ಬೆಂಗಳೂರು: ಬೆಂಗಳೂರಿನಲ್ಲಿ ಗ್ಲಾಸ್ಸ್ಲ್ಯಾಬ್ ಗಳು ಅನ್ಲೋಡ್ ಮಾಡುವಾಗ ಅವಘಡ ಸಂಭವಿಸಿ ಆಟೋ ಚಾಲಕ ಮೃತಪಟ್ಟ ಘಟನೆ ಇಂದು ಸಂಜೆ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ವಸಂತಪುರ ರಸ್ತೆಯ ಬಿಕಾಸಿಪುರದಲ್ಲಿ ನಡೆದಿದೆ. ಅಮೃತಹಳ್ಳಿ ನಿವಾಸಿ ಲಗೇಜ್ ಆಟೋ ಚಾಲಕ ಶಂಕರ್(34) ಮೃತ ದುರ್ದೈವಿ.
ಗ್ಲಾಸ್ಸ್ಲ್ಯಾಬ್ ಗಳು ಅನ್ಲೋಡ್ ಮಾಡುವ ವೇಳೆ ಗ್ಲಾಸ್ಸ್ಲ್ಯಾಬ್ ಗಳು ಏಕಾಏಕಿ ಮುರಿದು ಬಿದ್ದಿವೆ. ಗ್ಲಾಸ್ ಸ್ಲ್ಯಾಬ್ ಗಳಿಗೆ ಸಿಕ್ಕಿ ಆಟೋ ಚಾಲಕ ಉಸಿರಾಡಲಾಗದೆ ನರಳಾಡಿ ಮೃತಪಟ್ಟಿದ್ದಾರೆ. ಚಾಲಕ ಶಂಕರ್ ನರಳಾಡ್ತಿರುವ ವಿಡಿಯೋ ಲಭ್ಯವಾಗಿದೆ. ಘಟನೆ ನಡೆದಾಗ ಸ್ಥಳದಲ್ಲಿ ಇದ್ದ ಸ್ಥಳೀಯರು ರಕ್ಷಿಸಲು ಯತ್ನಿಸಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಟೋ ಚಾಲಕ ಶಂಕರ್ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.
ಅಮೃತಹಳ್ಳಿಯ ಗೀತಾ ಗ್ಲಾಸ್ ಅಂಡ್ ಹಾರ್ಡವೇರ್ ಮತ್ತು ವಸಂತಪುರದ ಗಣೇಶ್ ಗ್ಲಾಸ್ ಅಂಡ್ ಫ್ಲೈವುಡ್ ಮಾಲೀಕರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಮೃತ ಶಂಕರ್ ಪತ್ನಿ ಮಾಲಾ ಎಫ್ಐಆರ್ ದಾಖಲಿಸಿದ್ದಾರೆ.
ಬಾರ್ನಲ್ಲಿ ಬಿಲ್ ಕೊಡುವ ವಿಚಾರಕ್ಕೆ ಗಲಾಟೆ; ಓರ್ವನ ಕೊಲೆ
ಬಾರ್ನಲ್ಲಿ ಬಿಲ್ ಕೊಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಧ್ಯಸ್ಥಿಕೆ ವಹಿಸಲು ಬಂದಿದ್ದ ವ್ಯಕ್ತಿಗೆ ಚಾಕು ಇರಿಯಲಾಗಿದೆ. ಪ್ರಕಾಶ್ ಎಂಬಾತನಿಗೆ ಚಾಕು ಇರಿದಿದ್ದು, ಪ್ರಕಾಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬಾರ್ನಲ್ಲಿ ಬಿಲ್ ಕೊಡುವ ವಿಚಾರಕ್ಕೆ ಮಂಜುನಾಥ್ ಗಲಾಟೆ ಮಾಡಿಕೊಂಡಿದ್ದನು. ಈ ವೇಳೆ ಅಲ್ಲೇ ಇದ್ದ ಪ್ರಕಾಶ್ ಮಧ್ಯಪ್ರವೇಶಿಸಿ ಬಿಲ್ ಕೊಡುವಂತೆ ಬುದ್ಧಿ ಮಾತು ಹೇಳಿದ್ದನು.
ನಂತರ ಪ್ರಕಾಶ್ ಬಾರ್ನಿಂದ ಆಚೆ ಬಂದಿದ್ದಾನೆ. ಈ ವೇಳೆ ಮಂಜುನಾಥ್ ಮತ್ತು ಮತ್ತೊರ್ವ ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದರು. ಸದ್ಯ ಇಂದಿರಾನಗರ ಪೊಲೀಸರು ಆರೋಪಿ ಮಂಜುನಾಥ್ನನ್ನು ಬಂಧಿಸಿದ್ದಾರೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 9:16 pm, Wed, 3 August 22