ಮೈಸೂರಲ್ಲಿ ಕುಟುಂಬದ ಮೂವರಿಗೆ ವಿಷವಿಕ್ಕಿ ನಂತರ ತಾನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ವ್ಯಕ್ತಿ
ನಮ್ಮ ಮೈಸೂರು ಪ್ರತಿನಿಧಿ ನೀಡುವ ಮಾಹಿತಿ ಪ್ರಕಾರ ಚೇತನ್ ಮೂವರಿಗೆ ವಿಷವುಣ್ಣಿಸಿ ಕೊಂದು ತಾನು ನೇಣು ಹಾಕಿಕೊಳ್ಳುವ ಮೊದಲು ಸಂಬಂಧಿಕರೊಬ್ಬರಿಗೆ ಧ್ವನಿಸಂದೇಶ ಕಳಿಸಿ ತಾನು ಮಾಡಲಿರುವ ಕೃತ್ಯದ ಬಗ್ಗೆ ಹೇಳಿದ್ದಾರೆ. ಸಂಬಂಧಿಕ ವಾಪಸ್ಸು ಫೋನ್ ಮಾಡಿದಾಗ ಕರೆಗೆ ಉತ್ತರ ಸಿಕ್ಕಿಲ್ಲ. ನಂತರ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಅನಾಹುತ ನಡೆದುಹೋಗಿತ್ತು.
ಮೈಸೂರು: ನಗರದ ವಿಶ್ವೇಶ್ವರನಗರದಲ್ಲಿರುವ ಸಂಕಲ್ಪ್ ಸಿರೀನ್ ಹೆಸರಿನ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ನಲ್ಲಿ ಅತ್ಯಂತ ದಾರುಣ ಘಟನೆಯೊಂದು ನಿನ್ನೆ ನಡೆದಿದೆ. ಇಲ್ಲಿನ ಎರಡು ಫ್ಲ್ಯಾಟ್ಗಳಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಸಾವಿಗೆ ಶರಣಾಗಿದ್ದಾರೆ. ಸತ್ತವರನ್ನು ಕುಟುಂಬದ ಯಜಮಾನ ಚೇತನ್ (45), ಅವರ ಪತ್ನಿ ರೂಪಾಲಿ (43), ಮಗ ಕುಶಾಲ್ (15) ಮತ್ತು ಚೇತನ್ ತಾಯಿ ಪ್ರಿಯಂವದಾ (62) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಹಾಸನ ಮೂಲದ ಚೇತನ್ ಉಳಿದ ಮೂವರಿಗೆ ವಿಷವುಣ್ಣಿಸಿ ನಂತರ ತಾನು ನೇಣುಬಿಗಿದುಕೊಂಡಿದ್ದಾರೆ. ಅವರ ದೇಹ ನೇತಾಡುವ ಸ್ಥಿತಿಯಲ್ಲಿ ಸಿಕ್ಕರೆ ಉಳಿದವರ ದೇಹಗಳು ನೆಲದ ಮೇಲಿದ್ದವು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ದಂಪತಿ ಆತ್ಮಹತ್ಯೆ, ಸೊಸೆ ತವರು ಮನೆ ಸೇರಿದ್ದಕ್ಕೆ ಸಾವಿಗೆ ಶರಣಾದ್ರಾ?
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

