ಬದ್ಧ ವೈರಿ ಚೀನಾದ ತಂಟೆತಕರಾರನ್ನು ಸುಪ್ರೀಂ ಕೋರ್ಟ್​ ಗಮನಕ್ಕೆ ತಂದ ಭಾರತ, ಮೂಲಸೌಕರ್ಯ ನಿರ್ಮಾಣಕ್ಕೆ ಮನವಿ

NGO Citizens for Green Doon ಎಂಬ ಸ್ವಯಂ ಸೇವಾ ಸಂಸ್ಥೆಯ ಪರ ಹಿರಿಯ ವಕೀಲರು ‘ಗಡಿ ರಸ್ತೆಗಳ ಅಗತ್ಯ ಇಲ್ಲ. ಪಡೆಗಳನ್ನು ವಿಮಾನಗಳ ಮೂಲಕ ಆ ಸ್ಥಳಕ್ಕೆ ಕೊಂಡೊಯ್ಯಬಹುದು’ ಎಂದು ಅಂದಿನ ಸೇನಾ ಮುಖ್ಯಸ್ಥರು ಹೇಳಿದ್ದನ್ನು ಕೋರ್ಟ್​ ಗಮನಕ್ಕೆ ತಂದರು. ಆದರೆ ಆ ಹೇಳಿಕೆ ಸಂಪೂರ್ಣವಾಗಿ ಸರಿಯಲ್ಲ ಎಂದು ನ್ಯಾಯಪೀಠ ಹೇಳಿತು.

ಬದ್ಧ ವೈರಿ ಚೀನಾದ ತಂಟೆತಕರಾರನ್ನು ಸುಪ್ರೀಂ ಕೋರ್ಟ್​ ಗಮನಕ್ಕೆ ತಂದ ಭಾರತ, ಮೂಲಸೌಕರ್ಯ ನಿರ್ಮಾಣಕ್ಕೆ ಮನವಿ
ಬದ್ಧವೈರಿ ಚೀನಾದ ತಂಟೆತಕರಾರನ್ನು ಸುಪ್ರೀಂ ಕೋರ್ಟ್​ ಗಮನಕ್ಕೆ ತಂದ ಭಾರತ ಸರ್ಕಾರದಿಂದ ಮೂಲಸೌಕರ್ಯ ನಿರ್ಮಾಣಕ್ಕೆ ಮನವಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 10, 2021 | 12:45 PM

ನೆರೆಯ ಬದ್ಧ ವೈರಿ ರಾಷ್ಟ್ರ ಚೀನಾ ತಂಟೆತಕರಾರುಗಳನ್ನು ಭಾರತ ಸರ್ಕಾರ ಸುಪ್ರೀಂಕೋರ್ಟ್​ ಗಮನಕ್ಕೆ ತಂದಿದೆ. ಭಾರತ-ಚೀನಾ ಗಡಿಯಲ್ಲಿ 1962ರ ಯುದ್ಧದ ಕಾರ್ಮೋಡ ಅತಂಕ ತಂದಿದೆ ಎಂದು ಗಡಿ ಭಾಗದಲ್ಲಿ ಚೀನಾದ ಆಟಾಟೋಪಗಳನ್ನು ಭಾರತ ಸರ್ಕಾರ ಸವಿಸ್ತಾರವಾಗಿ ಸುಪ್ರೀಂಕೋರ್ಟ್​​ಗೆ (Supreme Court) ವಿವರಿಸಿದೆ. ಟಿಬೆಟ್​ ಭಾಗದಲ್ಲಿ (Tibet Region) ಚೀನಾ ಯುದ್ಧ ಸನ್ನದ್ಧವಾಗಿ ಶಸ್ತ್ರಾಸ್ತ್ರಗಳನ್ನು ಗುಡ್ಡೆ ಹಾಕುತ್ತಿದೆ (India-China Border Tensions). ಇದನ್ನು ಮೆಟ್ಟಿ ನಿಲ್ಲಲು ಭಾರತ ಗಡಿ ಮಾರ್ಗಗಳಲ್ಲಿ ತಾನೂ ಶಸ್ತ್ರಾಸ್ತ್ರ ಕ್ರೋಡೀಕರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಕೇಂದ್ರ ಸರ್ಕಾರ ಮನದಟ್ಟುಪಡಿಸಿದೆ.

ಚೀನಾ ಗಡಿಯಲ್ಲಿ 62 ರ ಯುದ್ಧದ ಕಾರ್ಮೋಡ ಅತಂಕ ತಂದಿದೆ: ಭಾರತದ ಗಡಿಯಾಚೆಗೆ ಚೀನಾ ಪ್ರಚಂಡವಾಗಿ ಯುದ್ಧ ಸಾಮಾಗ್ರಿಗಳನ್ನು ಕೂಡಿಹಾಕುತ್ತಿದೆ. ಮೂಲಸೌಕರ್ಯವನ್ನು ನಿರ್ಮಾಣ ಮಾಡಿಕೊಳ್ಳುತ್ತಿದೆ. ಹೆಲಿಪ್ಯಾಡ್​, ಯುದ್ಧ ವಿಮಾನ ನಿಲ್ದಾಣಗಳನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ರೈಲ್ವೆ ಮತ್ತು ರಸ್ತೆ ಮಾರ್ಗಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದೆ. ಇದೆಲ್ಲವನ್ನೂ ಕಾಯಂ ಸೌಕರ್ಯಗಳಾಗಿ ಚೀನಾ ನಿರ್ಮಿಸಿಕೊಳ್ಳುತ್ತಿದೆ ಎಂದು ವಿಶ್ಲೇಷಿಸಬಹುದಾಗಿದೆ. ಇದರಿಂದ ಗಡಿಯಲ್ಲಿ 1962ರ ಯುದ್ಧದ ಕಾರ್ಮೋಡವನ್ನು (India-China 1962 war) ಸೃಷ್ಟಿಸಿದಂತಾಗಿದೆ. ಇದನ್ನು ನೋಡಿಕೊಂಡು 1962ರ ಮಾದರಿಯಲ್ಲಿ ನಿದ್ದೆ ಮಾಡುವ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಮಂಗಳವಾರ ಸುಪ್ರೀಂ ಕೋರ್ಟ್​ ಗಮನ ಸೆಳೆದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ಭಾರತ ಕೈಗೊಳ್ಳುವ ಯಾವುದೇ ಅಭಿವೃದ್ಧಿ ಕಾರ್ಯವು ರಾಷ್ಟ್ರದ ಹಿತದೃಷ್ಟಿಯಿಂದ ಸುಸ್ಥಿರವಾಗಿರಬೇಕಾಗುತ್ತದೆ. ಅದು ಸಮತೋಲನದಿಂದ ಕೂಡಿರಬೇಕಾಗುತ್ತದೆ. ನೈಸರ್ಗಿಕ ಪರಿಸರವನ್ನೂ ಕಾಪಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಚೀನಾದ ಆಟಾಟೋಪ ವಿವರಿಸಿದ ಭಾರತ ಸರ್ಕಾರ: ಜಸ್ಟೀಸ್​ ಡಿವೈ ಚಂದ್ರಚೂಡ್​, ಸೂರ್ಯ ಕಾಂತ್​ ಮತ್ತು ವಿಕ್ರಂ ನಾಥ್​ ಅವರುಗಳ ಸುಪ್ರೀಂ ನ್ಯಾಯಪೀಠಕ್ಕೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್​ ಅವರು ಇತ್ತೀಚೆಗೆ ಭಾರತ-ಚೀನಾ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಭಾರತ ಸರ್ಕಾರವು ತನ್ನ ವತಿಯಿಂದ ಅಲ್ಲಿ ಮೂಲಸೌಕರ್ಯ ಅಭವೃದ್ಧಿಪಡಿಸಿಕೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.

ಅದಕ್ಕೆ ಉತ್ತರಿಸಿದ ಸುಪ್ರೀಂ ಕೋರ್ಟ್, ಭಾರತದ ರಕ್ಷಣೆಗೆ ಏನು ಬೇಕು ಎಂಬುದನ್ನು ಅರ್ಥೈಸಿಕೊಳ್ಳುವಲ್ಲಿ ಕೋರ್ಟ್​ ಮೂಗುತೂರಿಸುವುದಿಲ್ಲ ಎಂದು ಸರ್ಕಾರಕ್ಕೆ ಮುಕ್ತ ಅವಕಾಶ ನೀಡಿದೆ. ಇದೇ ವೇಳೆ ಅಟಾರ್ನಿ ಜನರಲ್ ವೇಣುಗೋಪಾಲ್​ ಅವರು 2020ರ ಸೆಪ್ಟೆಂಬರ್​ 8ರ ಕೋರ್ಟ್​ ಆದೇಶಕ್ಕೆ ಸ್ವಲ್ಪಮಟ್ಟಿಗೆ ವಿನಾಯ್ತಿ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ನ್ಯಾಯಪೀಠವು ಈ ಅಂಶಗಳನ್ನು ತಾನು ಅಲ್ಲಗಳೆಯುವುದಿಲ್ಲ. ಬದಲಾವಣೆಗಳನ್ನು ಮಾಡಿಕೊಳ್ಳುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿರುವುದು ಕೋರ್ಟ್​ ಗಮನಿಸುತ್ತದೆ ಎಂದು ತಿಳಿಸಿದೆ.

ಈ ವೇಳೆ, NGO Citizens for Green Doon ಎಂಬ ಸ್ವಯಂ ಸೇವಾ ಸಂಸ್ಥೆಯ ಪರ ಹಿರಿಯ ವಕೀಲರು ‘ಗಡಿ ರಸ್ತೆಗಳ ಅಗತ್ಯ ಇಲ್ಲ. ಪಡೆಗಳನ್ನು ವಿಮಾನಗಳ ಮೂಲಕ ಆ ಸ್ಥಳಕ್ಕೆ ಕೊಂಡೊಯ್ಯಬಹುದು’ ಎಂದು ಅಂದಿನ ಸೇನಾ ಮುಖ್ಯಸ್ಥರು ಹೇಳಿದ್ದನ್ನು ಕೋರ್ಟ್​ ಗಮನಕ್ಕೆ ತಂದರು. ಆದರೆ ಆ ಹೇಳಿಕೆ ಸಂಪೂರ್ಣವಾಗಿ ಸರಿಯಲ್ಲ ಎಂದು ನ್ಯಾಯಪೀಠ ಹೇಳಿತು.

ಹಿಮಾಲಯದ ಮೇಲಿನ ಪ್ರದೇಶದಲ್ಲಿ ವಾತಾವರಣ ಹೇಗಿರುತ್ತದೆ ಎಂಬುದರ ಬಗ್ಗೆ ನಮಗೂ ಅರಿವಿದೆ. ನಿಂತ ನಿಲುವಿನಲ್ಲಿ ಚಂಡೀಗಢದಿಂದ ಸೇನಾ ತುಕಡಿಗಳನ್ನು ಅಲ್ಲಿಗೆ ವಿಮಾನದಲ್ಲಿ ರವಾನಿಸಲು ಆಗದು. ಅಷ್ಟಕ್ಕೂ ಯೋಧರು ಹಿಮಾಲಯದಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಅದಕ್ಕೆ ಅಲ್ಲಿನ ಪರಿಸ್ಥಿತಿಯಲ್ಲಿ ಪೂರ್ವ ತಯಾರಿಯಾಗಿ ಉಳಿದುಕೊಳ್ಳಬೇಕಾಗುತ್ತದೆ ಎಂದು ನ್ಯಾಯಪೀಠ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು. ಇದೇ ವೇಳೆ 1962 ರ ಯುದ್ಧದ ಬಳಿಕವೂ ಚೀನಾದ ಗಡಿಯವರೆಗೂ ವಿಸ್ತರಿಸುವ ಭಾರತದ ರಸ್ತೆಗಳ ಹಾಗೆಯೇ ಇವೆ. ಅವುಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿತು.

(to avoid a 1962 war like situation Broader Roads Need to Combat China Build Up in Tibet Region Centre Tells Supreme Court)

Published On - 11:31 am, Wed, 10 November 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ