Bitcoin Case: ಡ್ರಗ್​ ಅಡಿಕ್ಟ್​​​ ಮಾತಿಗೆ ಇಷ್ಟು ಪ್ರಾಮುಖ್ಯತೆ ಬೇಕಾ? ಬಿಟ್​ಕಾಯಿನ್ ಪ್ರಕರಣದ ಬಗ್ಗೆ ಡಾ. ಸುಧಾಕರ್ ಸುದ್ದಿಗೋಷ್ಠಿ

Bitcoin Case: ಆರೋಪಿ ಹ್ಯಾಕರ್​ ಶ್ರೀಕಿ ಓದಿರೋದೆಲ್ಲಾ ವಿದೇಶದಲ್ಲಿ. ಮಾದಕ ವ್ಯಸನಿ ಮಾತಿಗೆ ಇಷ್ಟು ಪ್ರಾಮುಖ್ಯತೆ ನೀಡ್ತಿದ್ದಾರೆ. ಒಬ್ಬ ಡ್ರಗ್​ ಅಡಿಕ್ಟ್​​​ ಮಾತಿಗೆ ಇಷ್ಟು ಪ್ರಾಮುಖ್ಯತೆ ಬೇಕಾ? ಎಂದು ಸುಧಾಕರ್ ಪ್ರಶ್ನೆ ಮಾಡಿದ್ದಾರೆ.

Bitcoin Case: ಡ್ರಗ್​ ಅಡಿಕ್ಟ್​​​ ಮಾತಿಗೆ ಇಷ್ಟು ಪ್ರಾಮುಖ್ಯತೆ ಬೇಕಾ? ಬಿಟ್​ಕಾಯಿನ್ ಪ್ರಕರಣದ ಬಗ್ಗೆ ಡಾ. ಸುಧಾಕರ್ ಸುದ್ದಿಗೋಷ್ಠಿ
ಡಾ. ಕೆ. ಸುಧಾಕರ್ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Nov 13, 2021 | 10:19 PM

ಬೆಂಗಳೂರು: ಸರ್ಕಾರದ ವಿರುದ್ಧ ಬಿಟ್ ​ಕಾಯಿನ್ ಹಗರಣ ಆರೋಪದ ಬಗ್ಗೆ ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ನಿವಾಸದಲ್ಲಿ ಸಚಿವ ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್​ ನಾಯಕ ಸುರ್ಜೇವಾಲ ಸುದ್ದಿಗೋಷ್ಠಿ ಮಾಡಿದ್ರು. ದೆಹಲಿ, ರಾಜ್ಯ ಕಾಂಗ್ರೆಸ್​ ನಾಯಕರು ಬಿಟ್​ಕಾಯಿನ್ ಹಗರಣ ಬಗ್ಗೆ ಆರೋಪಿಸಿದ್ದಾರೆ. ಸರ್ಕಾರದಲ್ಲಿ ದೊಡ್ಡ ಸ್ಕ್ಯಾಮ್​ ಆಗಿದೆ ಎಂದು ಆರೋಪ ಮಾಡಿದ್ದಾರೆ. ಸುಳ್ಳಿನ ಕಂತೆಯನ್ನ ಜನರಿಗೆ ತಿಳಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್​ ಕೇಳಿರುವ ಪ್ರಶ್ನೆಗಳಿಗೆ ನಾನು ಉತ್ತರ ನೀಡ್ತೇನೆ. ಡ್ರಗ್ಸ್​​ ಹಗರಣದಲ್ಲಿ ನಮ್ಮ ಸರ್ಕಾರ ಯಾರನ್ನೂ ಬಿಡಲಿಲ್ಲ. ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ಶ್ರೀಕಿ ಸಿಕ್ಕಿಬಿದ್ದಿದ್ದ. ಶ್ರೀಕಿ ತಾನು ಮಾದಕ ವ್ಯಸನಿ ಎಂದು ಒಪ್ಪಿಕೊಂಡಿದ್ದಾನೆ. ಆರೋಪಿ ಹ್ಯಾಕರ್​ ಶ್ರೀಕಿ ಓದಿರೋದೆಲ್ಲಾ ವಿದೇಶದಲ್ಲಿ. ಮಾದಕ ವ್ಯಸನಿ ಮಾತಿಗೆ ಇಷ್ಟು ಪ್ರಾಮುಖ್ಯತೆ ನೀಡ್ತಿದ್ದಾರೆ. ಒಬ್ಬ ಡ್ರಗ್​ ಅಡಿಕ್ಟ್​​​ ಮಾತಿಗೆ ಇಷ್ಟು ಪ್ರಾಮುಖ್ಯತೆ ಬೇಕಾ? ಎಂದು ಸುಧಾಕರ್ ಪ್ರಶ್ನೆ ಮಾಡಿದ್ದಾರೆ.

ನಟನೆ ಬರುತ್ತಾ ಎಂದು ನಾನು ಸುರ್ಜೇವಾಲರನ್ನೇ ಕೇಳ್ತೇನೆ. ಪ್ರಕರಣದ ತನಿಖೆಯನ್ನು ತೀವ್ರಗತಿಯಲ್ಲಿ ಮಾಡಿಸಿದ್ದಾರೆ. ಅಂತಹ ಮುಖ್ಯಮಂತ್ರಿ ಬೊಮ್ಮಾಯಿವರು ನಟರಾ?ಪ್ರಕರಣದ ಆರೋಪಿಯನ್ನು ಹಿಡಿದಿದ್ದೇ ತಪ್ಪಾಯ್ತಾ? ಭ್ರಷ್ಟಾಚಾರ ಯಾರಿಂದಲಾದ್ರೂ ಕಲಿತಿದ್ರೆ ಅಂದು ಕಾಂಗ್ರೆಸ್​​ನಿಂದ. ಕಾಂಗ್ರೆಸ್​ನವರು ಹಿಟ್​​ ಅಂಡ್ ರನ್ ಕೆಲಸ ಮಾಡುತ್ತಿದ್ದಾರೆ​​ ಎಂದು ಸುಧಾಕರ್ ಆರೋಪಿಸಿದ್ದಾರೆ.

ಈವರೆಗೆ ಒಂದೇ ಒಂದು ವಿದೇಶಿ ಸಂಸ್ಥೆಗಳು ನಮ್ಮ ಸರ್ಕಾರಕ್ಕೆ, ನಮ್ಮ ಪೊಲೀಸರಿಗೆ ಮಾಹಿತಿ ಕೇಳಿಲ್ಲ ಶ್ರೀಕಿ ಬಿಟ್​​ ಕಾಯಿನ್​ ಖಾತೆಯನ್ನ ನಮ್ಮ ತನಿಖಾ ಅಧಿಕಾರಿಗಳು ಖಾತೆ​ ಪರಿಶೀಲಿಸಿದ್ದಾರೆ. ಈ ಎಲ್ಲಾ ವರದಿಯನ್ನು ಕೋರ್ಟ್​​ಗೆ ಸಲ್ಲಿಸಲಾಗಿದೆ. ಪೊಲೀಸರು ಎಲ್ಲಿ ಮಾರ್ಗಸೂಚಿ ಬ್ರೇಕ್ ಮಾಡಿದ್ದಾರೆ?​​ ಕೆಲವು ದೇಶಗಳಲ್ಲಿ ಕ್ರಿಪ್ಟೋ ಕರೆನ್ಸಿ ಲೀಗಲ್​ ಮಾಡಿದ್ದಾರೆ. ಆದ್ರೆ ನಮ್ಮ ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಕಾನೂನುಬಾಹಿರ ಆಗಿದೆ. ಈ ಸಂಬಂಧ ಅಧಿಕಾರಿಗಳು ಚಾರ್ಜ್​​ಶೀಟ್​ ಸಲ್ಲಿಸಿದ್ದಾರೆ. ಪೊಲೀಸರು ಪಾರದರ್ಶಕತೆಯಿಂದ ನಡೆದುಕೊಂಡಿದ್ದಾರೆ. ಸರಿಯಾದ ಸಮಯದಲ್ಲಿ ಎಲ್ಲವನ್ನೂ ಕೋರ್ಟ್​​ಗೆ ಸಲ್ಲಿಕೆ ಮಾಡಲಾಗಿದೆ. ಕಾಂಗ್ರೆಸ್​ ನಾಯಕರ ಆರೋಪಗಳು ಸತ್ಯಕ್ಕೆ ದೂರವಾದವು ಎಂದು ಸುಧಾಕರ್ ಹೇಳಿದ್ದಾರೆ.

14,682 ಬಿಟ್​ ಕಾಯಿನ್​​ ಕಳುವಾಗಿದ್ರೆ ಕರೆ ಮಾಡ್ತಿರಲಿಲ್ವಾ? ಕ್ರಿಪ್ಟೋ ಕರೆನ್ಸಿ ಏಜೆನ್ಸಿಗಳು ಸರ್ಕಾರಕ್ಕೆ ಕರೆ ಮಾಡ್ತಿರಲಿಲ್ವಾ? ಕಳುವಾಗಿದ್ದರೆ ಏಜೆನ್ಸಿಗಳು ಮಲಗಿರುತ್ತಿದ್ವಾ, ಕೇಳುತ್ತಿರಲಿಲ್ವಾ? ಈವರೆಗೆ ಒಂದೇ ಒಂದು ವಿದೇಶಿ ಸಂಸ್ಥೆಗಳು ಕೇಳಿಲ್ಲ. ನಮ್ಮ ಸರ್ಕಾರಕ್ಕೆ, ನಮ್ಮ ಪೊಲೀಸರಿಗೆ ಮಾಹಿತಿ ಕೇಳಿಲ್ಲ. ಹ್ಯಾಕ್​ ಆಗಿದ್ರೆ ಅದನ್ನಾದ್ರೂ ವಿದೇಶಿ ಸಂಸ್ಥೆಗಳು ಕೇಳ್ತಿದ್ವು. ಇದೆಲ್ಲಾ ನಡೆದು ಸುಮಾರು ಒಂದು ವರ್ಷವೇ ಆಗಿದೆ. ಬೊಮ್ಮಾಯಿ ಅತ್ಯಂತ ಗುಣಮಟ್ಟದ ಸರ್ಕಾರ ನಡೆಸ್ತಿದ್ದಾರೆ. ಸಿಎಂ ಬೊಮ್ಮಾಯಿಯವರನ್ನ ಗೌರವಿಸುವ ಕೆಲಸ ಮಾಡಿ. ಹೇಗೆ ತನಿಖೆ ಮಾಡಿದ್ರೂ, ಎಲ್ಲಿ ಮಾಡಿದ್ರೂ ಎಲ್ಲಾ ರೆಕಾರ್ಡ್​ ಆಗುತ್ತದೆ. ಎಲ್ಲವನ್ನೂ ಸರ್ಕಾರ ರೆಕಾರ್ಡ್​​ ಮಾಡಿದೆ ಎಂದು ಡಾ. ಸುಧಾಕರ್​ ತಿಳಿಸಿದ್ದಾರೆ.

ನಮ್ಮ ಸರ್ಕಾರ ಸ್ಪಷ್ಟವಾಗಿದೆ, ಯಾರನ್ನೂ ರಕ್ಷಣೆ ಮಾಡಲ್ಲ ವಿಚಾರಣೆ ವೇಳೆ ಶ್ರೀಕಿ ನೂರಾರು ಕತೆಗಳನ್ನು ಹೇಳಿದ್ದಾನೆ. ಸರ್ಕಾರ ವಿಚಾರಣೆ ಮಾಡಲ್ಲ, ತನಿಖಾ ಸಂಸ್ಥೆ ಮಾಡುತ್ತವೆ. ಬಿಜೆಪಿ ಸರ್ಕಾರ ಬಂದ್ಮೇಲೆ ಹೊಸ ಪೊಲೀಸರು ಬಂದಿಲ್ಲ. ನಮ್ಮ ಸರ್ಕಾರವೇ ಇಡಿಗೆ ಎಲ್ಲ ಮಾಹಿತಿಯನ್ನು ಕೊಟ್ಟಿದೆ. ಶ್ರೀಕಿಯೇ ಒಪ್ಪಿರುವುದರಿಂದ ನಾವು ಸಿಬಿಐಗೆ ಹೇಳಿದ್ದೇವೆ. ಯಾವ ರಾಜಕಾರಣಿಗಳಿದ್ದಾರೆ ಎಲ್ಲ ಸತ್ಯ ಹೊರಗೆ ಬರಲಿ. ಬಿಜೆಪಿ, ಕಾಂಗ್ರೆಸ್​​, ಜೆಡಿಎಸ್​​ನವರಿದ್ರೂ ಹೊರ ಬರುತ್ತೆ. ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ. ನಿಮ್ಮ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದೆ ಅದನ್ನ ನೋಡಿಕೊಳ್ಳಿ ಎಂದು ಕಾಂಗ್ರೆಸ್​ ನಾಯಕರ ಆರೋಪಕ್ಕೆ ಸುಧಾಕರ್​ ತಿರುಗೇಟು ನೀಡಿದ್ದಾರೆ.

ನಮ್ಮ ಸರ್ಕಾರ ಸ್ಪಷ್ಟವಾಗಿದೆ, ಯಾರನ್ನೂ ರಕ್ಷಣೆ ಮಾಡಲ್ಲ. ನಾವೇ ಈ ಹಗರಣವನ್ನ ಬೆಳಕಿಗೆ ತಂದಿದ್ದೇವೆ. ವರ್ಗಾವಣೆ ಆಗದಿರೋದು ವರ್ಗಾವಣೆ ಆಗಿದೆ ಅಂದ್ರೆ ಹೇಗೆ. ಯಾವ್ದೇ ಬಿಟ್ ಕಾಯಿನ್ ವರ್ಗಾವಣೆ ಆಗಿಲ್ಲ. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ನಾವು ಮಾತಾಡುವುದು ತಪ್ಪಾಗುತ್ತೆ. ಸಂಪೂರ್ಣ ವರದಿ ಬಂದ ಬಳಿಕ ಎಲ್ಲವೂ ಗೊತ್ತಾಗಲಿದೆ. ಪ್ರಧಾನಿ ಕಚೇರಿಯಿಂದ ಪತ್ರ ಬಂದ್ರೆ ಯಾರಿಗೂ ಗೊತ್ತಾಗಲ್ವಾ? ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ಆಗಿರೋದು ಸತ್ಯ ಎಂದು ಸುಧಾಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಟ್​ಕಾಯಿನ್ ಹಗರಣ ಆರೋಪದ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ; ವಿವರ ಇಲ್ಲಿದೆ

ಇದನ್ನೂ ಓದಿ: ಬಿಟ್​ಕಾಯಿನ್ ಕುರಿತು ಅಧಿಕಾರಿಗಳ ಆಡಿಯೋ ವೈರಲ್; ಇಬ್ಬರನ್ನೂ ವಿಚಾರಣೆ ನಡೆಸಿದ ಪೊಲೀಸರು

Published On - 9:19 pm, Sat, 13 November 21

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ