ಬೆಂಗಳೂರು, (ಅಕ್ಟೋಬರ್ 12): ಅತ್ತಿಬೆಲೆ ಪಟಾಕಿ ಅಗ್ನಿ ದುರಂತದಲ್ಲಿ (Attibele Fire Crackers Tragedy) ಗಾಯಗೊಂಡಿದ್ದ ಯುವಕನೋರ್ವ ಮೃತಪಟ್ಟಿದ್ದಾನೆ. ಇದರೊಂದಿಗೆ ದರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಅಗ್ನಿ ದುರಂತದಲ್ಲಿ ಗಾಯಗೊಂಡಿದ್ದ ಬೊಮ್ಮನಹಳ್ಳಿಯ ಗಾರೇಬಾವಿಪಾಳ್ಯದ ನಿವಾಸಿ ವೆಂಕಟೇಶ್ ಅವರು ಇಂದು (ಅಕ್ಟೋಬರ್ 12) ಬೆಳಗ್ಗೆ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಸ್ನೇಹಿತನ ಬರ್ತಡೇಗೆಂದು ಅತ್ತಿಬೆಲೆಯ ಬಾಲಾಜಿ ಟ್ರೇಡರ್ಸ್ಗೆ ಪಟಾಕಿ ಖರೀದಿಸಲು ಹೋಗಿದ್ದರು. ಅದೇ ವೇಳೆಯೇ ಅಗ್ನಿ ದುರಂತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ವೆಂಕಟೇಶ್ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದರು. ಬೆಂಕಿ ಅವಘಡದಲ್ಲಿ 50ರಷ್ಟು ದೇಹ ಸುಟ್ಟಿತ್ತು. ಕೂಡಲೇ ಗಾಯಾಳು ವೆಂಕಟೇಶ್ ನನ್ನು ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ: ನಾಲ್ವರು ಅಧಿಕಾರಿಗಳ ಅಮಾನತು, ಇನ್ನಷ್ಟು ತಲೆದಂಡ ಸಾಧ್ಯತೆ
ಇದೇ ಅಕ್ಟೋಬರ್ 07ರಂದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಅತ್ತಿಬೆಲೆಯಲ್ಲಿ (Attibele) ಪಟಾಕಿ ಗೋದಾಮಿನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಈ ಅಗ್ನಿ ಅವಘಡದಲ್ಲಿ ಪಟಾಕಿಗಳು ಹೊತ್ತಿ ಉರಿದಿದ್ದವು. ಇದರಿಂದ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಮೂಲದ 15 ಜನ ಮೃತಪಟ್ಟಿದ್ದರು. ಇನ್ನು ಪಟಾಕಿ ಖರೀದಿಗೆ ಹೋಗಿದ್ದ ವೆಂಕಟೇಶ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದ.
ಒಟ್ಟಿನಲ್ಲಿ ಗೆಳೆಯನ ಹುಟ್ಟುಹಬ್ಬವನ್ನು ಭರ್ಜರಿಯಾಗಿಯಾಗಿ ಆಚರಿಸಲು ಪಟಾಕಿ ಖದೀಸಲು ಹೋಗಿದ್ದ ವೆಂಕಟೇಶ್ ಇದೀಗ ದುರಂತ ಅಂತ್ಯ ಕಂಡಿದ್ದಾನೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ