ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಒಂದೇ!

ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಕೆಲ ದಿನಗಳ ಹಿಂದೆ AQI 200 ದಾಟಿತ್ತು. ಇಂದೂ ಸಹ 173ಕ್ಕೆ ತಲುಪಿರುವ ಗಾಳಿಯ ಗುಣಮಟ್ಟ ಇನ್ನೂ ಕುಸಿಯಬಹುದೆಂದು ಹೇಳಲಾಗಿದೆ. PM2.5 ಮತ್ತು PM10 ಪ್ರಮಾಣ ಹೆಚ್ಚಳದಿಂದ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತಿದ್ದು, ಮಕ್ಕಳು ಮತ್ತು ವೃದ್ಧರು ಜಾಗರೂಕರಾಗಿರಬೇಕು ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಒಂದೇ!
ಬೆಂಗಳೂರಿನಲ್ಲಿ ಉಸಿರಾಡೋದು, ದಿನಕ್ಕೆ ಮೂರು ಸಿಗರೇಟ್ ಸೇದೋದು ಎರಡೂ ಸಮವಂತೆ!

Updated on: Dec 19, 2025 | 10:45 AM

ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ (Bengaluru Air Quality ಹೇಳುವಷ್ಟೇನು ಬದಲಾವಣೆ ಕಂಡಿಲ್ಲ. ಕಳೆದ ಹಲವು ದಿನಗಳಿಂದ 170 ರಿಂದ 200ರವೆಗೂ ಏರಿಳಿತ ಕಾಣುತ್ತಿರುವ ಗುಣಮಟ್ಟ ವಾಯು ಮಾಲಿನ್ಯಕ್ಕೂ ಕೊಡುಗೆ ನೀಡುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಉಸಿರಾಡುವ ಜನರು ದಿನಕ್ಕೆ 3.2 ಸಿಗರೇಟ್ ಸೇದಿದಷ್ಟೇ ಹಾನಿ ಅನುಭವಿಸುತ್ತಿದ್ದಾರೆ ಎಂದು AQI ತಿಳಿಸಿದೆ. ಇದು ಹೀಗೆ ಮುಂದುವರೆದರೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಿ ಜನರ ಜೀವಕ್ಕೇ ಕುತ್ತು ಬರುವ ಸಂಭವವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೆಂಗಳೂರನ್ನೂ ಮೀರಿಸಿದ ಬಳ್ಳಾರಿಯ ಕಳಪೆ ಏರ್ ಕ್ವಾಲಿಟಿ

ಕಳೆದ ಒಂದು ವಾರದಿಂದ ಹದಗೆಟ್ಟ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಸುಧಾರಣೆ ಆಗುತ್ತಿಲ್ಲ. ಈ ಒಂದು ವಾರದಲ್ಲಿ ಬೆಂಗಳೂರಿನಲ್ಲಿ ಕನಿಷ್ಠ ಗುಣಮಟ್ಟ 78 ಇದ್ದರೆ ಗರಿಷ್ಠ 200ರ ಗಡಿ ದಾಟಿತ್ತು. ಇದು ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿತ್ತು. ಇಂದು ಈ ಗಾಳಿಯ ಗುಣಮಟ್ಟ 173 ಇದ್ದು, ಸ್ವಲ್ಪ ಸುಧಾರಿಸಿಕೊಂಡಿದ್ದರೂ ಈ ಹಿಂದೆ ತಜ್ಞರು ಹೇಳಿದಂತೆ ಬೆಂಗಳೂರಿನ ಗಾಳಿಯ ಗುಣಮಟ್ಟ ಹೀಗೆ ಮುಂದುವರಿದರೆ ದೆಹಲಿಯ ಪರಿಸ್ಥಿತಿ ಎದುರಾಗಬಹುದು. ಬೆಂಗಳೂರು ಮಾತ್ರವಲ್ಲದೇ ಇತರ ಶಹರದಲ್ಲಿಯೂ ಕಳಪೆ ಗುಣಮಟ್ಟದ ಗಾಳಿಯ ಸಮಸ್ಯೆ ಎದುರಾಗಿದ್ದು, ಬಳ್ಳಾರಿಯಲ್ಲಂತೂ 224ರ ಮಟ್ಟಿಗೆ ಏರ್ ಕ್ವಾಲಿಟಿ ಹಾಳಾಗಿತ್ತು. ಇಂದೂ 197ರಲ್ಲಿಯುವ ಬಳ್ಳಾರಿಯ ಗಾಳಿಯ ಗುಣಮಟ್ಟ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಜನರ ಆರೋಗ್ಯದ ಮೇಲೆ ನೇರ ಪರಿಣಾಮ

ರಾಜ್ಯದೆಲ್ಲೆಡೆ ಉಂಟಾಗುತ್ತಿರುವ ಶೀತದಲೆಯ ಪರಿಣಾಮ ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 87ಕ್ಕೆ ತಲುಪಿದ್ದು, PM10 ಪ್ರಮಾಣ 113ಕ್ಕೆ ಇಳಿದಿದೆ. ಈ ಎರಡರಿಂದಲೂ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಭಯ ಹೆಚ್ಚುತ್ತಿದ್ದು, ಜನರು WHO ಮಾರ್ಗಸೂಚಿಯನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ ಬೆಂಗಳೂರಿಗರೇ ಮನೆಯಿಂದ ಹೊರ ಬರುವ ಮುನ್ನ ಎಚ್ಚರ! ಚಳಿಯ ಜೊತೆ ಕಳಪೆ ಏರ್ ಕ್ವಾಲಿಟಿ ನಿಮ್ಮ ಉಸಿರಿಗೆ ಮುಳುವಾದೀತು

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index):

  • ಬೆಂಗಳೂರು – 173
  • ಮಂಗಳೂರು – 111
  • ಮೈಸೂರು – 126
  • ಬೆಳಗಾವಿ – 154
  • ಕಲಬುರ್ಗಿ – 68
  • ಶಿವಮೊಗ್ಗ – 81
  • ಬಳ್ಳಾರಿ – 197
  • ಹುಬ್ಬಳ್ಳಿ- 91
  • ಉಡುಪಿ – 88
  • ವಿಜಯಪುರ – 153

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ ಗುಣ ಮಟ್ಟದ ಗಾಳಿಯು- 0-50, ಮಧ್ಯಮ – 50-100, ಕಳಪೆ – 100-150, ಅನಾರೋಗ್ಯಕರ – 150-200, ಗಂಭೀರ – 200 – 300 ಹಾಗೂ ಅಪಾಯಕಾರಿ  ಗುಣ ಮಟ್ಟದ ಗಾಳಿಯು 300 -500+ ಇರುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.