ಇಂದು ಕೋರ್ಟ್‌ಗೆ ಹಾಜರಾಗಲಿರುವ ಹ್ಯಾಕರ್ ಶ್ರೀಕಿ

ವಿಷ್ಣು ಭಟ್, ಶ್ರೀಕೃಷ್ಣಗೆ ಒಂದು ದಿನ ನ್ಯಾಯಾಂಗ ಬಂಧನವಾಗಿದ್ದು ಪೊಲೀಸರು ಆರೋಪಿಗಳಿಬ್ಬರನ್ನೂ ಇಂದು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

ಇಂದು ಕೋರ್ಟ್‌ಗೆ ಹಾಜರಾಗಲಿರುವ ಹ್ಯಾಕರ್ ಶ್ರೀಕಿ
ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Dec 08, 2021 | 1:20 PM

ಬೆಂಗಳೂರು: ನಗರದ ಹೋಟೆಲ್ನಲ್ಲಿ ವೆಬ್ಸೈಟ್ಗಳ ಹ್ಯಾಕರ್ ಶ್ರೀಕಿಯನ್ನು ಬಂಧಿಸಿ  ಡ್ರಿಲ್ ನಡೆಸ್ತಿದ್ದಾರೆ. ಅಲ್ದೆ, ಖಾಸಗಿ ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ಸಂಬಂಧ ಹ್ಯಾಕರ್ ಶ್ರೀಕೃಷ್ಣ ನಶೆಯಲ್ಲಿದ್ರು ಅನ್ನೋದು ಗೊತ್ತಾಗಿದೆ. ಇವತ್ತು ಮತ್ತೆ ಇವರನ್ನು ಕೋರ್ಟ್ ಮುಂದೆ ಹಾಜರು ಪಡಿಸಲಾಗುತ್ತಿದೆ.

ಜೀವನ್ ಭೀಮಾನಗರದ ಸ್ಟಾರ್ ಹೋಟೆಲ್ ಸಿಬ್ಬಂದಿಗೆ ಹಲ್ಲೆ ಮಾಡಿದ ಕೇಸ್ನಲ್ಲಿ ಶ್ರೀಕಿ ಪೊಲೀಸರ ಅತಿಥಿಯಾಗಿದ್ದಾರೆ. ವಿಚಾರಣೆ ವೇಳೆ ಬಹಳಷ್ಟು ವಿಚಾರ ಬಹಿರಂಗವಾಗಿದೆ. ಸದ್ಯ ಶ್ರೀಕೃಷ್ಣಗೆ ಒಂದು ದಿನ ನ್ಯಾಯಾಂಗ ಬಂಧನವಾಗಿದ್ದು ಪೊಲೀಸರು ಆರೋಪಿಗಳಿಬ್ಬರನ್ನೂ ಇಂದು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

ಜೆ.ಬಿ.ನಗರ ಪೊಲೀಸರು ನಿನ್ನೆ ಸಂಜೆ ಆರೋಪಿಗಳನ್ನು ನ್ಯಾಯಾಧೀಶರ ನಿವಾಸದಲ್ಲಿ ಜಡ್ಜ್‌ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್‌ನಲ್ಲಿ ಹಾಜರುಪಡಿಸುವಂತೆ ಸೂಚನೆ ಸಿಕ್ಕಿತ್ತು. ಇದೇ ವೇಳೆ 1 ದಿನ ನ್ಯಾಯಾಂಗ ಬಂಧನಕ್ಕೆ ಜಡ್ಜ್ ಆದೇಶಿಸಿದ್ದರು. ಹೀಗಾಗಿ ಪೊಲೀಸರು ಆರೋಪಿಯನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ಶ್ರೀಕಿ ಡ್ರಗ್ಸ್ ಸೇವನೆ ಕನ್ಫರ್ಮ್ ಆರೋಪಿಯು ಆಲ್ಕೋಹಾಲ್ ಟೆಸ್ಟ್ ಹಾಗೂ ನಾರ್ಕೋಟಿಕ್ ಟೆಸ್ಟ್ ಪರೀಕ್ಷೆ ನಡೆಸಲಾಗಿದೆ. ಇದ್ರಲ್ಲಿ ಇಂಟರ್ ನ್ಯಾಷನಲ್ ಹ್ಯಾಕರ್ ಆಗಿರೋ ಶ್ರೀಕಿ ಡ್ರಗ್ಸ್ ಸೇವಿಸಿರೋದು ಕನ್ಫರ್ಮ್ ಆಗಿದೆ. ಈ ಸಂಬಂಧ ಎನ್ಡಿಪಿಎಸ್ ಆಕ್ಟ್ನಡಿ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮತ್ತುಷ್ಟು ಚುರುಕುಗೊಳಿಸಿದ್ದಾರೆ.

Published On - 7:27 am, Mon, 8 November 21