AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Air Quality: ಉಡುಪಿಯಲ್ಲಿ ಅತಿಯಾಯ್ತು ವಾಯು ಮಾಲಿನ್ಯ; ಉಸಿರಾಡೋದೂ ಕಷ್ಟ!

ಬೆಳಗಾವಿ, ಬೆಂಗಳೂರು ಸೇರಿ ಹಲವು ಕಡೆ ಏರ್ ಕ್ವಾಲಿಟಿ ಕುಸಿದಿದ್ದು, ಕಲಬುರ್ಗಿಯಲ್ಲಿ ತೀರಾ ಕಳಪೆ ಗಾಳಿಯ ಗುಣಮಟ್ಟ ಕಂಡುಬಂದಿದೆ. ಇದೆಲ್ಲದನ್ನೂ ಮೀರಿಸುವಂತೆ ಇಂದು ಉಡುಪಿಯ ಏರ್ ಕ್ವಾಲಿಟಿ ತೀರಾ ಹದಗೆಟ್ಟಿದ್ದು, ಉಸಿರಾಡಲು ಅನರ್ಹವೆಂದು ತಜ್ಞರು ಹೇಳುತ್ತಾರೆ. ಬೆಂಗಳೂರಿನ AQI ಅಪಾಯಕಾರಿ ಮಟ್ಟದಲ್ಲಿದ್ದು, ಇದರಿಂದ ಶ್ವಾಸಕೋಶ ಸಂಬಂಧಿ ಖಾಯಿಲೆಗಳು ಬರಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Bengaluru Air Quality: ಉಡುಪಿಯಲ್ಲಿ ಅತಿಯಾಯ್ತು ವಾಯು ಮಾಲಿನ್ಯ; ಉಸಿರಾಡೋದೂ ಕಷ್ಟ!
ಉಡುಪಿಯಲ್ಲಿ ಅತಿಯಾಯ್ತು ವಾಯು ಮಾಲಿನ್ಯ; ಉಸಿರಾಡೋದೂ ಕಷ್ಟ! Image Credit source: mathrubhumi.com
ಭಾವನಾ ಹೆಗಡೆ
|

Updated on: Mar 25, 2026 | 8:39 AM

Share

ಬೆಂಗಳೂರು, ಮಾರ್ಚ್​ 25: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏರ್ ಕ್ವಾಲಿಟಿಯಲ್ಲಿ   (Bengaluru Air Quality)  ಏರುಪೇರಾಗುತ್ತಲೇ ಇದೆ. ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ. ಆದರೆ ಇಂದು ಉಡುಪಿಯ ಏರ್ ಕ್ವಾಲಿಟಿ ನೋಡಿದಾಗ ಆತಂಕ ಸೃಷ್ಟಿಯಾಗುವುದಂತೂ ನಿಜ. 100ರಿಂದ 150ರ ಒಳಗಿದ್ದ ಉಡುಪಿಯ AQI ಇಂದು ಒಮ್ಮೆಲೇ 200ರ ಗಡಿ ದಾಟಿರುವುದು ಆಶ್ಚರ್ಯವಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಗಾಳಿಯ ಗುಣಮಟ್ಟ 150ಕ್ಕೂ ಕಡಿಮೆಯಿದೆ. ಆದರೆ ಉಡುಪಿಯಲ್ಲಿ ಗಾಳಿಯ ಗುಣಮಟ್ಟ 221ಕ್ಕೇರಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 146ಕ್ಕೆ ತಲುಪಿದೆ. ಕೆಲ ದಿನಗಳಿಂದ ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –146
  • ಮಂಗಳೂರು-157
  • ಮೈಸೂರು –96
  • ಬೆಳಗಾವಿ – 136
  • ಕಲಬುರ್ಗಿ-97
  • ಶಿವಮೊಗ್ಗ – 138
  • ಬಳ್ಳಾರಿ – 165
  • ಹುಬ್ಬಳ್ಳಿ- 154
  • ಉಡುಪಿ –221
  • ವಿಜಯಪುರ –131

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ?
ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ?
ಇಂದು ಈ ರಾಶಿಯವರು ಇಂದು ತಾಳ್ಮೆ ಕಳೆದುಕೊಳ್ಳಬೇಡಿ!
ಇಂದು ಈ ರಾಶಿಯವರು ಇಂದು ತಾಳ್ಮೆ ಕಳೆದುಕೊಳ್ಳಬೇಡಿ!
‘ಲವ್ ಮಾಕ್ಟೇಲ್ 3’ ಬಿಸ್ನೆಸ್ ಹಾಳು ಮಾಡಲು ನಾವು ಬಂದಿಲ್ಲ: ಗುರು ದೇಶಪಾಂಡೆ
‘ಲವ್ ಮಾಕ್ಟೇಲ್ 3’ ಬಿಸ್ನೆಸ್ ಹಾಳು ಮಾಡಲು ನಾವು ಬಂದಿಲ್ಲ: ಗುರು ದೇಶಪಾಂಡೆ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
ಡಾ. ಸಮೀಕ್ಷಾ ರೆಡ್ಡಿ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
‘ಡಾರ್ಲಿಂಗ್ ಕೃಷ್ಣಗೆ ಕತೆ ಹೇಳಿದ್ದೆ, ಈಗ ಮರ್ತೋಗಿದೆ ಅಂತಿದ್ದಾರೆ’
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಾರ್​​, ರೆಸ್ಟೋರೆಂಟ್​ಗಳಿಗೂ ತಟ್ಟಿದ್ದ ಗ್ಯಾಸ್ ಅಭಾವದ ಎಫೆಕ್ಟ್
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮುಸ್ಲಿಂ ಮಹಿಳೆಯರು
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ
ಕಾಲ್ತುಳಿತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಆರ್​ಸಿಬಿಯಿಂದ ವಿಶೇಷ ನಮನ