ಗುಜರಿ ಬಸ್ ಜಮೀರು ಸಿದ್ದರಾಮಯ್ಯ ಟೀಂ ವೈಸ್ ಕ್ಯಾಪ್ಟನ್! ಫರ್ಜಿ ಕೆಫೆ ಪುಂಡ ನಲಪಾಡ್ ಡಿಕೆಶಿ ಗ್ಯಾಂಗ್ ವೈಸ್ ಕ್ಯಾಪ್ಟನ್ ಎಂದ ಸಂಸದ ಪ್ರತಾಪ್
ಸಿದ್ದರಾಮಯ್ಯ ಅವರೇ ನಾನು ಮಾವಿನ ಮರ ಅಲ್ಲ. ನೀವು ಒಂದು ಕಲ್ಲು ಒಗೆದ್ರೆ ನಾನು ಎರಡು ಕಲ್ಲು ಎಸೆತೀನಿ ಎಂದು ಸಂಸದ ಸಿಂಹ ಸಿದ್ದರಾಮಯ್ಯ ಅವರತ್ತ ಬಾಣ ಎಸೆದರು. ಕಾಂಗ್ರೆಸ್ ಯಾವುದಕ್ಕೆ ಹುಟ್ಟಿದೆ? ಎಂದು ಪ್ರಶ್ನೆ ಹಾಕಿಕೊಂಡು ಕಾಂಗ್ರೆಸ್ ಬ್ರಿಟಿಷ್ಗೆ ಹುಟ್ಟಿದೆ ಎಂದೂ ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದರು.
ರಾಯಚೂರು: ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಇಂದು ಬಿಜೆಪಿ ಪಕ್ಷದ ವತಿಯಿಂದ ಜನ ಸ್ವರಾಜ್ ಕಾರ್ಯಕ್ರಮ ( jan swaraj programme) ನಡೆದಿದ್ದು, ಪಕ್ಷದ ಸಂಸದ ಪ್ರತಾಪ್ ಸಿಂಹ ಮಾತನಾಡಿದ್ದಾರೆ. ರಾಜ್ಯದ ನಾಲ್ಕು ಭಾಗಗಳಿಂದ ಏಕ ಕಾಲಕ್ಕೆ ಜನ ಸ್ವರಾಜ್ ಕಾರ್ಯಕ್ರಮ ಆರಂಭವಾಗಿದೆ. ಸುಬ್ರಮಣ್ಯನ ತರಹ ನಳೀನ ಕುಮಾರ್ ಕಟೀಲು ರಾಜ್ಯ ಸುತ್ತಿ ಸಂಘಟನೆ ಮಾಡ್ತಿದಾರೆ. ಒಂದು ವರ್ಷದಲ್ಲಿ ನಾಲ್ಕು ಯಾತ್ರೆ ಮಾಡಿದ್ದು, ನಳೀನ ಕುಮಾರ್ ಕಟೀಲು ಅವರು ಯಡಿಯೂರಪ್ಪರ ನಂತ್ರ ಅತೀ ಹೆಚ್ಚು ರಾಜ್ಯ ಸುತ್ತಿದವರಗಾಗಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಹಾಡಿ ಹೊಗಳಿದ್ದಾರೆ. ಇದೇ ವೇಳೆ ಯಡಿಯೂರಪ್ಪರನ್ನು ಹೊಗಳಿದ ಪ್ರತಾಪ್ ಸಿಂಹ ( pratap simha) ಇಳಿ ವಯಸ್ಸಲ್ಲೂ ರಾಜ್ಯ ಸುತ್ತಿ ಸಂಘಟನೆ ಮಾಡ್ತಿದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಳೆದ ಮೂರು ತಿಂಗಳಿಂದ ಉತ್ತಮ ಕೆಲಸ ಮಾಡ್ತಿದಾರೆ. ಕೆಲ ಯೋಜನೆ ಇಂದ ಪ್ರಧಾನಿ ಮೋದಿಗೂ ಪ್ರೇರಣೆಯಾಗಿದ್ದಾರೆಂದು ಪ್ರತಾಪ್ ಹೇಳಿದರು. ಪುನೀತ್ ಅಂತ್ಯ ಸಂಸ್ಕಾರದಲ್ಲಿ ಮುಖ್ಯಮಂತ್ರಿ ನಡೆದುಕೊಂಡ ರೀತಿಯ ಬಗ್ಗೆ ಜನ ಬಹಳ ಅಭಿಮಾನದಿಂದ ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮ ಕ್ಯಾಪ್ಟನ್ ಬಗ್ಗೆ ನಮಗೆ ಗೊಂದಲ ಇಲ್ಲ. ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿಸುತ್ತೇವೆ. ಕಾಂಗ್ರೆಸ್ ನ ಕ್ಯಾಪ್ಟನ್ ಯಾರೂ ಎಂದು ಪ್ರತಾಪ್ ಇದೇ ವೇಳೆ ಮತ್ತೊಮ್ಮೆ ಕಾಂಗ್ರೆಸ್ಗೆ ಪ್ರಶ್ನೆ ಮಾಡಿದರು.
ಒಂದ ಕಡೆ ಸಿದ್ದರಾಮಯ್ಯ, ಮತ್ತೊಂದು ಕಡೆ ಡಿಕೆ ಶಿವಕುಮಾರ್ ನಾಯಕತ್ವಕ್ಕೆ ಕಿತ್ತಾಟ ನಡೆದಿದೆ. ಗೌರಿ ಪಾಳ್ಯದ ಗುಜರಿ ಬಸ್ ನ ಜಮೀರು ಸಿದ್ದರಾಮಯ್ಯ ಟೀಂನ ವೈಸ್ ಕ್ಯಾಪ್ಟನ್! ಫರ್ಜಿ ಕೆಫೆ ಪುಂಡ ನಲಪಾಡ್ ಡಿ.ಕೆ. ಶಿವಕುಮಾರ್ ಗ್ಯಾಂಗ್ ನ ವೈಸ್ ಕ್ಯಾಪ್ಟನ್! ಕಾಂಗ್ತೆಸ್ ಅಧಿಕಾರಕ್ಕೆ ಬಂದ್ರೆ ತಾಲಿಬಾನ್ ಸರ್ಕಾರ ಇರುತ್ತೆ. ಕನ್ನಡಿಗರ ಸರ್ಕಾರ ಇರಲ್ಲ ಎಂದು ಪ್ರತಾಪ್ ಸಿಂಹ ಪುನರುಚ್ಚಿಸಿದರು.
ಬಿಟ್ ಕಾಯಿನ್ ವಿಚಾರದಲ್ಲಿ ಸುಮ್ಮನೆ ಆರೋಪ ಮಾಡಲಾಗ್ತಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಶ್ರೀಕಿಯನ್ನ ಯಾಕೆ ಅರೆಸ್ಟ್ ಮಾಡಲಿಲ್ಲ. ಅವರನ್ನು ಕದ್ದು ಮುಚ್ಚಿ ಸ್ವೀಡನ್ಗೆ ಕಳಿಸಿದ್ದು ಇವರೇ. ಆದ್ರೆ ಶ್ರೀಕಿಯನ್ನು ಅರೆಸ್ಟ್ ಮಾಡಿದ್ದು ನಮ್ಮ ಬೊಮ್ಮಾಯಿ ಎಂದು ಸಂಸದ ಸಿಂಹ ಹೇಳಿದರು.
ಕಾಂಗ್ರೆಸ್ ಯಾವುದಕ್ಕೆ ಹುಟ್ಟಿದೆ? ಪ್ರಶ್ನೆ ಹಾಕಿ ಕಾಂಗ್ರೆಸ್ ಬ್ರಿಟಿಷ್ಗೆ ಹುಟ್ಟಿದೆ ಎಂದು ಲೇವಡಿ ಮಾಡಿದ ಸಂಸದ ಪ್ರತಾಪ್: ಸಿದ್ದರಾಮಯ್ಯ ಅವರೇ ನಾನು ಮಾವಿನ ಮರ ಅಲ್ಲ. ನೀವು ಒಂದು ಕಲ್ಲು ಒಗೆದ್ರೆ ನಾನು ಎರಡು ಕಲ್ಲು ಎಸೆತೀನಿ ಎಂದು ಸಂಸದ ಸಿಂಹ ಇದೇ ವೇಳೆ ಸಿದ್ದರಾಮಯ್ಯ ಅವರತ್ತ ಬಾಣ ಎಸೆದರು. ಪ್ರಿಯಾಂಕಾ ಖರ್ಗೆಯನ್ನ ಮತ್ತೊಮ್ಮೆ ಕೆಣಕಿದ ಸಿಂಹ, ನನಗೆ ಅಪ್ಪನ ಹೆಸರು ಇಟ್ಟುಕೊಂಡು ಹೋಗೋ ದೈನೇಸಿ ಸ್ಥಿತಿ ಬಂದಿಲ್ಲ. ಆದ್ರೆ 2013 ರಲ್ಲಿ ನಿಮ್ಮ ತಂದೆ ಕಷ್ಟ ಪಟ್ಟು ನಿಮ್ಮನ್ನು ಗೆಲ್ಲಿಸಿಕೊಂಡು ಬಂದ್ರು.
2018 ರಲ್ಲಿ ಖರ್ಗೆ ಅವರು ಚಿಂಚನಸೂರುಗೆ ಮೋಸ ಮಾಡಿ ನಿಮ್ಮನ್ನ ಮಂತ್ರಿ ಮಾಡಿದ್ರುದರು! ಕೊನೆಗೆ ಅವರೇ ಸೋತು ಹೋದರು, ಆದ್ರೆ ನಾನು ನಮ್ಮಪ್ಪನಿಗೆ ಇಂತಹ ಸ್ಥಿತಿ ತಂದಿಲ್ಲ. ನಾನು ಸ್ತ್ರೀಲಿಂಗ ಪುಲ್ಲಿಂಗ ಎಂದು ಕೇಳಿದ್ರಲ್ಲಿ ತಪ್ಪಿಲ್ಲ ಎಂದು ಸಂಸದ ಪ್ರತಾಪ್ ಹೇಳಿದರು. ನಿಮ್ಮ ಹೆಸರಲ್ಲಿ ದಾಸ್ಯ ಇದೆ ಎಂದು ಮತ್ತೊಮ್ಮೆ ಕುಟುಕಿದ ಸಿಂಹ. ಕಾಂಗ್ರೆಸ್ ಯಾವುದಕ್ಕೆ ಹುಟ್ಟಿದೇ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಬ್ರಿಟಿಷ್ ಗೆ ಹುಟ್ಟಿದೆ ಎಂದೂ ಸಿಂಹ ಇದೇ ಸಮಯದಲ್ಲಿ ಲೇವಡಿ ಮಾಡಿದರು.
Ex CM Siddaramaiah Speech | ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ | Tv9 Kannada
s
Published On - 2:12 pm, Fri, 19 November 21