AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Air Quality: ಮೈಸೂರು ಸೇರಿದಂತೆ ಬೆಂಗಳೂರು, ಬೆಳಗಾವಿಯ ವಾಯು ಗುಣಮಟ್ಟದಲ್ಲಿ ಸುಧಾರಣೆ

ಬೆಳಗಾವಿ, ಬೆಂಗಳೂರು ಸೇರಿ ಹಲವು ಕಡೆ ಏರ್ ಕ್ವಾಲಿಟಿ ಸುಧಾರಣೆ ಕಂಡಿದೆ. ಇನ್ನೂ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಕುಸಿದಿದ್ದು, ಕಲಬುರ್ಗಿಯಲ್ಲಿ ತೀರಾ ಕಳಪೆ ಗಾಳಿಯ ಗುಣಮಟ್ಟ ಕಂಡುಬಂದಿದೆ. ಬೆಂಗಳೂರಿನ AQI ಅಪಾಯಕಾರಿ ಮಟ್ಟದಲ್ಲಿದ್ದು, ಇದರಿಂದ ಶ್ವಾಸಕೋಶ ಸಂಬಂಧಿ ಖಾಯಿಲೆಗಳು ಬರಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Bengaluru Air Quality: ಮೈಸೂರು ಸೇರಿದಂತೆ ಬೆಂಗಳೂರು, ಬೆಳಗಾವಿಯ ವಾಯು ಗುಣಮಟ್ಟದಲ್ಲಿ ಸುಧಾರಣೆ
ಮೈಸೂರು ಸೇರಿದಂತೆ ಬೆಂಗಳೂರು, ಬೆಳಗಾವಿಯ ವಾಯು ಗುಣಮಟ್ಟದಲ್ಲಿ ಸುಧಾರಣೆ
ಭಾವನಾ ಹೆಗಡೆ
|

Updated on: Mar 21, 2026 | 7:55 AM

Share

ಬೆಂಗಳೂರು, ಮಾರ್ಚ್​ 21: ಹಲವಾರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿತ್ತು. ಆದರೆ ಇಂದು ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದಂತಿದೆ. ಬೆಂಗಳೂರು, ಬೆಳಗಾವಿ ಮತ್ತು ಮೈಸೂರು ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150ಕ್ಕಿಂತ ಕಡಿಮೆ ಇರುವುದು ಕಂಡು ಬಂದಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 140ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಉಡುಪಿ, ಮಂಗಳೂರು ಸೇರಿ ಹಲವೆಡೆ ಏರ್ ಕ್ವಾಲಿಟಿ 150ಕ್ಕಿಂತ ಕಡಿಮೆ ಇದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –140
  • ಮಂಗಳೂರು-130
  • ಮೈಸೂರು –117
  • ಬೆಳಗಾವಿ – 78
  • ಕಲಬುರ್ಗಿ-104
  • ಶಿವಮೊಗ್ಗ – 138
  • ಬಳ್ಳಾರಿ – 156
  • ಹುಬ್ಬಳ್ಳಿ- 108
  • ಉಡುಪಿ –120
  • ವಿಜಯಪುರ –99

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಓಪನ್ ಚಾಲೆಂಜ್
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ಶ್ರೀನಂದಾ ಸಾವು ಕಾಲು ಜಾರಿ ಬಿದ್ದಿದ್ದಾ ಅಥವಾ ಕೊಲೆಯೇ?
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ಪಡಿಕ್ಕಲ್, ಕೊಹ್ಲಿ ಬಾಲ್ಯದಲ್ಲಿ ಹೇಗಿದ್ರು ನೋಡಿ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
ತೆಂಗಿನಕಾಯಿ ಬೆಳೆಗಾರರಿಗೆ ಜಾಕ್​​ಪಾಟ್​​: ದಾಖಲೆ ಬರೆದ ಕೊಬ್ಬರಿ ಬೆಲೆ
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್
'ಝೋಂಬಿ ಡ್ರಗ್ಸ್​ ಎನ್ನುವುದು ಏನೂ ಇಲ್ಲ': ಗೃಹ ಸಚಿವ ಪರಮೇಶ್ವರ್