Avarebele Mela: ಚುಮು ಚುಮು ಚಳಿಗೆ ಅವರೆಬೇಳೆಯ ವೆರೈಟಿ ಖಾದ್ಯ ಸವಿದು ಎಂಜಾಯ್ ಮಾಡುತ್ತಿರುವ ಸಿಟಿ ಮಂದಿ

| Updated By: ಆಯೇಷಾ ಬಾನು

Updated on: Jan 07, 2024 | 7:19 AM

ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನ್ಯಾಷನಲ್ ಕಾಲೇಜು ಮೈದಾನದಲ್ಲಿ 24ನೇ ಆವೃತ್ತಿಯ ಅವರೆ ಬೇಳೆ ಮೇಳ ನಡಿಯುತ್ತಿದೆ. ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಮೇಳವನ್ನು ಆಯೋಜಿಸಲಾಗಿದ್ದು, ಸಿಲಿಕಾನ್​ ಸಿಟಿ ಜನರಿಗೆ ಹೊಸ ವರ್ಷದ ಆರಂಭದಲ್ಲೇ ಅವರೆ ಬೆಳೆ ವಿವಿಧ ಫುಡ್ ಸವಿಯುವ ಅವಕಾಶ ಸಿಕ್ಕಿದೆ.

Avarebele Mela: ಚುಮು ಚುಮು ಚಳಿಗೆ ಅವರೆಬೇಳೆಯ ವೆರೈಟಿ ಖಾದ್ಯ ಸವಿದು ಎಂಜಾಯ್ ಮಾಡುತ್ತಿರುವ ಸಿಟಿ ಮಂದಿ
ಅವರೆಬೇಳೆ ಮೇಳ
Follow us on

ಬೆಂಗಳೂರು, ಜ.07: ಪ್ರತಿ ವರ್ಷ ಸಂಕ್ರಾಂತಿ ಹಬ್ಬ ಬಂದ್ರೆ ಸಾಕು ಬೆಂಗಳೂರಿನಲ್ಲಿ ಅವರೆಕಾಯಿ ಘಮಲು ಜೋರಾಗಿರುತ್ತೆ.‌ ಈ ವರ್ಷವು ಅವರೆಕಾಯಿ ಮೇಳ (Avarebele Mela) ಆರಂಭವಾಗಿದ್ದು, ಅವರೆಕಾಯಿಯಿಂದ ಮಾಡಿದ್ದ ಖಾಧ್ಯಗಳನ್ನ ತಿಂದು ಸಿಲಿಕಾನ್ ಸಿಟಿ (Bengaluru) ಮಂದಿ ಎಂಜಾಯ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನ್ಯಾಷನಲ್ ಕಾಲೇಜು ಮೈದಾನದಲ್ಲಿ (National College Ground) 24ನೇ ಆವೃತ್ತಿಯ ಅವರೆ ಬೇಳೆ ಮೇಳ ನಡಿಯುತ್ತಿದೆ.

ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಮೇಳವನ್ನು ಆಯೋಜಿಸಲಾಗಿದ್ದು, ಸಿಲಿಕಾನ್​ ಸಿಟಿ ಜನರಿಗೆ ಹೊಸ ವರ್ಷದ ಆರಂಭದಲ್ಲೇ ಅವರೆ ಬೆಳೆ ವಿವಿಧ ಫುಡ್ ಸವಿಯುವ ಅವಕಾಶ ಸಿಕ್ಕಿದೆ. ಜ.05ರ ಶುಕ್ರವಾರದಿಂದ ಈ ಮೇಳ ಆರಂಭವಾಗಿದ್ದು, ಇನ್ನು ಎರಡು ದಿನಗಳ ಕಾಲ ನಡೆಯಲಿದೆ.‌ ಇನ್ನು ಕಳೆದ ವರ್ಷ ಸುಮಾರು 40 ಸ್ಟಾಲ್‌ಗಳಿದ್ದರೆ, ಈ ವರ್ಷ ಸುಮಾರು 80 ಸ್ಟಾಲ್‌ಗಳಿವೆ. ಹಿರಿಯ ನಾಗರಿಕರಿಗೆ ವಿಶೇಷ ಕೌಂಟರ್ ಜೊತೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಸುಮಾರು ನೂರಕ್ಕೂ ಹೆಚ್ಚು ವೆರೈಟಿ ಫುಡ್​ಗಳು ಫುಡ್ ಪ್ರಿಯರನ್ನ ಕೈಬೀಸಿ ಕರೆಯುತ್ತಿವೆ.

ಇದನ್ನೂ ಓದಿ: ಚಿತ್ರಸಂತೆಗೆ ಬೆಂಗಳೂರು ಸಜ್ಜು: ವಿಶೇಷ ಮೆಟ್ರೋ ಫೀಡರ್​​ ಸೇವೆ, ಮಾರ್ಗ ಬದಲಾವಣೆ ಕುರಿತಾದ ಮಾಹಿತಿ ಇಲ್ಲಿದೆ

ಇನ್ನು ಪಿಜ್ಜಾ, ಬರ್ಗರ್, ಕೆಎಫ್‍ಸಿ ತಿಂದು ಬೋರಾದ ಫುಡ್ ಪ್ರಿಯರಿಗೆ ಈಗ, ಅವರೇ ಫುಡ್ ಸವಿಯೋ ಚಾನ್ಸ್ ಸಿಕ್ಕಿದೆ. ಅವರೆ ಬೇಳೆ ಸ್ವೀಟ್ಸ್ ಗೂ ಸೈ, ಅವರೆ ಬೇಳೆ ಚಾಟ್ಸ್ ಗೂ ಸೈ ಅಂತಾ ಅವರೆ ಬೇಳೆ ಪ್ರಿಯರಿಗೆ ರಸದೌತಣವಾಗಿದೆ.‌

ಅವರೆಕಾಯಿ ವೇಳಕ್ಕೆ ಹೋದರೆ ಇವುಗಳನ್ನು ಮಿಸ್ ಮಾಡಬೇಡಿ

ಅವರೆ ಬೇಳೆಯ ಕ್ರಿಸ್ಪಿ ಕ್ರಿಸ್ಪಿ ದೋಸೆ, ಗರಂ ಗರಂ ಅವರೆ ಪಾಯಸ, ಟೇಸ್ಟಿ ಟೇಸ್ಟಿ ಅವರೆ ಮಂಚೂರಿಯನ್, ವಡೆ, ಕೋಡುಬಳೆ, ಐಸ್‌ಕ್ರೀಂ, ಹಲ್ವಾ ಇತ್ಯಾದಿ.

ಒಟ್ಟಿನಲ್ಲಿ ಚುಮು ಚುಮು ಚಳಿಗೆ ಅವರೇ ಬೆಳೆ ಪುಡ್ಸ್ ಗಳು ಸಖತ್ ಟೆಸ್ಟ್ ಕೊಡ್ತಿದ್ದು, ನಿನ್ನೆ ವಿಕೇಂಡ್ ಹಿನ್ನೆಲೆ ಹೆಚ್ಚು ಸಂಖ್ಯೆಯಲ್ಲಿ ಜನ ಅವರೇ ವೇಳಕ್ಕೆ ಬಂದು ಎಂಜಾಯ್ ಮಾಡಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ