ಕೆಲಸದಿಂದ ವಜಾ, ನ್ಯಾಯಕ್ಕಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆಯ ಚಿಮಣಿ ಹತ್ತಿದ ಕಾರ್ಮಿಕ ರಾಮಕೃಷ್ಣ
ರಾಮಕೃಷ್ಣ ಜೊತೆ ಕೆಲಸದಿಂದ ವಜಾ ಆಗಿರುವವರಲ್ಲಿ ಕೆಲವರು ಟಿವಿ9ನೊಂದಿಗೆ ಮಾತಾಡಿದ್ದು ಬೆಳಗ್ಗೆ ಸುಮಾರು 4 ಗಂಟೆಗೆ ಚಿಮಣಿ ಹತ್ತಿರುವ ರಾಮಕೃಷ್ಣ ಬಹಳ ಕಷ್ಟದಲ್ಲಿದ್ದಾರಂತೆ. ಅವರ ಪತ್ನಿಗೆ ಹೃದಯದ ಸರ್ಜರಿ ಆಗಿದ್ದು ಅವರಿಗೆ ಔಷಧೋಪಚಾರಕ್ಕಾಗಿ ತಿಂಗಳಿಗೆ ₹ 10,000 ಬೇಕಂತೆ. ಕಾರ್ಖಾನೆ ಕೊಡುತ್ತಿದ್ದ ಸಂಬಳ ತೀರ ಕಮ್ಮಿ ಮತ್ತು ಈಗ ಕೆಲಸದಿಂದಲೂ ತೆಗೆದು ಹಾಕಿದ್ದಾರೆ ಎನ್ನುತ್ತಾರೆ.
ಮಂಡ್ಯ: ಜಿಲ್ಲೆಯ ಪಾಂಡವಪುರದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಯೊಂದನ್ನು ನಿರಾಣಿ ಸಂಸ್ಥೆಯು 40 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದೆ. ಗುತ್ತಿಗೆ ಪಡೆದ ಕೂಡಲೇ ಅದು 19 ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿ ನಿರ್ಗತಿಕರಾಗುವಂತೆ ಮಾಡಿದೆ. ಹಾಗೆ ಕೆಲಸ ಕಳೆದುಕೊಂಡಿರುವವರಲ್ಲಿ ಒಬ್ಬರಾಗಿರುವ ರಾಮಕೃಷ್ಣ ಹೆಸರಿನ ಕಾರ್ಮಿಕ 510 ಅಡಿ ಎತ್ತರದ ಕಾರ್ಖಾನೆ ಚಿಮಣಿ ಹತ್ತಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಅವರ ಜೊತೆಗಾರರು ಪರಿಪರಿಯಾಗಿ ವಿನಂತಿಸಿಕೊಂಡರೂ ರಾಮಕೃಷ್ಣ ಕೆಳಗಿಳಿದು ಬರಲು ತಯಾರಿಲ್ಲ. ವಜಾ ಮಾಡಿರುವ ಎಲ್ಲರನ್ನು ವಾಪಸ್ಸು ಕೆಲಸಕ್ಕೆ ಸೇರಿಸಿಕೊಂಡ ಬಳಿಕವೇ ತಾನು ಕೆಳಗಿಳಿಯುವುದಾಗಿ ಅವರು ಹೇಳುತ್ತಿರುವರೆಂದು ನಮ್ಮ ಮಂಡ್ಯ ವರದಿಗಾರ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಚ್ಚುವ ಸ್ಥಿತಿಗೆ ಬಂದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ; ಬೀದಿಗೆ ಬಂತು ಕಾರ್ಮಿಕರ ಬದುಕು