
ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನಲ್ಲಿ ದಿನೇ ದಿನೇ ವಾಯು ಗುಣಮಟ್ಟ ಕುಸಿಯುತ್ತಲೇ ಇದ್ದು, ವಾಯುಮಾಲಿನ್ಯ ಹೆಚ್ಚುತ್ತಿದೆ. ನಗರದಲ್ಲಿ ಇದೇ ವಾತಾವರಣ ಮುಂದುವರೆದರೆ ಮುಂದೊಂದು ದಿನ ದೆಹಲಿಯಂತೆ ಇಲ್ಲಿಯೂ ಉಸಿರಾಡುವುದೂ ಕಷ್ಟವೆಂಬಂತಾಗುತ್ತೆ ಎಂಧು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ನಿನ್ನೆ (ಡಿ.12) ಗಾಳಿಯ ಗುಣಮಟ್ಟ ಸೂಚ್ಯಂಕ (AQI) 175ಕ್ಕೆ ತಲುಪಿತ್ತು. ಇಂದು ಗಾಳಿಯ ಗುಣಮಟ್ಟ ಸುಮಾರು 186 ರಿಂದ 206ರ ವರೆಗೂ ಏರಿಕೆ ಕಂಡಿದ್ದು, ಉಸಿರಾಟಕ್ಕೆ ತೀವ್ರ ಬಿಕ್ಕಟ್ಟು ಎದುರಾಗಲಿದೆ.
ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, 5ಕ್ಕಿಂತ ಹೆಚ್ಚಿನ PM2.5(Particulate Matter) ಜನರಲ್ಲಿ ಉಸಿರಾಟದ ಸಮಸ್ಯೆ ತಂದೊಡ್ಡಬಹುದು. ಆದರೆ ಭಾರತೀಯ ಸುರಕ್ಷಾ ಮಿತಿಗಳ ಪ್ರಕಾರ 40ಕ್ಕಿಂತ ಕಡಿಮೆ PM2.5 ಇದ್ದರೂ ಸ್ವೀಕಾರಾರ್ಹವಾಗಿದೆ. PM10 ಪ್ರಮಾಣವೂ 50 ಮೈಕ್ರೋಗ್ರಾಮ್ವರೆಗೂ ಇರಬಹುದು.ಈಗಾಗಲೇ ಇಂದು ಬೆಂಗಳೂರಿನ ಗಾಳಿಯ ಗುಣಮಟ್ಟ 200 ದಾಟಿರುವುದರಿಂದ ಉಸಿರಾಟದ ತೊಂದರೆಯಿರುವವರು ಜಾಗರೂಕರಾಗಿರಬೇಕಿದೆ. ಇಂದು ನಗರದಲ್ಲಿ PM2.5 95 ಮೈಕ್ರೋಗ್ರಾಮ್ ಇದ್ದು, PM10 ಪ್ರಮಾಣ 96 ಇದೆ.
PM ಎಂದರೆ ಗಾಳಿಯಲ್ಲಿರುವ ಕಣಗಳು. PM2.5ನ ಕಣಗಳು ವಾಹನ ಹೊಗೆ, ಕೈಗಾರಿಕಾ ಹೊಗೆ, ಹಾಗೂ ಇಂಧನಗಳ ಹೊಗೆಯಿಂದ ಉತ್ಪತ್ತಿಯಾಗುತ್ತವೆ ಹಾಗೂ PM10 ನ ಕಣಗಳು ಕನ್ಸ್ಟ್ರಕ್ಷನ್ನ ಧೂಳು, ಪರಾಗದಿಂದೆಲ್ಲಾ ಉತ್ಪತ್ತಿಯಾಗುತ್ತವೆ. ಎರಡರ ಪ್ರಮಾಣವೂ ಮಿತಿ ಮೀರಿದಾಗ ಸಾರ್ವಜನಿಕಲ್ಲಿ ಆಸ್ತಮಾದಂತಹ ಉಸಿರಾಟದ ತೊಂದರೆಗಳು ಎದುರಾಗುತ್ತವೆ. ಕೇವಲ PM ಮಾತ್ರವಲ್ಲೆ ಖಾರ್ಬನ್ ಮೊನಾಕ್ಸೈಡ್, ಓಜೋನ್, ನೈಟ್ರೋಜನ್ ಡೈ ಆಕ್ಸೈಡ್ಗಳ ಹೆಚ್ಚಳವೂ ಗಾಳಿಯನ್ನು ಉಸಿರಾಡಲು ಅನರ್ಹವನ್ನಾಗಿಸುತ್ತವೆ. ಸಧ್ಯ ಬೆಂಗಳೂರು ಮಾತ್ರವಲ್ಲದೇ ಅರೆಕೆರೆ, ಬೆಳ್ಳಂದೂರು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿಯೂ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ.
ಇದನ್ನೂ ಓದಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಉಲ್ಬಣ: ಇಂದು ಮತ್ತೆ ಗಾಳಿಮಟ್ಟ ಕುಸಿತ
ಪ್ರಮುಖ ನಗರಗಳಲ್ಲಿ ಗಾಳಿ ಗುಣಮಟ್ಟ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:53 am, Sat, 13 December 25