ಬೆಂಗಳೂರು: ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಬಾಲಕೃಷ್ಣ ಆಯ್ಕೆ ಆಗಿದ್ದಾರೆ. ಗೌರವಾಧ್ಯಕ್ಷರಾಗಿ ಡಾ. ಆಂಜನಪ್ಪ, ಉಪಾಧ್ಯಕ್ಷರಾಗಿ ಡಾ. ರೇಣುಕಾ ಪ್ರಸಾದ್, ಹನುಮಂತಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಕೋನಪ್ಪರೆಡ್ಡಿ, ಸಹಾಯಕ ಕಾರ್ಯದರ್ಶಿಯಾಗಿ ರಾಘವೇಂದ್ರ, ಖಜಾಂಚಿ ಆಗಿ ಆರ್. ಪ್ರಕಾಶ್ ಆಯ್ಕೆ ಆಗಿದ್ದಾರೆ. ಎಂಟು ವರ್ಷಗಳ ಬಳಿಕ ಒಕ್ಕಲಿಗ ಸಂಘಕ್ಕೆ ಚುನಾವಣೆ ನಡೆದಿದೆ. ಒಕ್ಕಲಿಗ ಸಂಘದ ನೂತನ ಅಧ್ಯಕ್ಷ ಬಾಲಕೃಷ್ಣಗೆ ಆಡಳಿತಾಧಿಕಾರಿ ಕರಿಗೌಡ ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಸಂಘದಲ್ಲಿ ಹೆಚ್ಚು ಸಮಯ ಕಳೆದಿದ್ದೆನೆ ನಾನು. ಬಾಲಕೃಷ್ಣ ಅವರು ನನ್ನನ್ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಬೇಡಿ ಎಂದಿದ್ರು. ಹೀಗಾಗಿ ಅಂಡರ್ಸ್ಟಾಂಡಿಂಗ್ ನಿಂದ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆ. ಬಾಲಕೃಷ್ಣ ಅವರು ಮೂರು ಬಾರಿ ಗೆದ್ದಿದ್ದಾರೆ. ಅವರು ಶಾಸಕ ಕೂಡ ಹೌದು. ಅವರು 35 ಜನರನ್ನ ಒಟ್ಟಿಗೆ ಕರೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಅಧ್ಯಕ್ಷರಾಗಿ ಕೆಲಸ ಮಾಡಲಿ ನಾನು ವೈದ್ಯನಾಗಿ ಕೆಲಸ ಮಾಡುತ್ತೆನೆ. ತಂಡದಲ್ಲಿ ಗೆದ್ದವರು ಸೋತವರು ಇದ್ದಾರೆ ಎಲ್ಲರನ್ನೂ ಸರಿದೂಗಿಸಬೇಕು ಎಂದು ಡಾ. ಆಂಜನಪ್ಪ ಹೇಳಿಕೆ ನೀಡಿದ್ದಾರೆ.
ಇದೊಂದು ಸಮುದಾಯದ ಗೆಲುವು. 20 ಮತದಾನದಿಂದ ಗೆಲುವು ಸಿಕ್ಕಿದೆ. ಸಂಘದ ಏಳಿಗೆಗೆ ದುಡಿಯುತ್ತೆವೆ. ಸಂಘದಲ್ಲಿ ಹೊಸ ಬದಲಾವಣೆ ತರುತ್ತೆವೆ. ಕೊರೊನಾ ಒಮಿಕ್ರಾನ್ ಬಂದಿದೆ, ಆಸ್ಪತ್ರೆಗಳ ವ್ಯವಸ್ಥೆಯಲ್ಲಿ ಅತ್ಯುತ್ತಮ ಸೇವೆ ನೀಡುತ್ತೇವೆ ಎಂದು ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಆಯ್ಕೆ ಆದ ಬಾಲಕೃಷ್ಣ ಹೇಳಿದ್ದಾರೆ.
ಶ್ರವಣಬೆಳಗೊಳದ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಸಂಘದ ಹಿಂದಿನ ಅಧ್ಯಕ್ಷ ಕೆಂಚಪ್ಪಗೌಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು. ಆದ್ರೆ, ಅಂತಿಮವಾಗಿ ಶಾಸಕ ಸಿ.ಎನ್. ಬಾಲಕೃಷ್ಣ ಗೆಲುವು ಸಾಧಿಸಿದ್ದಾರೆ. 35 ನಿರ್ದೇಶಕರ ಪೈಕಿ 20 ನಿರ್ದೇಶಕರು ಬಾಲಕೃಷ್ಣ ಪರ ಮತ ಚಲಾಯಿಸಿದ್ದಾರೆ. ಇದರಿಂದ ಬಾಲಕೃಷ್ಟ ಅವರು ಬಹುಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದ ಸಂಘದ ಮಾಜಿ ಅಧ್ಯಕ್ಷ ಬಿ. ಕೆಂಚಪ್ಪ ಗೌಡ 14 ಮತ ಪಡೆದು ಪರಾಜಿತಗೊಂಡಿದ್ದಾರೆ.
ಇದನ್ನೂ ಓದಿ: ಇಂದು ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಫಲಿತಾಂಶ ಪ್ರಕಟ; 221 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಇದನ್ನೂ ಓದಿ: ರಾಜ್ಯದಲ್ಲಿ ರಂಗೇರಿದ ಮತದಾನ: ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತದಾನ ಇಂದು
Published On - 10:54 pm, Wed, 5 January 22