AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯ ಅಗಲಿಕೆಯಿಂದ ಖಿನ್ನತೆಗೆ ಒಳಗಾಗಿ ಭಿಕ್ಷೆ ಬೇಡುತ್ತ ಅಲೆದಾಡುತ್ತಿದ್ದ ವ್ಯಕ್ತಿಗೆ ಹೊಸ ಜೀವನ ಕಟ್ಟಿಕೊಟ್ಟ ಮಡಿವಾಳ ಇನ್ಸ್ಪೆಕ್ಟರ್

ರಸ್ತೆಯಲ್ಲಿ ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುತ್ತ ಅಲೆಯುತ್ತಿದ್ದ ಭಿಕ್ಷುಕ ಈಗ ತನ್ನ ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡಿ ಪೊಲೀಸರು ಭಿಕ್ಷೆ ಬೇಡುತ್ತಿದ್ದವನು ಈಗ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಟೈಲರ್ ಕೆಲಸಕ್ಕೆ ಸೇರಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪತ್ನಿಯ ಅಗಲಿಕೆಯಿಂದ ಖಿನ್ನತೆಗೆ ಒಳಗಾಗಿ ಭಿಕ್ಷೆ ಬೇಡುತ್ತ ಅಲೆದಾಡುತ್ತಿದ್ದ ವ್ಯಕ್ತಿಗೆ ಹೊಸ ಜೀವನ ಕಟ್ಟಿಕೊಟ್ಟ ಮಡಿವಾಳ ಇನ್ಸ್ಪೆಕ್ಟರ್
ಪತ್ನಿಯ ಅಗಲಿಕೆಯಿಂದ ಖಿನ್ನತೆಗೆ ಒಳಗಾಗಿ ಭಿಕ್ಷೆ ಬೇಡುತ್ತ ಅಲೆದಾಡುತ್ತಿದ್ದ ವ್ಯಕ್ತಿಗೆ ಹೊಸ ಜೀವನ ಕಟ್ಟಿಕೊಟ್ಟ ಇನ್ಸ್ಪೆಕ್ಟರ್ ಶಿವರಾಜ್
TV9 Web
| Updated By: ಆಯೇಷಾ ಬಾನು|

Updated on: Nov 14, 2021 | 7:59 AM

Share

ಬೆಂಗಳೂರು: ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದವನ ಬಾಳಿಗೆ ಮಡಿವಾಳ ಸಂಚಾರಿ ಇನ್ಸ್ಪೆಕ್ಟರ್ ಶಿವರಾಜ್ ಅಂಗಡಿ ಬೆಳಕಾಗಿದ್ದಾರೆ. ಪತ್ನಿಯ ಅಗಲಿಕೆಯ ನೋವಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆ ಬಿಟ್ಟು ಭಿಕ್ಷುಕನಂತೆ ಅಲೆದಾಡುತ್ತಿದ್ದ ವ್ಯಕ್ತಿಯನ್ನು ಮಡಿವಾಳ ಸಂಚಾರಿ ಇನ್ಸ್ಪೆಕ್ಟರ್ ಶಿವರಾಜ್ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ.

ಸದ್ಯ ರಸ್ತೆಯಲ್ಲಿ ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡುತ್ತ ಅಲೆಯುತ್ತಿದ್ದ ಭಿಕ್ಷುಕ ಈಗ ತನ್ನ ಹೊಸ ಬದುಕನ್ನು ಕಟ್ಟಿಕೊಂಡಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡಿ ಪೊಲೀಸರು ಭಿಕ್ಷೆ ಬೇಡುತ್ತಿದ್ದವನು ಈಗ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಟೈಲರ್ ಕೆಲಸಕ್ಕೆ ಸೇರಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದೆ ಮಡಿವಾಳ ಸಂಚಾರಿ ಠಾಣಾ ಮುಂದೆ ಭಿಕ್ಷುಕನಂತೆ ಕಾಣುವ ವ್ಯಕ್ತಿಯೊಬ್ಬ ಮುಷ್ಟಿಯಲ್ಲಿ ಅನ್ನ ಹಿಡಿದು ಜನರ ಬಳಿ ನೀರು ಕೇಳುತ್ತಿದ್ದ ಇದನ್ನು ಗಮನಿಸಿದ ಇನ್ಸ್ಪೆಕ್ಟರ್ ಶಿವರಾಜ್ ಆತನನ್ನು ಠಾಣೆಗೆ ಕರೆದು ನೀರು ಕೊಟ್ಟು ದಣಿವಾರಿಸಿದ್ದಾರೆ. ಬಳಿಕ ಅವರ ಈ ಅವಸ್ಥೆಗೆ ಕಾರಣ ಕೇಳಿದ್ದಾರೆ. ಈ ವೇಳೆ ಅವನ ಮನಕಲಕುವ ಕಥೆ ಕೇಳಿ ಅವರ ಬಾಳನ್ನು ಬದಲಾಯಿಸಲು ಮುಂದಾಗಿದ್ರು. ಕಟಿಂಗ್ ಮಾಡಿಸಿ, ಸ್ನಾನ ಮಾಡಿಸಿ ಚಿಕಿತ್ಸೆ ಕೊಡಿಸಿ ಸಾಮಾನ್ಯನಂತೆ ಮಾಡಿ ಕೆಲಸಕ್ಕೂ ಸೇರಿಸಿದ್ದಾರೆ.

inspector shivraj help beggar 1

ಶಂಕರ್

ವ್ಯಕ್ತಿ ಭಿಕ್ಷುಕನಾಗಲು ಏನು ಕಾರಣ ಆ ವ್ಯಕ್ತಿಯ ಹೆಸರು ಶಂಕರ್. ಪಾವಗಡ ಮೂಲದ 42 ವರ್ಷದ ಶಂಕರ್, ವೃತ್ತಿಯಲ್ಲಿ‌ ಟೈಲರ್ ಆಗಿದ್ದರು. ಊರಲ್ಲಿ ತನ್ನ ಹೆಂಡತಿ-ಮಕ್ಕಳೊಂದಿಗೆ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಎರಡೂವರೆ ವರ್ಷದ ಹಿಂದೆ ಕಡಿಮೆ ರಕ್ತದೊತ್ತಡದಿಂದ ಹೆಂಡತಿ ಮೃತಪಟ್ಟಿದ್ದರು. ಇದರಿಂದ ನೊಂದಿದ್ದ ಶಂಕರ್ ಊರು ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಪತ್ನಿಯ ನೆನಪಲ್ಲೇ ಅಲೆಮಾರಿ ಹಾಗೆ ಅಲೆದಾಡುತ್ತ ಭಿಕ್ಷೆ ಬೇಡತ್ತ ಜೀವನ ನಡೆಸಿದ್ದರು. ಸದ್ಯ ಇನ್ಸ್ಪೆಕ್ಟರ್ ಶಿವರಾಜ್ ಶಂಕರ್ನನ್ನು ಮತ್ತೆ ತನ್ನ ಹೊಸ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ.

ಕವನಗಳನ್ನ ಬರೆಯುವ ಹವ್ಯಾಸ ಹೊಂದಿದ್ದ ಶಂಕರ್ ಇನ್ನು ಶಂಕರ್ಗೆ ಕವನ ಬರೆಯುವುದೆಂದರೆ ತುಂಬಾ ಇಷ್ಟ. ತನ್ನ ಜೇಬಿನಲ್ಲಿ ಚಿಕ್ಕ ಡೈರಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅಗಲಿದ ಪುನೀತ್ ರಾಜ್ ಕುಮಾರ್ ಮೇಲೂ ಕವನ ಬರೆದಿದ್ದಾರೆ. ಶಂಕರ್ ಕವನಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪುನೀತ್’ ಸಾವಿರಾರು ಜೀವಕ್ಕೆ ಮುತ್ತಿನ ಮಾಣಿಕ್ಯ ಈ ದಿನ ನಮ್ಮ ಮುಂದೆ ಕಣ್ಮರೆಯಾದ ದಿನ ನನಗೆ ಕತ್ತಲೆಯ ಕಾರ್ಮೋಡ ಕವಿದ ದಿನ ಆದರೂ ಅವರ ದಾರಿ ದೀಪದಲ್ಲಿ ಬದುಕುತ್ತಿರುವೆವು ನಾವು.. ಶಂಕರ್, ಪಾವಗಡ

ಇದನ್ನೂ ಓದಿ: ಕೋಲಾರ: ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ; ಮಕ್ಕಳ ಮಾರಾಟ ದಂಧೆ ಸಕ್ರಿಯದ ಬಗ್ಗೆ ಅನುಮಾನ!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ