ಮಂಗಳೂರು: ಫುಟ್ಬಾಲ್ ಟೂರ್ನ್ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ, ವಿಡಿಯೋ ವೈರಲ್
ಮಂಗಳೂರಿನ ಎಮ್ಮೆಕೆರೆ ಬಳಿ ಫುಟ್ಬಾಲ್ ಟೂರ್ನ್ಮೆಂಟ್ ನಡೆಯುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿ ಕುಸಿದುಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್, ಗಂಭೀರ ಪ್ರಮಾಣದ ಹಾನಿ, ಸಾವು-ನೋವು ಸಂಭವಿಸಿಲ್ಲ. ಘಟನೆಯ ದೃಶ್ಯಾವಳಿ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪ್ರೇಕ್ಷಕರ ಗ್ಯಾಲರಿ ಕುಸಿದ ವಿಡಿಯೋ ಇಲ್ಲಿದೆ ನೋಡಿ.
ಮಂಗಳೂರು, ಫೆಬ್ರವರಿ 17: ಫುಟ್ ಬಾಲ್ ಟೂರ್ನ್ಮೆಂಟ್ ನಡೆಯುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿ ಕುಸಿದ ಘಟನೆ ಕೆಲವು ದಿನಗಳ ಹಿಂದೆ ಮಂಗಳೂರಿನ ಎಮ್ಮೆಕೆರೆ ಬಳಿ ನಡೆದಿದೆ. ಫೆಬ್ರವರಿ 8 ರಂದು ರಾತ್ರಿ ನಡೆದ ಘಟನೆಯ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಬಿಎಸ್ಎನ್ಎಲ್ ವತಿಯಿಂದ ಆಯೋಜಿಸಿದ್ದ ಫುಟ್ ಬಾಲ್ ಟೂರ್ನ್ಮೆಂಟ್ ವೇಳೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್, ಪ್ರೇಕ್ಷಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬೊಳಾರ್ ಸೂಪರ್ ಲೀಗ್ನಿಂದ ಫುಟ್ ಬಾಲ್ ಟೂರ್ನ್ಮೆಂಟ್ ಆಯೋಜಿಸಲಾಗಿತ್ತು. ಗ್ಯಾಲರಿ ಬಿದ್ದ ಕೂಡಲೆ ಪ್ರೇಕ್ಷಕರು ಚಲ್ಲಾಪಿಲ್ಲಿಯಾದರು. ಸೀದಾ ಆಟದ ಮೈದಾನಕ್ಕೆ ನುಗ್ಗಿದರು. ನಂತರ ಅದನ್ನು ಸರಿಪಡಿಸಲು ಆಯೋಜಕರು ಒದ್ದಾಡಿದರು.
Latest Videos