
ಬೆಂಗಳೂರು, ಡಿಸೆಂಬರ್ 23: ಕಳೆದ 5 ವರ್ಷಗಳಿಂದ ಬೆಂಗಳೂರಿನ ಗಾಳಿಯ ಗುಣಮಟ್ಟ (Bengaluru Air Quality) ಹದಗೆಡುತ್ತಲೇ ಇದ್ದು, ಗಾಳಿಯ PM (Particulate Matter) ಪ್ರಮಾಣ ಸಹ ಮಿತಿ ಮೀರಿದೆ. ಇಂದಿನ ಬೆಂಗಳೂರಿನಲ್ಲಿ ಗಾರ್ಡನ್ ಸಿಟಿಯ ತಂಪಾದ ಗಾಳಿಗಿಂತ ಹೆಚ್ಚಾಗಿ ‘ಧೂಳಿನ ಕಣಗಳೇ’ ನಮ್ಮನ್ನು ಆವರಿಸಿವೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (AQI) ಇಂದಿನ ಗಾಳಿಯ ಗುಣಮಟ್ಟ 170 ಇದ್ದು, ನಗರದ ಹಲವು ಭಾಗಗಳಲ್ಲಿ ಗಾಳಿಯು ‘ಅಪಾಯಕಾರಿ’ ಮಟ್ಟದಲ್ಲಿದೆ. ಮುಖ್ಯವಾಗಿ ಗಾಳಿಯಲ್ಲಿರುವ PM2.5 ಮತ್ತು PM10 ಪ್ರಮಾಣ ಹೆಚ್ಚಿದ್ದು, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳನ್ನೂ ಹೆಚ್ಚಿಸಿದೆ.
ಬೆಂಗಳೂರಿನ ಇಂದಿನ ಗಾಳಿಯಲ್ಲಿ PM2.5, 82 µg/m³ ಇದ್ದು, PM10 119 µg/m³ ಇದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ (WHO) ಸುರಕ್ಷಿತ ಮಿತಿಗಿಂತ (15 µg/m³) ಸುಮಾರು 4.2 ಪಟ್ಟು ಹೆಚ್ಚಾಗಿದೆ. PM ಎಂದರೆ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು. PM2.5 ಎಂದರೆ ವಾಯುವಿನಲ್ಲಿರುವ ಸಣ್ಣ ಗಾತ್ರದ ಕಣಗಳಾದರೆ, PM10 ಎಂದರೆ ಸ್ವಲ್ಪ ದೊಡ್ಡ ಗಾತ್ರದ ಕಣಗಳಾಗಿವೆ.
ಬೆಂಗಳೂರಿನಲ್ಲಿ ಈಗ ವಾಹನಗಳ ಸಂಖ್ಯೆ 1.2 ಕೋಟಿ ದಾಟಿದ್ದು, ನಗರದ ಮಾಲಿನ್ಯಕ್ಕೆ 42% ರಷ್ಟು ಕೊಡುಗೆ ನೀಡುತ್ತಿರುವುದು ಈ ವಾಹನಗಳ ಹೊಗೆ. ಸಿಲ್ಕ್ ಬೋರ್ಡ್ ಮತ್ತು ವೈಟ್‌ಫೀಲ್ಡ್‌ನಂತಹ ಪ್ರದೇಶಗಳಲ್ಲಿ AQI ಮಟ್ಟವು ನಗರದ ಸರಾಸರಿಗಿಂತ 30% ಹೆಚ್ಚು ದಾಖಲಾಗುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರಬಹುದೆಂದು ತಜ್ಞರು ಹೇಳುತ್ತಾರೆ. ಹೀಗಿರುವಾಗ ಬಳ್ಳಾರಿಯ ಜನ ಮುಂಜಾಗೃತಾ ಕ್ರಮ ವಹಿಸಬೇಕೆಂದು ತಜ್ಞರು ತಿಳಿಸಿದ್ದಾರೆ.
PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:28 am, Wed, 24 December 25