ಹಳೇ ಚಾಳಿ ಮುಂದುವರಿಸಿದ್ದಾನಾ ಹ್ಯಾಕರ್ ಶ್ರೀಕಿ? ನ್ಯಾಯಾಲಯದ ಅನುಮತಿ ಪಡೆದು ಲ್ಯಾಪ್‌ಟಾಪ್ ರಿಟ್ರೀವ್​ಗೆ ಮುಂದಾದ ಪೊಲೀಸ್

ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದಾನಾ ಎಂಬ ಅನುಮಾನ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಹೋಟೆಲ್‌ಗೆ ಹೋಗಿರಬಹುದೆಂಬ ಅನುಮಾನ ಹುಟ್ಟಿಕೊಂಡಿದೆ. ಹೋಟೆಲ್ ರೂಂನಲ್ಲಿದ್ದ ಲ್ಯಾಪ್‌ಟಾಪ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀಕೃಷ್ಣನ ಲ್ಯಾಪ್‌ಟಾಪ್ ರಿಟ್ರೀವ್‌ಗೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದಿದ್ದಾರೆ.

ಹಳೇ ಚಾಳಿ ಮುಂದುವರಿಸಿದ್ದಾನಾ ಹ್ಯಾಕರ್ ಶ್ರೀಕಿ? ನ್ಯಾಯಾಲಯದ ಅನುಮತಿ ಪಡೆದು ಲ್ಯಾಪ್‌ಟಾಪ್ ರಿಟ್ರೀವ್​ಗೆ ಮುಂದಾದ ಪೊಲೀಸ್
ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ

ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ವಿಷ್ಣು ಭಟ್, ಶ್ರೀಕೃಷ್ಣನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿ ಅನೇಕ ವಿಚಾರಗಳ ಬಗ್ಗೆ ಬಾಯ್ಬಿಡಿಸುತ್ತಿದ್ದಾರೆ. ಸದ್ಯ ಈಗ ವಿಷ್ಣು ಭಟ್‌ಗೂ ಶ್ರೀಕೃಷ್ಣಗೂ ಏನು ಸಂಬಂಧ, ಕುಡಿದ ನಶೆಯಲ್ಲಿ ಸ್ಟಾರ್ ಹೋಟೆಲ್ಗೆ ಶ್ರೀಕೀಯನ್ನ ವಿಷ್ಣು ಹುಡುಕಿ ಬಂದದ್ದು ಏಕೆ? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಬೆಂಗಳೂರಿನ ಜೆ.ಬಿ.ನಗರ ಠಾಣೆ ಪೊಲೀಸರು ವಿಷ್ಣು ಭಟ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರಗ್ಸ್ ನಶೆಯಲ್ಲಿ ವಿಷ್ಣು ಭಟ್ ಹೋಟೆಲ್‌ಗೆ ಹೋಗಿದ್ದ. ಆದ್ರೆ ಯಾವ ಕಾರಣಕ್ಕೆ ಶ್ರೀಕೃಷ್ಣನಿಗಾಗಿ ವಿಷ್ಣು ಭಟ್ ಹೋಗಿದ್ದನು ಎಂಬ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಈ ಬಗ್ಗೆ ಜೆ.ಬಿ.ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೋಲಿಸರ ವಿಚಾರಣೆ ವೇಳೆ ಡ್ರಗ್ಸ್ ಪೂರೈಸಿದ ವ್ಯಕ್ತಿ ಬಗ್ಗೆ ವಿಷ್ಣು ಭಟ್ ಮಾಹಿತಿ ಬಾಯ್ಬಿಟ್ಟಿದ್ದಾನೆ. ಡ್ರಗ್ಸ್ ಪೂರೈಸುತ್ತಿದ್ದ ಪೆಡ್ಲರ್‌ಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನ ಮೇಲೆ ಅನುಮಾನ ಇನ್ನು ಮತ್ತೊಂದೆಡೆ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದಾನಾ ಎಂಬ ಅನುಮಾನ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಹೋಟೆಲ್‌ಗೆ ಹೋಗಿರಬಹುದೆಂಬ ಅನುಮಾನ ಹುಟ್ಟಿಕೊಂಡಿದೆ. ಹೋಟೆಲ್ ರೂಂನಲ್ಲಿದ್ದ ಲ್ಯಾಪ್‌ಟಾಪ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀಕೃಷ್ಣನ ಲ್ಯಾಪ್‌ಟಾಪ್ ರಿಟ್ರೀವ್‌ಗೆ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದಿದ್ದಾರೆ. ಶ್ರೀಕೃಷ್ಣನ ಲ್ಯಾಪ್‌ಟಾಪ್ ರಿಟ್ರೀವ್ ವೇಳೆ ಕ್ರಿಪ್ಟೋ ಕರೆನ್ಸಿ, ಬಿಟ್ ಕಾಯಿನ್ ವ್ಯವಹಾರ ಕಂಡು ಬಂದರೆ ಪೊಲೀಸರು ಶ್ರೀಕಿಗೆ ಮತ್ತೆ ಚಳಿಬಿಡಿಸಲಿದ್ದಾರೆ.

ಶ್ರೀಕಿ ಈ ಹಿಂದೆ ಹಲವು ಬಾರಿ ಸ್ಟಾರ್ ಹೋಟೆಲ್ನಲ್ಲಿ ತಂಗಿದ್ದಾಗ ಇದೇ ಕೃತ್ಯ ಎಸಗಿದ್ದ. ಸರ್ಕಾರದ ಇ-ಪ್ರಕ್ಯೂರ್ ಮೆಂಟ್ ವೆಬ್ ಸೈಟ್ ಸೇರಿದಂತೆ ಪ್ರತಿಷ್ಟಿತ ಕಂಪೆನಿಗಳ ಡಾಟಾ ಕದ್ದಿದ್ದ. ಬಳಿಕ ಬ್ಲಾಕ್ ಮೇಲ್ ಮಾಡಿದ್ದರ ಬಗ್ಗೆ ಸಿಸಿಬಿ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿತ್ತು. ಕಳೆದ ಫೆಬ್ರವರಿಯಲ್ಲಿ 1 ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆ ಶ್ರೀಕಿ ಲ್ಯಾಪ್ ಟಾಪ್ ರಿಟ್ರೀವ್ ಮಾಡಲಿದ್ದಾರೆ.

ಇದನ್ನೂ ಓದಿ: ಇಂದು ಕೋರ್ಟ್‌ಗೆ ಹಾಜರಾಗಲಿರುವ ಹ್ಯಾಕರ್ ಶ್ರೀಕಿ ಮತ್ತು ಭೀಮಾ ಜ್ಯುವೆಲ್ಲರ್ಸ್ ಮಾಲೀಕನ ಪುತ್ರ ವಿಷ್ಣು ಭಟ್

Click on your DTH Provider to Add TV9 Kannada