ಬೆಂಗಳೂರಿನಲ್ಲಿ ವಾಯುಮಾಲಿನ್ಯ ಉಲ್ಬಣ: ಇಂದು ಮತ್ತೆ ಗಾಳಿಮಟ್ಟ ಕುಸಿತ
ಬೆಂಗಳೂರಿನಲ್ಲಿ ವಾಯುಮಾಲಿನ್ಯ ಆತಂಕಕಾರಿ ಮಟ್ಟ ತಲುಪಿದ್ದು, ಗಾಳಿ ಗುಣಮಟ್ಟ ಸೂಚ್ಯಂಕ (AQI) ಕುಸಿಯುತ್ತಿದೆ. ನಗರ ದೆಹಲಿಯಂತೆ ಆಗುವ ಭೀತಿ ಎದುರಾಗಿದೆ. ಧೂಳು, ವಾಹನ ದಟ್ಟಣೆ, ನಿರ್ಮಾಣ ಕಾರ್ಯಗಳು PM2.5 ಮಟ್ಟವನ್ನು ಹೆಚ್ಚಿಸುತ್ತಿವೆ. ಇದರಿಂದ ಉಸಿರಾಟದ ತೊಂದರೆಗಳು, ಹೃದಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಜ್ಞರು ಒತ್ತಾಯಿಸಿದ್ದಾರೆ.

ಬೆಂಗಳೂರು, ಡಿ.12: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಗಾಳಿ ಗುಣಮಟ್ಟದಲ್ಲಿ ವ್ಯತ್ಯಾಸ ಕಾಣುತ್ತಿದೆ. ಇದಕ್ಕೆ ಪ್ರಮುಖ ಕಾರಣ ವಾಯುಮಾಲಿನ್ಯ ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ಇದೇ ರೀತಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮುಂದುವರಿದರೆ ದೆಹಲಿಯಂತೆ ಆಗುವುದರಲ್ಲಿ ಯಾವ ಅನುಮಾನವು ಇಲ್ಲ. ಇದರಿಂದ ಬೆಂಗಳೂರಿನಲ್ಲಿ ಉಸಿರಾಟ ಬಿಕ್ಕಟ್ಟು ಉಂಟಾಗಬಹುದು ಎಂದು ಹೇಳಿದ್ದಾರೆ. ನೆನ್ನೆ (ಡಿ.11) ಗಾಳಿಯ ಗುಣಮಟ್ಟ ಸೂಚ್ಯಂಕ (AQI) 180ಕ್ಕೆ ತಲುಪಿತ್ತು. ಇಂದು ಗಾಳಿಯ ಮಟ್ಟ 175ಕ್ಕೆ ತಲುಪಿದೆ. ಪರಿಸರ ತಜ್ಞರು ಹೇಳಿರುವ ಪ್ರಕಾರ, ಬೆಂಗಳೂರಿನ ಗಾಳಿ ಗುಣಮಟ್ಟದಲ್ಲಿ ಇಂತಹ ವ್ಯತ್ಯಾಸ ಈ ಹಿಂದೆ ಎಂದಿಗೂ ಆಗಿಲ್ಲ. ಒಂದು ವೇಳೆ ಹೀಗೆ ಮುಂದುವರಿದರೆ ಬೆಂಗಳೂರು ಕೂಡ ದೆಹಲಿಯಂತೆ ಆಗುವುದು ಖಂಡಿತ. ಹಾಗಾಗಿ ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಧೂಳಿಯಿಂದ ತುಂಬಿರುವ ರಸ್ತೆಗಳು ಕೂಡ ಇದಕ್ಕೆ ಕಾರಣವಾಗಿದೆ. ಇದರ ಜತೆಗೆ ವಾಹನ ದಟ್ಟಣೆಯಿಂದಲ್ಲೂ ಗಾಳಿ ಗುಣಮಟ್ಟದಲ್ಲಿ ಬದಲಾವಣೆ ಆಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾರಣವಾಗಬಹುದು ಎಂದು ಹೇಳಿದ್ದಾರೆ. ಅನ್‌ಬಾಕ್ಸಿಂಗ್ ಎಂಬ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೆಂಗಳೂರಿನ ವಾಯುಮಾಲಿನ್ಯದ ಬಗ್ಗೆ ವಿಡಿಯೋವೊಂದು ಹಂಚಿಕೊಳ್ಳಲಾಗಿತ್ತು. ಅದರಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ನಾನು ಒಂದು ತಿಂಗಳಿನಿಂದ ಬೆಂಗಳೂರಿನ ಗಾಳಿಯನ್ನು ಅಧ್ಯಯನ ಮಾಡುತ್ತಿದ್ದೇನೆ . ಆದರೆ ನಾನು ಯೋಚನೆ ಮಾಡಿದಕ್ಕಿಂತ ಹೆಚ್ಚು ಕಲುಷಿತವಾಗಿದೆ” ಎಂದು ಹೇಳಿದ್ದಾರೆ. ನಗರದ ಸರಾಸರಿ PM2.5 ಮಟ್ಟಗಳು 40ರ ಆಸುಪಾಸಿನಲ್ಲಿವೆ ಎಂದು ಹೇಳಲಾಗಿದೆ.

ಮಧ್ಯಮ ವಾಯುಮಾಲಿನ್ಯ ಸ್ವೀಕಾರಾರ್ಹವಲ್ಲ, ಆದರೆ ಬೆಂಗಳೂರು ಇದಕ್ಕೆ ಹತ್ತಿರದಲ್ಲಿದೆ. WHO ಹೇಳುವ ಪ್ರಕಾರ, 5 ಕ್ಕಿಂತ ಕಡಿಮೆ PM2.5 ಅನ್ನು ಶಿಫಾರಸು ಮಾಡುತ್ತದೆ. ಆದರೆ ಭಾರತೀಯ ಸುರಕ್ಷತಾ ಮಿತಿಗಳು 40 ಕ್ಕಿಂತ ಕಡಿಮೆ ಸ್ವೀಕಾರಾರ್ಹ ಎಂದು ಹೇಳುತ್ತದೆ. ಈಗಾಗಲೇ ಬೆಂಗಳೂರಿನ ಗಾಳಿಯ ಗುಣಮಟ್ಟ 200ಕ್ಕೆ ದಾಟಿದ ಉದಾಹರಣೆಗಳು ಇದೆ. ಇದರಿಂದ ಜನ ಹೊರಗೆ ಓಡಾಡಲು ಸಾಧ್ಯವಿಲ್ಲ, ಹಾಗೂ ಆರೋಗ್ಯ ಸಮಸ್ಯೆಗಳು ಎದುರಿಸುವ ಸಾಧ್ಯತೆ ಎಂದು ಹೇಳಲಾಗಿದೆ.
35 ವರ್ಷದ ನಂತರ ಈ ದತ್ತಾಂಶ
ಬೆಂಗಳೂರಿನಲ್ಲಿ 35 ವರ್ಷಗಳ ನಂತರ PM2.5 ದತ್ತಾಂಶವಿದೆ. ಇದು ತುಂಬಾ ಕಳವಳಕಾರಿ ಪ್ರವೃತ್ತಿ ಎಂದು ಹೇಳಲಾಗಿದೆ. ಆದರೆ ಬೆಂಗಳೂರಿನ ನಗರ ದೆಹಲಿಗಿಂತ ಉತ್ತಮವಾಗಿದೆ. ನಗರದಲ್ಲಿ PM2.5 ಉಂಟಾಗಲು ಶೇಕಾಡ 64ರಷ್ಟು ವಾಹನ ದಟ್ಟಣೆಯಿಂದ ಎಂದು ಹೇಳಲಾಗಿದೆ. ಭಾರತೀಯ ನಗರಗಳಲ್ಲಿ ಅತಿ ಹೆಚ್ಚು. 84 ಲಕ್ಷ ದ್ವಿಚಕ್ರ ವಾಹನಗಳು ಸೇರಿದಂತೆ 1.23 ಕೋಟಿ ನೋಂದಾಯಿತ ವಾಹನಗಳು ಮತ್ತು ಪ್ರತಿದಿನ 2,563 ಹೊಸ ವಾಹನಗಳು ಇದಕ್ಕೆ ಸೇರಿಕೊಂಡಿದೆ. ವಾಹನ ದಟ್ಟಣೆಯನ್ನು ನಿಯಂತ್ರಣ ಮಾಡುವುದು ಅಗತ್ಯ ಎಂದು ಹೇಳಲಾಗಿದೆ.
ರಸ್ತೆಗಳ ದುರಸ್ಥಿತಿ ಮಾಡದಿರುವುದು, ರಸ್ತೆಗಳ ನಿರ್ಮಾಣ ಕಾರ್ಯದಿಂದ ಬೆಂಗಳೂರಿಗೆ ಇಂತಹ ಸ್ಥಿತಿ ಬರಲು ಕಾರಣ ಎಂದು ಹೇಳಲಾಗಿದೆ. ಇದರ ಜತೆಗೆ ದುರಸ್ಥಿತಿ ಮಾಡುತ್ತಿರುವ ರಸ್ತೆಗಳಲ್ಲಿ ವಾಹನ ಸಂಚಾರ ಕೂಡ ಇದಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ. ನಗರದ ಮಾಲಿನ್ಯ ಶೇ. 24 ರಷ್ಟು ನಿರ್ಮಾಣ ಕಾರ್ಯ ಮತ್ತು ರಸ್ತೆ ಧೂಳಿನಿಂದ ಬರುತ್ತದೆ ಎಂದು ಸಂಶೋಧನೆ ಹೇಳಿದೆ.
ಇದನ್ನೂ ಓದಿ: ಬೆಂಗಳೂರು ಗಾಳಿಯ ಗುಣಮಟ್ಟ ತೀವ್ರ ಕುಸಿತ: ಉಸಿರಾಟ ಸಂಬಂಧಿ ಸಮಸ್ಯೆ ಹೆಚ್ಚಳದ ಆತಂಕ
ಹೃದಯ, ಸ್ನಾಯುಗಳು ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ:
ಬೆಂಗಳೂರಿನಲ್ಲಿರುವ ಗಾಳಿ ಗುಣಮಟ್ಟದ ಬಗ್ಗೆ ಆರೋಗ್ಯ ತಜ್ಞರು ಹೇಳಿರುವ ಪ್ರಕಾರ, ಇಂತಹ ಅನಾರೋಗ್ಯಕರ ಗಾಳಿಯನ್ನು ಉಸಿರಾಡಿದಾಗ ನಿಮ್ಮ ಶ್ವಾಸಕೋಶ, ರಕ್ತ ಮತ್ತು ಮೆದುಳಿಗೆ ರಾಸಾಯನಿಕಗಳು ಸೇರಿಕೊಳ್ಳುತ್ತದೆ. ಇದು ದೇಹದ ಒಳಗೆ ಹೋದ ನಂತರ, ಈ ಮಾಲಿನ್ಯಕಾರಕಗಳು ಉರಿಯೂತವನ್ನು ಉಂಟುಮಾಡುತ್ತವೆ. ಅದು ಹೃದಯ ಹಾಗೂ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ನಂತರ ಇದು ಮಾನಸಿಕ ಹಿಂಸೆಯನ್ನು ಕೂಡ ನೀಡುತ್ತದೆ. ಇದರಿಂದ ಅಲರ್ಜಿಗಳು, ಆಸ್ತಮಾ, ಉಬ್ಬಸ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ವಿಶೇಷವಾಗಿ ಇದು ಮಕ್ಕಳು ಮತ್ತು ವೃದ್ಧರಲ್ಲಿ ಕಂಡು ಬರುತ್ತಿದೆ. ಇದರ ಜತೆಗೆ ಇದಕ್ಕೆ ಭಾರತಕ್ಕೆ ವರ್ಷಕ್ಕೆ 2,710.53 ಶತಕೋಟಿಗೂ ಹೆಚ್ಚು ವೆಚ್ಚವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+
ಪ್ರಮುಖ ನಗರಗಳಲ್ಲಿ ಗಾಳಿ ಗುಣಮಟ್ಟ
ಬೆಂಗಳೂರು – 175
ಮಂಗಳೂರು -104
ಮೈಸೂರು – 122
ಬೆಳಗಾವಿ- 142
ಕಲಬುರಗಿ – 77
ಶಿವಮೊಗ್ಗ- 77
ಬಳ್ಳಾರಿ- 167
ಹುಬ್ಬಳ್ಳಿ – 90
ಉಡುಪಿ – 85
ವಿಜಯಪುರ – 79
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Fri, 12 December 25




