ಬಿಟ್​​ಕಾಯಿನ್​ ಕಿಂಗ್​ಪಿನ್​ ಜಾಗತಿಕ ಹ್ಯಾಕರ್​ ಶ್ರೀಕಿ ಪೊಲೀಸರಿಗೆ ಲಾಕ್​ ಆಗ್ತಿದ್ದಂತೆ ತನ್ನ ಬಗ್ಗೆ ಹೇಳಿದ್ದೇನು? ಇನ್​ಸೈಡ್​​ ಡಿಟೆಲ್ಸ್​​

ಹ್ಯಾಕರ್ ಶ್ರೀಕಿ ಮೂಲತಃ ಬೆಂಗಳೂರಿನ ಜಯನಗರ ನಿವಾಸಿ. ಗೋಪಾಲ್ ರಮೇಶ್ ಮತ್ತು ಕೌಸಲ್ಯ ದಂಪತಿ ಪುತ್ರ. ಶ್ರೀಕಿ ಬಾಲ್ಯದಲ್ಲೇ ಕಂಪ್ಯೂಟರ್ ಟೆಕ್ನಾಲಜಿ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ. 4 ನೇ ತರಗತಿ ಓದುವಾಗಲೇ ವೆಬ್ ಟೆಕ್ನಾಲಜಿ ಬಗೆಗೆ ಒಲವು ಮೂಡಿತ್ತು.

ಬಿಟ್​​ಕಾಯಿನ್​ ಕಿಂಗ್​ಪಿನ್​  ಜಾಗತಿಕ ಹ್ಯಾಕರ್​ ಶ್ರೀಕಿ ಪೊಲೀಸರಿಗೆ ಲಾಕ್​ ಆಗ್ತಿದ್ದಂತೆ ತನ್ನ ಬಗ್ಗೆ ಹೇಳಿದ್ದೇನು? ಇನ್​ಸೈಡ್​​ ಡಿಟೆಲ್ಸ್​​
ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ
Follow us
| Updated By: ಆಯೇಷಾ ಬಾನು

Updated on:Nov 10, 2021 | 9:25 AM

ಬೆಂಗಳೂರು: ಸ್ಟಾರ್ ಹೋಟೇಲ್ನಲ್ಲಿ ಪುಂಡಾಟ ಮಾಡಿ ಅರೆಸ್ಟ್ ಆದ ಹ್ಯಾಕರ್ ಶ್ರೀಕಿ ಮತ್ತೊಂದು ಅಸಲಿಯತ್ತು ಪೊಲೀಸರ ತನಿಖೆ ವೇಳೆ ರಿವೀಲ್ ಆಗಿದೆ. ಪೊಲೀಸರ ವಿಚಾರಣೆ ವೇಳೆ ಇಂಟರ್ನ್ಯಾಷನಲ್ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಬಿಟ್ ಕಾಯಿನ್ ದಂಧೆ ಬಗ್ಗೆ ಹಾಗೂ ತನಗೂ ಅದಕ್ಕೂ ಇರುವ ನಂಟನ್ನು ರಿವಿಲ್ ಮಾಡಿದ್ದಾನೆ. ಇಲ್ಲಿದೆ ಅವನ ಇನ್ಸೈಡ್ ಡಿಟೇಲ್ಸ್.

ಹ್ಯಾಕರ್ ಶ್ರೀಕಿ ಮೂಲತಃ ಬೆಂಗಳೂರಿನ ಜಯನಗರ ನಿವಾಸಿ. ಗೋಪಾಲ್ ರಮೇಶ್ ಮತ್ತು ಕೌಸಲ್ಯ ದಂಪತಿ ಪುತ್ರ. ಶ್ರೀಕಿ ಬಾಲ್ಯದಲ್ಲೇ ಕಂಪ್ಯೂಟರ್ ಟೆಕ್ನಾಲಜಿ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ. 4 ನೇ ತರಗತಿ ಓದುವಾಗಲೇ ವೆಬ್ ಟೆಕ್ನಾಲಜಿ ಬಗೆಗೆ ಒಲವು ಮೂಡಿತ್ತು. ಗೇಮ್ ಸೃಷ್ಟಿ ಮಾಡುವುದು ಮತ್ತು ರಿವರ್ಸ್ ಇಂಜಿನಿಯರಿಂಗ್ ಬಗ್ಗೆ ತಿಳಿದಿದ್ದ. ಈ ನಿಟ್ಟಿನಲ್ಲಿ ಬಾಲ್ಯದಿಂದ ಕಂಪ್ಯೂಟರ್ ಟೆಕ್ನಾಲಜಿ ಬಗೆಗೆ ನೈಪುಣ್ಯತೆ ಗಳಿಸಲು ಇಚ್ಚಿಸಿದ್ದ ಎಂದು ಪೊಲೀಸರ ತನಿಖೆ ಮೇಳೆ ಶ್ರೀಕಿ ಮಾಹಿತಿ ನೀಡಿದ್ದಾನೆ.

ಶ್ರೀಕಿ ಇಂಟರ್ನ್ಯಾಷನಲ್ ಹ್ಯಾಕರ್ ಆಗಿದ್ದೇಗೆ? ಶ್ರೀಕಿ ತಾನೊಬ್ಬ ಹ್ಯಾಕರ್ ಆಗಬೇಕೆಂದು ಬಾಲ್ಯದಲ್ಲೇ ತೀರ್ಮಾನಿಸಿದ್ದ. ಈ ನಿಟ್ಟಿನಲ್ಲಿ ಬಾಲ್ಯದಲ್ಲೇ IRS(ಇಂಟರ್ ನೆಟ್ ರೆಲೇ ಚಾಟ್)ಮೂಲಕ ಹ್ಯಾಕರ್ ಸಂಪರ್ಕ ಸಾಧಿಸಿದ್ದ. 4 ನೇ ತರಗತಿಯಲ್ಲಿ ಓದುವಾಗ್ಲೆ ‘ಬ್ಲಾಕ್ ಹ್ಯಾಟ್’ ಎಂಬ ಹ್ಯಾಕರ್ಸ್ ತಂಡದ ಸದಸ್ಯನಾಗಿದ್ದ. 6 ವರ್ಷಗಳ ಕಾಲ ಅಂದ್ರೆ 10 ನೇ ತರಗತಿ ವರೆಗೂ ಅದೇ ತಂಡದಲ್ಲಿದ್ದ. 8 ನೇ ತರಗತಿ ವೇಳೆಗೆ ಬ್ಲಾಕ್ ಹ್ಯಾಟ್ ತಂಡದ ಅಡ್ಮಿನಿಸ್ಟ್ರೇಟರ್ ಆಗಿ ಪ್ರಮೋಷನ್ ಕೂಡ ಪಡ್ತೆದಿದ್ದ. ರೋಸ್/ ಬಿಗ್ ಬಾಸ್ ಅನ್ನೋ ನಿಗೂಢ ಹೆಸರಿನ ಮೂಲಕ ಟೀಂ ಲೀಡ್ ಮಾಡ್ತಿದ್ದ. ಸದಸ್ಯರ ವೈಮನಸ್ಸಿನಿಂದ ಬ್ಲಾಕ್ ಹ್ಯಾಟ್ ವಿಭಾಗವಾಯ್ತು. ನಂತರ ಬೇರೊಂದು ತಂಡದೊಂದಿಗೆ ಶ್ರೀಕಿ ಹ್ಯಾಂಕಿಂಗ್ ಮುಂದುವರೆಸಿದ್ದ. ಶಾಲೆಯ ಪುಪಿಲ್ ಪಾಡ್ ವೆಬ್ ಸೈಟ್ ಹ್ಯಾಕ್ ಮಾಡಿ ಸ್ನೇಹಿತರಿಗೆ ಅಟೆಂಡೆನ್ಸ್, ಮಾರ್ಕ್ಸ್ ಕೊಡಿಸಿದ್ನಂತೆ.

ಶ್ರೀಕಿ ವಿವಿ ಪುರಂನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಮಾಡಿದ್ದಾನೆ. ಪಿಯುಸಿಯಲ್ಲಿ ಪಿಸಿಎಂಸಿ ವಿಷಯಗಳನ್ನ ಅಭ್ಯಾಸ ಮಾಡಿದ್ದಾನೆ. ಈ ವೇಳೆ ಸ್ನೇಹಿತರ ಜತೆ ಸೇರಿ ಡ್ರಗ್ಸ್, ಡ್ರಿಂಕ್ಸ್, ಸ್ಮೋಕಿಂಗ್ ಚಟಕ್ಕೆ ದಾಸನಾಗಿದ್ದ. ಅಲ್ಲದೆ ಈ ಕೃತ್ಯಗಳಿಗೆ ಹಣ ಗಳಿಸಲು ಹ್ಯಾಂಕಿಂಗ್ ಮಾಡ್ತಿದ್ದ. ಹ್ಯಾಕಿಂಗ್ ಕೃತ್ಯದ ಮೂಲಕ ಹಣ ಗಳಿಸಲು ದುಶ್ಚಟಗಳೇ ಶ್ರೀಕಿಗೆ ಪ್ರೇರಣೆಯಾಗಿದ್ದವು.

ಹ್ಯಾಕರ್ ಶ್ರೀಕಿ ಮೊದಲ ಹ್ಯಾಕ್ ಮಾಡಿದ್ದು ಯಾವಾಗ ಗೊತ್ತಾ? ಪಿಯುಸಿಯಲ್ಲಿ ಓದುವಾಗ್ಲೆ ಶ್ರೀಕಿ ಅನ್ ಲೈನ್ ಮನಿ ಟ್ರಾನ್ಸ್ ಫರ್ ಖಾತೆಗೆ ಸ್ಕೆಚ್ ಹಾಕಿದ್ದ. ಪೇಪಾಲ್ ಮನಿ ಟ್ರಾನ್ಸ್ ಫರ್ ಅಕೌಂಟ್ಗೆ ಕನ್ನಾ ಹಾಕಿದ್ದ. ಆಸ್ಟ್ರೇಲಿಯಾದ ತನ್ನ ಸ್ನೇಹಿತ ಶಾನೆ ಡುಫೈ ಎಂಬಾತನ ಜತೆ ಸೇರಿ ಮೊದಲ ಹ್ಯಾಕ್ ಮಾಡಿದ್ದ. ಗೇಮಿಂಗ್ ಆಪ್ಗಳನ್ನ ಹ್ಯಾಕ್ ಮಾಡಿ ಹಣ ಎಗರಿಸಿ ಪೇಪಾಲ್ ಅನ್ ಲೈನ್ ಮನಿ ಟ್ರಾನ್ಸ್ ಫರ್ ಅಕೌಂಟ್ಗೆ ವರ್ಗಾವಣೆ ಮಾಡ್ತಿದ್ದ.

ಇನ್ನು ಶ್ರೀಕಿ ಸ್ಟಾರ್ ಹೋಟೆಲ್ಗಳಲ್ಲಿ ಬಿಟ್ ಕಾಯಿನ್ ಅಬೇಸ್ ಮಾಡ್ತಿದ್ದ. ಶ್ರೀಕಿಗೆ ಕಾಲೇಜು ದಿನಗಳಲ್ಲೇ ಬಿಟ್ ಕಾಯಿನ್ ಧಂದೆ ಬಗ್ಗೆ ಅರಿವಿತ್ತು. ಬಿಟ್ ಕಾಯಿನ್ ಏಜೆನ್ಸಿಗಳನ್ನೇ ಹ್ಯಾಕ್ ಮಾಡ್ತಿದ್ದ. ಡಾರ್ಕ್ ನೆಟ್ ಮೂಲಕ ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ಇಂಚಿಂಚೂ ಮಾಹಿತಿ ಅರಿತಿದ್ದ. ಅನ್ ಲೈನ್ ಮನಿ ಟ್ರಾನ್ಸ್ ಫರ್ ಏಜೆನ್ಸಿಗಳನ್ನೇ ಮೊದಲಿಗೆ ಟಾರ್ಗೇಟ್ ಮಾಡ್ತಿದ್ದ. ಈ ಮೂಲಕ ಸುಲಭವಾಗಿ ಹಣ ಗಳಿಸಿ ಐಷಾರಾಮಿ ಜೀವನ ನಡೆಸ್ತಾ ದುಂದುವೆಚ್ಚ ಮಾಡ್ತಿದ್ದ. ಡ್ರಗ್ ನಶೆ ಏರಿಸಿಕೊಳ್ಳಲು ಹ್ಯಾಂಕಿಂಗ್ ಮುಂದುವರೆಸಿದ್ದ ಶ್ರೀಕಿ ಡಾರ್ಕ್ ನೆಟ್ ಮೂಲಕ‌ ಡ್ರಗ್ ಡೀಲ್ ಮಾಡ್ತಿದ್ದ.

ಒಮ್ಮೆ ತನ್ನ ವ್ಯಸನಗಳಿಂದ ಬೇಸತ್ತು 17 ವಯಸ್ಸಿನಲ್ಲಿ ಮನೆ ಬಿಟ್ಟು ಹಿಮಾಲಯಕ್ಕೆ ಹೋಗಿದ್ದ. ತನ್ನ ಸ್ನೇಹಿತ ಜತೆಗೆ ಬದರಿನಾಥ ಕ್ಷೇತ್ರಕ್ಕೆ ಹೋಗಿದ್ದ. ಈ ಸಂಬಂಧ ಸಿದ್ದಾಪುರ ಮತ್ತು ತಿಲಕ ನಗರ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದು ಪೋಲಿಸರು ಶ್ರೀ ಕೃಷ್ಣ ನನ್ನ ಪತ್ತೆಮಾಡಿ ಬೆಂಗಳೂರಿಗೆ ಕರೆತಂದು ಪೋಷಕರಿಗೆ ಒಪ್ಪಿಸಿದ್ರು. ಬಳಿಕ ಉನ್ನತ ವಿದ್ಯಾಭ್ಯಾಸಕ್ಕೆಂದು ನೆದರ್ ಲ್ಯಾಂಡ್ಗೆ ಕಳುಹಿಸಿದ್ರು. ಆದ್ರೆ ಶ್ರೀಕಿ ಪೋಷಕರ ಆಸೆಗೆ ನೀರೆರಚಿ ನೆದರ್ ಲ್ಯಾಂಡ್ನಲ್ಲಿ ಸೈಬರ್ ಕೃತ್ಯಕ್ಕೆ ತಂಡ ಮಾಡಿಕೊಂಡು ಬಿಟ್ ಕಾಯಿನ್ ವ್ಯವಹಾರ ಮುಂದುವರೆಸಿದ್ದ.

ಇನ್ನು 2018ರ ಹೈಪ್ರೊಪೈಲ್ ಕೇಸ್ ನಲ್ಲಿ ಶ್ರೀಕಿ ಆರೋಪಿಯಾಗಿದ್ದ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿದ್ವತ್ ಮೇಲಿನ ಹಲ್ಲೆ ಬಗ್ಗೆ ಕೇಸ್ ದಾಖಲಾಗಿತ್ತು. ಇದರಲ್ಲಿ ಶ್ರೀಕಿ ಆರೋಪಿಯಾಗಿದ್ದ. ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹ್ಯಾರಿಸ್‌ ಅಂಡ್ ಗ್ಯಾಂಗ್ ಯುಬಿ ಸಿಟಿ ಫರ್ಜಿ ಕೆಫೆಯಲ್ಲಿ ವಿದ್ವತ್ ಗೆ ಹಲ್ಲೆ ಮಾಡಿದ್ದರು. ಈ ಕೇಸ್ನಲ್ಲಿ ನಲಪಾಡ್ ಜೊತೆ ಅರೋಪಿ ಲೀಸ್ಟ್ನಲ್ಲಿ ಶ್ರೀಕಿ ಸಹ ಇದ್ದ. ಶ್ರೀಕಿ ಎ8 ಅರೋಪಿಯಾಗಿದ್ದ. ನಲಪಾಡ್ ಅರೆಸ್ಟ್ ಆಗಿದ್ರು ಸಹಿತ ಕೃಷ್ಣ ಅರೆಸ್ಟ್ ಅಗಿರಲಿಲ್ಲ.

ನಲಪಾಡ್ ನೂರು ದಿನ ಜೈಲಿನಲ್ಲಿದ್ದ ಬಳಿಕ ಬೇಲ್ ಪಡೆದಿದ್ದ. ಅದ್ರೆ ಕೃಷ್ಣ ಒಂದೇ ಒಂದು ದಿನ ಸಹ ಜೈಲಿಗೆ ಹೋಗಿರಲಿಲ್ಲ. ಶ್ರೀಕಿ ಬೆಂಗಳೂರಿನಲ್ಲಿ ಗಲಾಟೆ ಬಳಿಕ ಬಸ್ ಮೂಲಕ ಹೈದ್ರಾಬಾದ್ ತೆರಳಿದ್ದ. ಹೈದ್ರಾಬಾದ್ ನಲ್ಲಿ ಓರ್ವ ವ್ಯಕ್ತಿಯಿಂದ ಹಣ ಪಡೆದಿದ್ದ. ಹಣ ಪಡೆದ ಬಳಿಕ ಬಸ್ ಮೂಲಕವೇ ಕೇದಾರನಾಥಕ್ಕೆ ತೆರಳಿದ್ದ. ಅಲ್ಲಿಂದ ಹಿಮಾಲಯದ ತಪ್ಪಲಿನಲ್ಲಿರುವ ಒಂದು ಪುಟ್ಟ ಹಳ್ಳಿಗೆ ಹೋಗಿದ್ದ. ನೂರ ಹತ್ತು ದಿನಗಳ ಕಾಲ ಹಳ್ಳಿಯಲ್ಲಿ ಇದ್ದ. ಹಿಮಾಲಯದ ತಪ್ಪಲಿನ ಹಳ್ಳಿಯಲ್ಲಿ ಇರುವಾಗಲೂ ಸುನೀಶ್ ಹೆಗ್ಡೆ ಜೊತೆಗೆ ಸಂಪರ್ಕ ದಲ್ಲಿದ್ದ. ನಲಪಾಡ್ಗೆ ಜಾಮೀನು ಸಿಕ್ಕ ಬಳಿಕ ಶ್ರೀಕಿಗೂ ಬೇಲ್ ಸಿಕ್ಕಿತ್ತು. ನಂತ್ರ ಬೆಂಗಳೂರಿಗೆ ಬರುವಂತೆ ಸುನೀಶ್ ಸೂಚಿಸಿದ್ದ. ಜಾಮೀನು ನಂತರ ಬೆಂಗಳೂರಿಗೆ ಬಂದು ಪೊಲೀಸರಿಗೆ ಹೇಳಿಕೆ ನೀಡಿದ್ದ.

ಇದನ್ನೂ ಓದಿ: ಹಳೇ ಚಾಳಿ ಮುಂದುವರಿಸಿದ್ದಾನಾ ಹ್ಯಾಕರ್ ಶ್ರೀಕಿ? ನ್ಯಾಯಾಲಯದ ಅನುಮತಿ ಪಡೆದು ಲ್ಯಾಪ್‌ಟಾಪ್ ರಿಟ್ರೀವ್​ಗೆ ಮುಂದಾದ ಪೊಲೀಸ್

Published On - 9:20 am, Wed, 10 November 21

‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’