ಯಾಕ್ ಮಾಡಿ ಸ್ನೇಹಿತರಿಗೆ ಅಟೆಂಡೆನ್ಸ್, ಮಾರ್ಕ್ಸ್ ಕೊಡಿಸಿದ್ನಂತೆ.
ಶ್ರೀಕಿ ವಿವಿ ಪುರಂನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಮಾಡಿದ್ದಾನೆ. ಪಿಯುಸಿಯಲ್ಲಿ ಪಿಸಿಎಂಸಿ ವಿಷಯಗಳನ್ನ ಅಭ್ಯಾಸ ಮಾಡಿದ್ದಾನೆ. ಈ ವೇಳೆ ಸ್ನೇಹಿತರ ಜತೆ ಸೇರಿ ಡ್ರಗ್ಸ್, ಡ್ರಿಂಕ್ಸ್, ಸ್ಮೋಕಿಂಗ್ ಚಟಕ್ಕೆ ದಾಸನಾಗಿದ್ದ. ಅಲ್ಲದೆ ಈ ಕೃತ್ಯಗಳಿಗೆ ಹಣ ಗಳಿಸಲು ಹ್ಯಾಂಕಿಂಗ್ ಮಾಡ್ತಿದ್ದ. ಹ್ಯಾಕಿಂಗ್ ಕೃತ್ಯದ ಮೂಲಕ ಹಣ ಗಳಿಸಲು ದುಶ್ಚಟಗಳೇ ಶ್ರೀಕಿಗೆ ಪ್ರೇರಣೆಯಾಗಿದ್ದವು.
ಇದನ್ನೂ ಓದಿ: ಬಿಟ್ಕಾಯಿನ್ ಕಿಂಗ್ಪಿನ್ ಜಾಗತಿಕ ಹ್ಯಾಕರ್ ಶ್ರೀಕಿ ಪೊಲೀಸರಿಗೆ ಲಾಕ್ ಆಗ್ತಿದ್ದಂತೆ ತನ್ನ ಬಗ್ಗೆ ಹೇಳಿದ್ದೇನು? ಇನ್ಸೈಡ್ ಡಿಟೆಲ್ಸ್ ಇದನ್ನೂ ಓದಿ: ಹಳೇ ಚಾಳಿ ಮುಂದುವರಿಸಿದ್ದಾನಾ ಹ್ಯಾಕರ್ ಶ್ರೀಕಿ? ನ್ಯಾಯಾಲಯದ ಅನುಮತಿ ಪಡೆದು ಲ್ಯಾಪ್‌ಟಾಪ್ ರಿಟ್ರೀವ್ಗೆ ಮುಂದಾದ ಪೊಲೀಸ್
Published On - 3:46 pm, Wed, 10 November 21