ಆಟವಾಡುತ್ತಿದ್ದ ಬಾಲಕನ ಮೇಲೆ ಇದೆಂತಾ ವಿಕೃತಿ?: ವಿಡಿಯೋ ನೋಡಿದ್ರೆ ರಕ್ತ ಕುದಿಯುತ್ತೆ
ಮನೆಮುಂದೆ ತನ್ನ ಪಾಡಿಗೆ ತಾನು ಆಟವಾಡಿಕೊಂಡಿದ್ದ ಬಾಲಕನ ಮೇಲೆ ದುಷ್ಟನೊಬ್ಬ ವಿಕೃತಿ ಮೆರೆದಿದ್ದಾನೆ. ಹಿಂಬದಿಯಿಂದ ಬಂದು ಬಾಲಕನ ಬೆನ್ನಿಗೆ ಬಿದ್ದ ಕಾರಣ, ಆತ ಮುಗ್ಗರಿಸಿ ಬಿದ್ದಿದ್ದಾನೆ. ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಸಂಬಂಧ ಬಾಲಕನ ತಾಯಿ ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 19: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನಿಗೆ ವ್ಯಕ್ತಿಯೋರ್ವ ಹಿಂಬದಿಯಿಂದ ಜಾಡಿಸಿ ಒದ್ದ ಘಟನೆ ಬೆಂಗಳೂರಿನ ತ್ಯಾಗರಾಜನಗರದಲ್ಲಿ ಡಿ.14ರಂದು ನಡೆದಿದೆ. ಅಜ್ಜಿ ಮನೆಗೆ ಬಂದಿದ್ದ ಬಾಲಕ ನೀವ್ ಜೈನ್ ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ. ಈ ವೇಳೆ ಬಂದ ರಂಜನ್ ಜಾಡಿಸಿ ಒದ್ದಿದ್ದರಿಂದ ಬಾಲಕ ಮುಗ್ಗರಿಸಿ ಬಿದ್ದಿದ್ದಾನೆ. ಫುಟ್ಬಾಲ್ ರೀತಿ ರಂಜನ್ ಒದ್ದಿದ್ದ ಕಾರಣ ಬಾಲಕನಿಗೆ ತರಚಿದ ಗಾಯಗಳಾಗಿವೆ. ಬಾಲಕನನ್ನು ರಂಜನ್ ಒದೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿ ವಿರುದ್ಧ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ರಂಜನ್ನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 19, 2025 11:54 AM
