Coronavirus cases in India ದೇಶದಲ್ಲಿ 11,466 ಹೊಸ ಕೊವಿಡ್ ಪ್ರಕರಣ ಪತ್ತೆ, 460 ಮಂದಿ ಸಾವು

Covid 19: 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್ ಪ್ರಕರಣಗಳಲ್ಲಿ 955 ಪ್ರಕರಣಗಳ ಇಳಿಕೆ ದಾಖಲಾಗಿದೆ. ದೈನಂದಿನ ಸಕಾರಾತ್ಮಕತೆಯ ದರವು ಶೇ 0.90 ಶೇಕಡಾದಲ್ಲಿ ದಾಖಲಾಗಿದೆ. ಇದು 37 ದಿನಗಳಿಂದ ಶೇಕಡಾ ಎರಡಕ್ಕಿಂತ ಕಡಿಮೆಯಾಗಿದೆ.

Coronavirus cases in India ದೇಶದಲ್ಲಿ 11,466 ಹೊಸ ಕೊವಿಡ್ ಪ್ರಕರಣ ಪತ್ತೆ, 460 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 10, 2021 | 10:52 AM

ದೆಹಲಿ: ಭಾರತವು ಬುಧವಾರದಂದು 11,466 ಹೊಸ ಕೊವಿಡ್-19 (Covid 19)ಪ್ರಕರಣಗಳನ್ನು ದಾಖಲಿಸಿದ್ದು ಒಟ್ಟು ಸೋಂಕಿತರ ಸಂಖ್ಯೆಯನ್ನು 3,43,88,579 ಕ್ಕೆ ತಲುಪಿದೆ.  ಸಕ್ರಿಯ ಪ್ರಕರಣಗಳ ಸಂಖ್ಯೆ 1,39,683 ಕ್ಕೆ ಇಳಿದಿದ್ದು ಇದು 264 ದಿನಗಳಲ್ಲಿ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿದೆ. ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಮಾಹಿತಿಯ ಪ್ರಕಾರ 460 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 4,61,849 ಕ್ಕೆ ಏರಿದೆ. ಹೊಸ ಕೊರೊನಾವೈರಸ್ (Coronavirus)ಸೋಂಕುಗಳ ದೈನಂದಿನ ಏರಿಕೆಯು 33 ದಿನಗಳಿಂದ 20,000 ಕ್ಕಿಂತ ಕಡಿಮೆಯಾಗಿದೆ. ಸತತ 136 ದಿನಗಳಿಂದ ಪ್ರತಿದಿನ 50,000 ಕ್ಕಿಂತ ಕಡಿಮೆ ಹೊಸ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,39,683 ಕ್ಕೆ ಇಳಿದಿದ್ದು ಇದು ಒಟ್ಟು ಸೋಂಕು ಪ್ರಕರಣಗಳ ಶೇ 0.41ದಷ್ಟಿದೆ. ರಾಷ್ಟ್ರೀಯ ಕೊವಿಡ್ ಚೇತರಿಕೆ ದರವು 98.25 ಪ್ರತಿಶತದಷ್ಟು ದಾಖಲಾಗಿದೆ, ಇದು ಮಾರ್ಚ್ 2020 ರಿಂದ ಅತಿ ಹೆಚ್ಚು ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್ ಪ್ರಕರಣಗಳಲ್ಲಿ 955 ಪ್ರಕರಣಗಳ ಇಳಿಕೆ ದಾಖಲಾಗಿದೆ. ದೈನಂದಿನ ಸಕಾರಾತ್ಮಕತೆಯ ದರವು ಶೇ 0.90 ಶೇಕಡಾದಲ್ಲಿ ದಾಖಲಾಗಿದೆ. ಇದು 37 ದಿನಗಳಿಂದ ಶೇಕಡಾ ಎರಡಕ್ಕಿಂತ ಕಡಿಮೆಯಾಗಿದೆ.

ಸಾಪ್ತಾಹಿಕ ಸಕಾರಾತ್ಮಕತೆಯ ದರವು 1.20 ಶೇಕಡಾದಲ್ಲಿ ದಾಖಲಾಗಿದೆ. ಸಚಿವಾಲಯದ ಪ್ರಕಾರ, ಈ ಅಂಕಿ ಅಂಶವು 47 ದಿನಗಳವರೆಗೆ ಶೇಕಡಾ ಎರಡಕ್ಕಿಂತ ಕಡಿಮೆಯಾಗಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 3,37,87,047 ಕ್ಕೆ ಏರಿದೆ, ಆದರೆ ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.34 ರಷ್ಟಿದೆ. ರಾಷ್ಟ್ರವ್ಯಾಪಿ ಕೊವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ದೇಶದಲ್ಲಿ ಇದುವರೆಗೆ ನಿರ್ವಹಿಸಲಾದ ಡೋಸ್‌ಗಳ ಒಟ್ಟು ಸಂಖ್ಯೆ 109.63 ಕೋಟಿ ಮೀರಿದೆ.

ಇದನ್ನೂ ಓದಿಸಿಂಘು ಗಡಿಯಲ್ಲಿ ಮತ್ತೊಂದು ಅನುಮಾನಾಸ್ಪದ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ರೈತನ ಶವ ಪತ್ತೆ

Published On - 10:50 am, Wed, 10 November 21