ಬೆಂಗಳೂರು: ನಗರದ ಆಟೋರಿಕ್ಷಾ ಚಾಲಕರು (Auto Rrickshaw) ಮಧ್ಯವರ್ತಿಗಳ ಕಾಟವಿಲ್ಲದೆ ಕೋಟ್ಯಾಂತರ ರೂ. ಹಣ ಸಂಪಾದಿಸುವ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಹೌದು ಆಟೋರಿಕ್ಷಾ ಚಾಲಕರ ಸಂಘ ನವೆಂಬರ್ 2022 ರಲ್ಲಿ “ನಮ್ಮ ಯಾತ್ರಿ” (Namma Yatri) ಎಂಬ ಆ್ಯಪ್ನ್ನು ತಯಾರಿಸಿದ್ದಾರೆ. ಈ ಆ್ಯಪ್ ಮೂಲಕ ಪ್ರಯಾಣಿಕರು ಆಟೋ ರಿಕ್ಷವನ್ನು ಬುಕ್ ಮಾಡಹುದಾಗಿದೆ. ನವೆಂಬರ್ನಿಂದ ಇಲ್ಲಿಯವರಗೆ ಆ್ಯಪ್ ಮೂಲಕ ರಿಕ್ಷಾ ಚಾಕಲರು ಸುಮಾರು 5.6 ಕೋಟಿ ರೂ. ಹಣ ಸಂಪಾದಿಸಿದ್ದಾರೆ. ಆ್ಯಪ್ನಿಂದ ದೊರೆತ ಮಾಹಿತಿ ಪ್ರಕಾರ 41,112 ರಿಕ್ಷಾ ಚಾಲಕರು ಮತ್ತು 3.35,653 ಬಳಕೆದಾರರು ಆ್ಯಪ್ನಲ್ಲಿ ನೊಂದಾಯಿಸಿಕೊಂಡಿದ್ದಾರೆ. ಮಾರ್ಚ್ 6ರವರೆಗು ಚಾಲಕರು 3,37,762 ಟ್ರೀಪ್ಗಳನ್ನು ಪೂರ್ಣಗೊಳಿಸಿದ್ದು, ಮಾರ್ಚ್ 5ರ ವರೆಗೆ 9 ಲಕ್ಷ ಹಣ ಗಳಸಿದ್ದಾರೆ.
ಆಟೋರಿಕ್ಷಾ ಚಾಲಕರ ಸಂಘ ಈ ಆ್ಯಪ್ನ್ನು ಪರಿಚಯಿಸಿದ್ದು, ಈ ಆ್ಯಪ್ ಮೂಲಕ ಪಾರದರ್ಶಕತೆ ಮತ್ತು ವಸ್ತುನಿಷ್ಠತೆಯಿಂದ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿದೆ. ಆ್ಯಪ್ನಲ್ಲಿ ಸಮಯ, ಚಾಲಕರ ಲಭ್ಯತೆ ಡ್ಯಾಶ್‌ಬೋರ್ಡ್ ಚಾಲಕರ ಲಭ್ಯತೆ, ಟ್ರಿಪ್‌ಗಳ ವಿವರ, ಹೆಚ್ಚಿನ ರೈಡರ್‌ಶಿಪ್ ಹೊಂದಿರುವ ಬೆಂಗಳೂರಿನ ಪ್ರಮುಖ ಐದು ಪ್ರದೇಶಗಳ ನೈಜ-ಸಮಯದ ಡೇಟಾವನ್ನು ಸಹ ತೋರಿಸುತ್ತದೆ ಎಂದು ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿದ್ದಾರೆ.
ಸಾಯಂಕಾಲ 6:30ರ ಹೊತ್ತಿಗೆ ಮಹದೇವಪುರ, ಬ್ಯಾಟರಾಯನಪುರ, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ಈ ಐದು ಪ್ರದೇಶಗಳಲ್ಲಿ ಹೆಚ್ಚಿನ ಜನರು ನಮ್ಮ ಯಾತ್ರಿ ಆ್ಯಪ್ ಮೂಲಕ ಸಂಚರಿಸುತ್ತಾರೆ. ಬೆಂಗಳೂರಿನಲ್ಲಿ ದಿನಕ್ಕೆ ಸರಾಸರಿ 9,000 ಟ್ರಿಪ್‌ಗಳು ಪೂರ್ಣಗೊಳ್ಳುತ್ತವೆ. ಆ್ಯಪ್ನ ಡ್ಯಾಶ್‌ಬೋರ್ಡ್‌ನಲ್ಲಿ ನೈಜ-ಸಮಯದ ಅಂಕಿಅಂಶ ಕಾಣುತ್ತದೆ. ಆದರೆ ಸ್ಥಳದ ನಿಖರತೆಯ ವಿಷಯದಲ್ಲಿ ನಾವು ತಾಂತ್ರಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ, ಅದನ್ನು ಈಗ ಬಹುತೇಕ ಪರಿಹರಿಸಲಾಗಿದೆ ಎಂದು ಹೇಳಿದರು.
ಸರ್ಕಾರದ ನಿಯಮಗಳ ಪ್ರಕಾರ, ಮೊದಲ 2 ಕಿಮೀಗೆ ರೂ 30 ಮತ್ತು ನಂತರದ ಕಿಲೋಮೀಟರ್‌ಗಳಿಗೆ ರೂ 15 ಶುಲ್ಕ ವಿಧಿಸುತ್ತದೆ. ಅಪ್ಲಿಕೇಶನ್ ಪ್ರತಿ ಬುಕಿಂಗ್‌ಗೆ ರೂ 10 ಪಿಕಪ್ ದರವನ್ನು ವಿಧಿಸುತ್ತದೆ. ಆದಾಗ್ಯೂ, ಡೆವಲಪರ್‌ಗಳು 3 ಕಿಮೀ ವ್ಯಾಪ್ತಿಯೊಳಗೆ 55 ರೂ. (ಪಿಕಪ್ ಶುಲ್ಕ ರೂ 10 ಸೇರಿದಂತೆ) ದರ ನಿಗದಿಪಡಿಸಲಾಗಿದೆ. ಇನ್ನು 2 ಕಿಮೀ ವ್ಯಾಪ್ತಿಯೊಳಗೆ ಮೆಟ್ರೋ ನಿಲ್ದಾಣದಿಂದ ಮನೆಗೆ ಡ್ರಾಪ್ ಮಾಡಲು 40 ರೂ (ರೂ. 10 ರ ಪಿಕಪ್ ಶುಲ್ಕ ಸೇರಿದಂತೆ) ದರ ವಿಧಿಸಲು ಯೋಚಿಸಲಾಗುತ್ತಿದೆ. ಆಸ್ಪತ್ರೆಯಿಂದ ಮನೆಗೆ ಪಿಕ್ಅಪ್ ಮತ್ತು ಡ್ರಾಪ್ ಸೇವೆಗಳನ್ನು ಸಹ ಇದೇ ರೀತಿ ಹೊರತರಲಾಗುವುದು ಎಂದು ತಿಳಿಸಿದರು.
ಸುರಕ್ಷತಾ ದೃಷ್ಟಿಯಿಂದ ವೈಟ್ ಬೋರ್ಡ್ ದ್ವಿಚಕ್ರ ಟ್ಯಾಕ್ಸಿಗಳನ್ನು ನಿಷೇಧಿಸಬೇಕು ಎಂದು ಆಟೋರಿಕ್ಷಾ ಚಾಲಕರ ಸಂಘವು ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ ಮಂಜುಳಾ ಅವರಿಗೆ ಪತ್ರ ಬರೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 am, Tue, 7 March 23