ಪುನೀತ್ 11ನೇ ದಿನದ ತಿಥಿ ಇಂದು: ಅಪ್ಪನ ಅಗಲಿಕೆಯ ನೋವಲ್ಲಿ ಪರೀಕ್ಷೆ ಬರೆಯಲಿರೋ ಪುನೀತ್ ರಾಜ್ಕುಮಾರ್ ಪುತ್ರಿ ವಂದಿತಾ
ಕನ್ನಡಿಗರ ಪ್ರೀತಿಯ ನಟ ಪುನೀತ್ ರಾಜಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಇಂದು. ಆದರೆ ಇಂದೇ ಅವರ ಎರಡನೆಯ ಪುತ್ರಿ ವಂದಿತಾ 10ನೆಯ ತರಗತಿ ಸೆಮಿಸ್ಟರ್ ಪರೀಕ್ಷೆ ಬೆರಯಬೇಕಿದೆ. ಮತ್ತು ಅಪ್ಪನ ಆಶೋತ್ತರದಂತೆ ಅಪಾರ ನೋವಿನ ನಡುವೆಯೂ ವಂದಿತಾ ಎಕ್ಸಾಂ ಬರೆಯಲು ಮುಂದಾಗಿದ್ದಾಳೆ.
ಬೆಂಗಳೂರು: ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ಹನ್ನೊಂದನೇ ದಿನ. ಹೀಗಾಗಿ, ಇಂದು ಅಪ್ಪು ಕುಟುಂಬಸ್ಥರು 11ನೇ ದಿನ ಕಾರ್ಯ ನಡೆಸಲಿದ್ದಾರೆ. ಆದ್ರೆ ಅಪ್ಪ ಜೊತೆಗಿಲ್ಲ ಎಂಬ ನೋವಲ್ಲೂ ಅಪ್ಪು ಮಗಳು ವಂದಿತಾ ಪರೀಕ್ಷೆ ಬರೆಯುವಂತಹ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರಿನ ಪ್ಯಾಲೇಸ್ ರಸ್ತೆಯ ಸೋಫಿಯಾ ಶಾಲೆಯಲ್ಲಿ ICSE 10th ತರಗತಿಯಲ್ಲಿ ಓದುತ್ತಿರೊ ವಂದಿತಾಳಿಗೆ ಮುಂದಿನ ವಾರದಲ್ಲಿ ICSE 10th ಸೆಮಿಸ್ಟರ್ ಎಕ್ಸಾಂ ಹಿನ್ನಲೆ ಇಂದಿನಿಂದ ICSE 10th ಪೂರ್ತ ತಯಾರಿ ಎಕ್ಸಾಂ ಆರಂಭವಾಗಿದೆ. ಹೀಗಾಗಿ ತಂದೆಯ 11ನೇ ದಿನದ ಕಾರ್ಯದ ನಡುವೆಯೂ ಪರೀಕ್ಷೆಯನ್ನು ತಪ್ಪಿಸದೆ ವಂದಿತಾ ಪರೀಕ್ಷೆಗೆ ಹಾಜರಾಗಲಿದ್ದಾಳೆ. ಅಪ್ಪನ ಅಗಲಿಕೆಯ ನೋವಿನಲ್ಲಿ ಪರೀಕ್ಷೆ ಬರೆಯಲು ವಂದಿತಾ ಮುಂದಾಗಿದ್ದಾಳೆ.
ಪುನೀತ್ ರಾಜಕುಮಾರ್ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ರು. ಕಲಿಕೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕಾಳಜಿ ವಹಿಸಿದ್ರು. ತಂದೆಯ ಆಸೆಯಂತೆ ನೋವಿನ ನಡುವೆಯೂ ಎಕ್ಸಾಂ ಬರೆಯಲು ವಂದಿತಾ ಮನಸ್ಸು ಮಾಡಿದ್ದಾಳೆ. ಇಂದಿನಿಂದ ICSE 10th ಪೂರ್ತ ತಯಾರಿ ಎಕ್ಸಾಂ ಆರಂಭವಾಗಿದೆ. ಆಫ್ ಲೈನ್ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದೆ. ಪುನೀತ್ ರಾಜ್ಕುಮಾರ್ ಮಗಳು ವಂದಿತಾಗೆ ಎಕ್ಸಾಂ ಇರುವ ಹಿನ್ನಲೆಯಲ್ಲಿ ಬೆಳ್ಳಗ್ಗೆಯೇ ಸಾಧ್ಯವಾದಷ್ಟು ಬೇಗ ಪೂಜಾ ಕಾರ್ಯ ಮುಗಿಸಲು ಪುನೀತ್ ರಾಜ್ಕುಮಾರ್ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Puneeth Rajkumar: ಪುನೀತ್ ಪುಣ್ಯ ಸ್ಮರಣೆ: ಕುಟುಂಬದವರಿಂದ 11ನೇ ದಿನದ ಪೂಜೆ; ಸಮಾಧಿ ಬಳಿ ಯಾರಿಗೆ ಪ್ರವೇಶ?
Published On - 8:24 am, Mon, 8 November 21