Bengaluru: ಕಿಡ್ನಿ ವೈಫಲ್ಯ ಹೊಂದಿದ ವ್ಯಕ್ತಿಗೆ ರೋಬೋಟ್ ನೆರವಿನಿಂದ ಮಗುವಿನ ಮೂತ್ರಪಿಂಡ ಕಸಿ

|

Updated on: Jun 29, 2023 | 9:17 AM

Bengaluru News: ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ವೈದ್ಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ರೋಬೊಟ್ ನೆರವಿನಿಂದ 13 ತಿಂಗಳ ಮಗುವಿನ ಮೂತ್ರಪಿಂಡವನ್ನು ಕಸಿ ಮಾಡಿದ್ದಾರೆ.

Bengaluru: ಕಿಡ್ನಿ ವೈಫಲ್ಯ ಹೊಂದಿದ ವ್ಯಕ್ತಿಗೆ ರೋಬೋಟ್ ನೆರವಿನಿಂದ ಮಗುವಿನ ಮೂತ್ರಪಿಂಡ ಕಸಿ
ಕಿಡ್ನಿ ವೈಫಲ್ಯ ಹೊಂದಿದ ವ್ಯಕ್ತಿಗೆ ರೋಬೋಟ್ ನೆರವಿನಿಂದ ಮಗುವಿನ ಮೂತ್ರಪಿಂಡ ಕಸಿ ಮಾಡಿದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ವೈದದ್ಯರು (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 30 ವರ್ಷದ ರೋಗಿಯೊಬ್ಬರಿಗೆ ನಗರದ ಫೋರ್ಟಿಸ್ ಆಸ್ಪತ್ರೆ (Fortis Hospital) ವೈದ್ಯರ ತಂಡ ರೋಬೋಟ್ (Robot) ನೆರವಿನಿಂದ 13 ತಿಂಗಳ ಮಗುವಿನ ಮೂತ್ರಪಿಂಡವನ್ನು (Kidney) ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಪತ್ರೆಯ ಹಿರಿಯ ನಿರ್ದೇಶಕ (ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ) ಡಾ. ಮೋಹನ್ ಕೇಶವಮೂರ್ತಿ ಅವರು ನಾಲ್ಕು ಗಂಟೆಗಳಲ್ಲಿ ರೋಬೋಟಿಕ್ ತಂತ್ರಗಳನ್ನು ಬಳಸಿಕೊಂಡು ಕಸಿ ಕಾರ್ಯವಿಧಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ರಕ್ತಹೀನತೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ರಾಘವ್ (ಹೆಸರು ಬದಲಾಯಿಸಲಾಗಿದೆ) ಅವರು ನಿಯಮಿತವಾಗಿ ಡಯಾಲಿಸಿಸ್​ನಿಂದ ಬಳಲುತ್ತಿದ್ದರು. ಹೀಗಾಗಿ ಇವರಿಗೆ ಮೂತ್ರಪಿಂಡ ಕಸಿ ಮಾಡುವ ಅವಶ್ಯಕವಾಗಿತ್ತು. ಇತ್ತ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ ಮಗುವಿನ ಕಿಡ್ನಿ ದಾನ ಮಾಡಲು ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಈ ಎರಡು ಪರೀಕ್ಷೆಗಳಿಂದ ನಿಮ್ಮ ಕಿಡ್ನಿಯ ಆರೋಗ್ಯವನ್ನು ತಿಳಿಯಿರಿ

ಅದರಂತೆ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಡಾ ಮೋಹನ್ ಕೇಶವಮೂರ್ತಿ ಅವರು ನಾಲ್ಕು ಗಂಟೆಗಳಲ್ಲಿ ರೋಬೋಟಿಕ್ ತಂತ್ರಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಮೂತ್ರಪಿಂಡ ಕಸಿ ನಡೆಸಿದರು. ಈ ಬಗ್ಗೆ ಸುದ್ದಿಸಂಸ್ಥೆ ಜೊತೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ಡಾ. ಮೋಹನ್, ಎರಡೂ ಮೂತ್ರಪಿಂಡಗಳನ್ನು ಒಟ್ಟಿಗೆ ಕಸಿ ಮಾಡುವ ಎನ್-ಬ್ಲಾಕ್ ಪ್ರಕ್ರಿಯೆಯು ಅಪರೂಪವಾಗಿದೆ ಎಂದು ಹೇಳಿದರು.

ಮೂತ್ರಪಿಂಡಗಳ ಬೆಂಚ್ ಶಸ್ತ್ರಚಿಕಿತ್ಸೆಗೆ ಅತ್ಯಂತ ನಿಖರತೆಯ ಅಗತ್ಯವಿರುತ್ತದೆ. ದಾನಿ ಮತ್ತು ಸ್ವೀಕರಿಸುವವರ ರಕ್ತನಾಳಗಳನ್ನು ಮತ್ತು ಮೂತ್ರಪಿಂಡದ ಮೂತ್ರನಾಳಗಳನ್ನು ದಾನಿಯ ಮೂತ್ರಕೋಶಕ್ಕೆ ಸಂಪರ್ಕಿಸಲು ವೈದ್ಯರು ರೋಬೋಟ್‌ ಸಹಾಯ ಪಡೆದಿದ್ದಾರೆ. ದಾನಿಯ ವಯಸ್ಸು ಮುಖ್ಯವಲ್ಲ. ಏಕೆಂದರೆ ಮೂತ್ರಪಿಂಡದ ಕಾರ್ಯವು ರಕ್ತವನ್ನು ಶುದ್ಧೀಕರಿಸುವುದಾಗಿದೆ ಮತ್ತು ವಯಸ್ಕರ ದೇಹದಲ್ಲಿ ಕಸಿ ಮಾಡಿದ ನಂತರ ಅದು ಕಾರ್ಯಕ್ಕೆ ಸರಿಹೊಂದುತ್ತದೆ. ಸುಮಾರು 300 ಪ್ರತಿಶತದಷ್ಟು ವಿಸ್ತರಿಸುತ್ತದೆ ಎಂದು ಡಾ.ಮೋಹನ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ