ಬೆಂಗಳೂರು: ಮೈಸೂರು ರಸ್ತೆಯ ರಚನ ಪೆಟ್ರೋಲ್ ಬಂಕ್ನಲ್ಲಿ ದುಷ್ಕರ್ಮಿಯೊಬ್ಬ ಹಾಡಹಗಲೇ ದರೋಡೆಗೆ ಯತ್ನಿಸಿದ್ದಾನೆ. ವಿಳಾಸ ಕೇಳುವ ನೆಪದಲ್ಲಿ ಬಂದು ಹಣ ದರೋಡೆ ನಡೆಸಲು ಪ್ರಯತ್ನಿಸಿದ್ದಾನೆ. ದುಷ್ಕರ್ಮಿ ಲಾಂಗ್ ಬೀಸಿ ಹಣದ ಬ್ಯಾಗ್ಗೆ ಕೈಹಾಕುತ್ತಾನೆ. ಆದರೆ ಕ್ಯಾಶಿಯರ್ ಹಣದ ಬ್ಯಾಗ್ ನೀಡಿಲ್ಲ. ರಸ್ತೆಯಲ್ಲಿ ಹಿಡಿದು ಎಳೆದಾಡಿದ್ರೂ ಬ್ಯಾಗ್ ಬಿಡದೆ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ವೇಳೆ ದುಷ್ಕರ್ಮಿ ಮೇಲೆ ಬಂಕ್ ಸಿಬ್ಬಂದಿ ಕಲ್ಲು ತೂರಿದ್ದಾರೆ.
ಬಂಕ್ ಸಿಬ್ಬಂದಿ ಕಲ್ಲು ತೂರುತ್ತಿದ್ದಂತೆ ದುಷ್ಕರ್ಮಿ ಹಣದ ಬ್ಯಾಗ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ, ಸದ್ಯ ಈ ಪ್ರಕರಣ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರೋಡೆಗೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೇವಾಲಯದ 2 ಹುಂಡಿ ಕಳ್ಳತನ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ಚಳ್ಳಕೇರಮ್ಮ ದೇವಾಲಯದ 2 ಹುಂಡಿ ಕಳ್ಳತನವಾಗಿದೆ. ದೇಗುಲದ ಕಬ್ಬಿಣದ ಕಂಬಿಗಳನ್ನು ತುಂಡರಿಸಿ ಖದೀಮರು ಕನ್ನ ಹಾಕಿದ್ದಾರೆ. ಇಂದು ಬೆಳಗಿನ ಜಾವ 4ಗಂಟೆ ಸಮಯದಲ್ಲಿ ಕಳ್ಳತನ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ
ಬದ್ಧವೈರಿ ಚೀನಾದ ತಂಟೆತಕರಾರನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಭಾರತ, ಮೂಲಸೌಕರ್ಯ ನಿರ್ಮಾಣಕ್ಕೆ ಮನವಿ