ಸಿದ್ದರಾಮಯ್ಯ ಮುಂದುವರಿಯುತ್ತಾರೆ, ಮುಂದಿನ ಅವಧಿಗೂ ಅವರೇ ಸಿಎಂ: ಶಿವಾನಂದ ಪಾಟೀಲ್, ಸಚಿವ
ಯಾವ ನಾಯಕ, ಮಂತ್ರಿ ಅಥವಾ ಶಾಸಕ ಏನೇ ಹೇಳಿದರೂ ಅವರ ಧೋರಣೆಯಿಂದ ಒಂದು ಮಾತು ಸ್ಪಷ್ಟವಾಗುತ್ತದೆ, ಅವರಿಗೆ ಹೈಕಮಾಂಡ್ ಬಗ್ಗೆ ಕ್ಯಾರೆ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು, ಹೇಳಿಕೆ ನೀಡುವ ಉಸಾಬರಿಗೆ ಹೋಗಬಾರದು ಅಂತ ಹೇಳಿದರೂ ಹೇಳಿಕೆಗಳ ಪರ್ವ ಎಡೆಬಿಡದೆ ಸಾಗಿದೆ. ಒಂದಿಬ್ಬರನ್ನು ಖರ್ಗೆ ಉಚ್ಚಾಟಿಸಿದ ನಂತರವೇ ಇದು ಸರಿಹೋಗಬಹುದು.
ಬೆಳಗಾವಿ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಕೆಲ ಮಂತ್ರಿ ಮತ್ತು ಶಾಸಕರು ಒಂದು ವಾಡಿಕೆಯನ್ನು ರೂಢಿಸಿಕೊಂಡಿದ್ದಾರೆ ಮಾರಾಯ್ರೇ. ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಮೊದಲು ತಮ್ಮ ಅಭಿಪ್ರಾಯ ಹೇಳುತ್ತಾರೆ ನಂತರ ಅದೆಲ್ಲ ಹೈಕಮಾಂಡ್ಗೆ ಬಿಟ್ಟ ವಿಚಾರ, ಅದು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎನ್ನುತ್ತಾರೆ! ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಸಚಿವ ಶಿವಾನಂದ ಪಾಟೀಲ್ ಸಿದ್ದರಾಮಯ್ಯನವರೇ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಮತ್ತು ಮುಂದಿನ ಅವಧಿಗೂ ಅವರೇ ಮುಂದುವರಿಯುತ್ತಾರೆ ಎನ್ನುತ್ತಾರೆ. ನಂತರ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್ ವಿಷಯವಾಗಿ ಮಾತಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಖರ್ಗೆ ಸುಳಿವು ಬೆನ್ನಲ್ಲೇ ಡಿಕೆಶಿ ಮಾರ್ಮಿಕ ಟ್ವೀಟ್!

ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್

ಪ್ರತಿದಿನ ಮಾಧ್ಯಮಗಳೊಂದಿಗೆ ಮಾತಾಡುವ ರೇಣುಕಾಚಾರ್ಯಗೆ ವಿಷಯಗಳು ಸಿಗುತ್ತಿಲ್ಲ

VIDEO: ರಾಕಿ ಭಾಯ್ ಸ್ಟೈಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಕನ್ನಡಿಗನ ಎಂಟ್

ಹತ್ತಿರದ ಸಂಬಂಧಿಯೊಬ್ಬರ ಸಾವಿನ ಕಾರಣ ಪರಮೇಶ್ವರ್ ಭಾಗಿಯಾಗಿರಲಿಲ್ಲ: ಪಾಟೀಲ್
