AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Air Quality: ಇಂದು ಬೆಳಗಾವಿಯ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ!

ಹಲವು ದಿನಗಳಿಂದ ರಾಜ್ಯದಲ್ಲಿ ಗಾಳಿಯ ಗುಣಮಟ್ಟ ಏರಿಳಿತವಾಗುತ್ತಿದೆ. ಆದರೆ ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾದದ್ದಾಗಿದೆ. ಆದರೂ ಕಲಬುರ್ಗಿ ಸೇರಿ AQI ಅಪಾಯಕಾರಿ ಮಟ್ಟದಲ್ಲಿದ್ದು, ಇದರಿಂದ ಶ್ವಾಸಕೋಶ ಸಂಬಂಧಿ ಖಾಯಿಲೆಗಳು ಬರಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Bengaluru Air Quality: ಇಂದು ಬೆಳಗಾವಿಯ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ!
ಇಂದು ಬೆಳಗಾವಿಯ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ!
ಭಾವನಾ ಹೆಗಡೆ
|

Updated on: Apr 18, 2026 | 7:54 AM

Share

ಬೆಂಗಳೂರು, ಏಪ್ರಿಲ್ 18: ರಾಜ್ಯದ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಕಳೆದ ಕೆಲ ದಿನಗಳಿಂದ ಸುಧಾರಣೆ ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಕಲಬುರ್ಗಿ, ಉಡುಪಿಯಲ್ಲಿ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 135ಕ್ಕೆ ತಲುಪಿದೆ. ಕಲಬುರ್ಗಿ ಮತ್ತು ಉಡುಪಿಯ AQI 150 ದಾಟಿದ್ದು, ಆತಂಕ ಸೃಷ್ಟಿಸಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 135
  • ಮಂಗಳೂರು-82
  • ಮೈಸೂರು –64
  • ಬೆಳಗಾವಿ – 44
  • ಕಲಬುರ್ಗಿ-114
  • ಶಿವಮೊಗ್ಗ –99
  • ಬಳ್ಳಾರಿ – 161
  • ಹುಬ್ಬಳ್ಳಿ- 57
  • ಉಡುಪಿ –89
  • ವಿಜಯಪುರ –93

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us