AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಲಿಗ್ರಾಂನಲ್ಲಿ ಹುಡುಗಿ ಬುಕ್ ಮಾಡಿದ್ದ ಯುವಕ ಆಕೆ ಮನೆಗೆ ಹೋಗಿ ಬಟ್ಟೆಬಿಚ್ಚುತ್ತಿದ್ದಂತೆ ಕಾದಿತ್ತು ಆಘಾತ!

ಆ ಟೆಕ್ಕಿ ಹುಡುಗಿ ಬೇಕೆಂದು ಟೆಲಿಗ್ರಾಂ ಗ್ರೂಪೊಂದರಲ್ಲಿ ಬುಕ್ ಮಾಡಿದ್ದ. ನಂತರ ಮಜಾ ಮಾಡಲೆಂದು ಆಕೆಯ ಮನೆಗೆ ತೆರಳಿದ್ದ. ಅಲ್ಲಿಗೆ ಹೋಗುತ್ತಿದ್ದಂತೆಯೇ ಆಕೆ ಕಾಣಸಿಕ್ಕಿದ್ದಾಳೆ. ಇನ್ನೇನು ಅಂದುಕೊಂಡದ್ದನ್ನು ಮಾಡಿಯೇಬಿಡಬೇಕೆಂದು ಬಟ್ಟೆಬಿಚ್ಚಲು ಮುಂದಾದ ಯುವಕನಿಗೆ ಕಾದಿತ್ತು ಆಘಾತ! ಅಷ್ಟಕ್ಕೂ ಅಲ್ಲೇನಾಯ್ತು ಗೊತ್ತೇ? ವಿವರಗಳಿಗೆ ಮುಂದೆ ಓದಿ.

ಟೆಲಿಗ್ರಾಂನಲ್ಲಿ ಹುಡುಗಿ ಬುಕ್ ಮಾಡಿದ್ದ ಯುವಕ ಆಕೆ ಮನೆಗೆ ಹೋಗಿ ಬಟ್ಟೆಬಿಚ್ಚುತ್ತಿದ್ದಂತೆ ಕಾದಿತ್ತು ಆಘಾತ!
ಸಾಂದರ್ಭಿಕ ಚಿತ್ರ
Ganapathi Sharma
|

Updated on: Dec 24, 2025 | 9:35 AM

Share

ಬೆಂಗಳೂರು, ಡಿಸೆಂಬರ್ 24: ಆನ್‌ಲೈನ್‌ನಲ್ಲಿ ವೇಶ್ಯಾವಾಟಿಕೆ ದಂಧೆಗೆ ಸಂಬಂಧಿಸಿದಂತೆ ಬೆಂಗಳೂರಿನ (Bangalore) ಆರ್‌ಆರ್ ನಗರ ಪೊಲೀಸರು (RR Nagar Police)  ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಮೋಹದ ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ನ ಇಬ್ಬರು ಯುವತಿಯರು ಸೇರಿ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುಮಲತಾ ಅಲಿಯಾಸ್ ಅಂಜಲಿ (28), ಹರ್ಷಿಣಿ ಅಲಿಯಾಸ್ ಸ್ವೀಟಿ (26) ಹಾಗೂ ಅವರ ಸಹಚರರಾದ ಜಗದೀಶ್ (35), ಮಂಜುನಾಥ್ (30) ಮತ್ತು ಲೋಕೇಶ್ (32) ಎಂದು ಗುರುತಿಸಲಾಗಿದೆ.

ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಈ ಖತರ್ನಾಕ್ ಗ್ಯಾಂಗ್ ಅನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳು ಟೆಲಿಗ್ರಾಂ ಮೂಲಕ ಯುವಕರನ್ನು ಸಂಪರ್ಕಿಸಿ ಆನ್‌ಲೈನ್‌ನಲ್ಲಿ ಹುಡುಗಿಯರನ್ನು ಬುಕ್ ಮಾಡುವಂತೆ ಪ್ರೇರೇಪಿಸಿ, ನಂತರ ಸುಲಿಗೆ ನಡೆಸುತ್ತಿದ್ದರು.

Accused

ಬಂಧಿತ ಆರೋಪಿಗಳು

ಡಿಸೆಂಬರ್ 1ರಂದು ಟೆಲಿಗ್ರಾಂನ ಒಂದು ಗ್ರೂಪ್ ಮೂಲಕ ಹುಡುಗಿಯನ್ನು ಬುಕ್ ಮಾಡಿದ್ದ ಯುವಕ, ಆಕೆ ನೀಡಿದ ವಿಳಾಸಕ್ಕೆ ತೆರಳಿದ್ದ. ಅಲ್ಲಿ ಬಟ್ಟೆ ಬಿಚ್ಚುತ್ತಿದ್ದಂತೆಯೇ ಆಕೆ 20 ಸಾವಿರ ರೂ. ನಗದು ಮತ್ತು ಮೊಬೈಲ್‌ನ್ನು ಕಿತ್ತುಕೊಂಡು, ಬಳಿಕ ‘1 ಲಕ್ಷ ರೂ. ಕೊಡು, ಇಲ್ಲವಾದರೆ ನಮ್ಮ ಕಡೆಯವರನ್ನು ಕರೆಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾಳೆ. ಈ ವೇಳೆ ಯುವಕ ತನ್ನ ಮೊಬೈಲ್ ವಾಪಸ್ ಪಡೆದು ಅಲ್ಲಿಂದ ಪರಾರಿಯಾಗಿದ್ದ.

ತಪ್ಪಿನಿಂದ ಕಲಿಯದ ಪಾಠ: ಹುಡುಗಿ ಹುಡುಕಿ ಹೊರಟನಿಗೆ ಮತ್ತೆ ಶಾಕ್

ಮೊದಲ ಘಟನೆಯಿಂದ ಪಾಠ ಕಲಿಯದ ಯುವಕ, ಡಿಸೆಂಬರ್ 20ರಂದು ಮತ್ತೆ ಟೆಲಿಗ್ರಾಂ ಮೂಲಕ ಮತ್ತೊಬ್ಬ ಹುಡುಗಿಯನ್ನು ಬುಕ್ ಮಾಡಿದ್ದ. ಆಕೆ ಸೂಚಿಸಿದಂತೆ ಆರ್‌ಆರ್ ನಗರದಲ್ಲಿರುವ ಸ್ಥಳಕ್ಕೆ ತೆರಳಿದ್ದ. ಅಲ್ಲಿ ಹಳೆಯ ಹುಡುಗಿ, ಹೊಸ ಹುಡುಗಿ ಹಾಗೂ ಮೂವರು ಯುವಕರು ಏಕಾಏಕಿ ಆಗಮಿಸಿ ಯುವಕನ ಮೇಲೆ ಹಲ್ಲೆ ನಡೆಸಿ 20 ಸಾವಿರ ರೂ. ಕಸಿದುಕೊಂಡಿದ್ದಾರೆ. ಜೊತೆಗೆ 1 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿ ಕಾರಿನಲ್ಲಿ ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದಾರೆ.

ಇದನ್ನೂ ಓದಿ: ಮಗುವಿಗೆ ಜನ್ಮ ನೀಡಿದ 10ನೇ ಕ್ಲಾಸ್ ವಿದ್ಯಾರ್ಥಿನಿ: ಶಾಲಾ ಬಸ್ ಡ್ರೈವರ್​ನಿಂದಲೇ​​​ ನೀಚ ಕೃತ್ಯ

ಯುವಕ ಕೂಗಿಕೊಂಡಾಗ ಸ್ಥಳೀಯರು ತಕ್ಷಣ 112ಗೆ ಕರೆ ಮಾಡಿದ್ದು, ಕ್ಷಣಮಾತ್ರದಲ್ಲಿ ಸ್ಥಳಕ್ಕೆ ಬಂದ 112 ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಯುವಕನನ್ನು ರಕ್ಷಿಸಿದ್ದಾರೆ. ನಂತರ ಆರ್‌ಆರ್ ನಗರ ಪೊಲೀಸರು ಆರೋಪಿಗಳನ್ನು ಅಲ್ಲಿಯೇ ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ