ಇನ್ಸ್​ಪೆಕ್ಟರ್, ಎಸಿಪಿ ಜೀಪಿಗೂ ಇನ್ಮುಂದೆ ಡ್ಯಾಶ್ ಕ್ಯಾಮೆರಾ!ಬೆಂಗಳೂರು ಕಮಿಷನರ್ ಮಹತ್ವದ ನಿರ್ಧಾರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 05, 2024 | 10:01 AM

ಹೊಯ್ಸಳ ವಾಹನಕ್ಕೆ ಡ್ಯಾಶ್​ ಕ್ಯಾಮೆರಾ ಅಳವಡಿಕೆ ಸಕ್ಸಸ್ ಹಿನ್ನೆಲೆ ಇನ್ಸ್​ಪೆಕ್ಟರ್​​ ಮತ್ತು ಎಸಿಪಿ ಜೀಪ್​​​ಗೂ ಇನ್ಮುಂದೆ ಡ್ಯಾಶ್​ ಕ್ಯಾಮೆರಾ ಅಳವಡಿಸಲು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್(B Dayananda) ಅವರು ಮಹತ್ವದ ನಿರ್ಧಾರ ಕೈಗೊಂಡಿರುವ ಕುರಿತು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಇನ್ಸ್​ಪೆಕ್ಟರ್, ಎಸಿಪಿ ಜೀಪಿಗೂ ಇನ್ಮುಂದೆ ಡ್ಯಾಶ್ ಕ್ಯಾಮೆರಾ!ಬೆಂಗಳೂರು ಕಮಿಷನರ್ ಮಹತ್ವದ ನಿರ್ಧಾರ
ಬಿ ದಯಾನಂದ್​
Follow us on

ಬೆಂಗಳೂರು, ಏ.05: ಹೊಯ್ಸಳ ವಾಹನಕ್ಕೆ ಡ್ಯಾಶ್​ ಕ್ಯಾಮೆರಾ ಅಳವಡಿಕೆ ಸಕ್ಸಸ್ ಹಿನ್ನೆಲೆ ಇನ್ಸ್​ಪೆಕ್ಟರ್​​ ಮತ್ತು ಎಸಿಪಿ ಜೀಪ್​​​ಗೂ ಇನ್ಮುಂದೆ ಡ್ಯಾಶ್​ ಕ್ಯಾಮೆರಾ ಅಳವಡಿಸಲು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್(B Dayananda) ಅವರು ಮಹತ್ವದ ನಿರ್ಧಾರ ಕೈಗೊಂಡಿರುವ ಕುರಿತು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಹೌದು, ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೊಳಿಸಲು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಇನ್ನು ಹೊಯ್ಸಳದಲ್ಲಿ  ಘಟನೆಗಳ ಮಾಹಿತಿ, ಸ್ಪಾಟ್​ ರೀಚ್ ಆದ ಸಮಯ,ಎಲ್ಲದರ ಚಿತ್ರೀಕರಣ ಆಗಿತ್ತು. ಈ ಮೂಲಕ ಹೊಯ್ಸಳದ ಸಂಪೂರ್ಣ ಸಂಪರ್ಕ ಕಮಾಂಡ್​ ಸೆಂಟರ್​​ನಲ್ಲಿದ್ದು, ಪೊಲೀಸ್​​ ಸಿಬ್ಬಂದಿಯ ಕರ್ತವ್ಯ ಲೋಪದ ಬಗ್ಗೆಯೂ ಪರಿಶೀಲನೆ ನಡೆಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಇನ್ಸ್​ಪೆಕ್ಟರ್, ಎಸಿಪಿ ಜೀಪ್​ಗೂ ಕ್ಯಾಮೆರಾ ಅಳವಡಿಕೆ ಮಾಡುವುದಾಗಿ ಕಮಿಷನರ್ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಅನಧಿಕೃತ ಬೆಟ್ಟಿಂಗ್ ಹಿನ್ನೆಲೆ ರೇಸ್ ಕೋರ್ಸ್ ಮೇಲೆ ಸಿಸಿಬಿ ದಾಳಿ: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ

ಆನೇಕಲ್​ ಬಳಿ ಹಿಟ್​​ ಆ್ಯಂಡ್​ ರನ್​ಗೆ ಸವಾರ ಬಲಿ

ಬೆಂಗಳೂರು: ಆನೇಕಲ್ ಪಟ್ಟಣದ ಮಿರ್ಜಾರಸ್ತೆಯ ಪೊಲೀಸ್ ಕ್ವಾಟ್ರಸ್ ಮುಂಭಾಗದಲ್ಲಿ ಹಿಟ್​ ಆ್ಯಂಡ್​ ರನ್​ಗೆ ಬೈಕ್​ ಸವಾರ ಬಲಿಯಾದ ಧಾರುಣ ಘಟನೆ ನಡೆದಿದೆ. ಡಿಕ್ಕಿ ಹೊಡೆದು ವಾಹನ ಸಮೇತವಾಗಿ ಚಾಲಕ ಪರಾರಿಯಾಗಿದ್ದಾನೆ. ಇನ್ನು ಪೊಲೀಸರು ಮೃತ ಬೈಕ್ ಸವಾರನ ಗುರುತು ಪತ್ತೆ ಹಚ್ಚುತ್ತಿದ್ದಾರೆ. ವಾಹನ ಡಿಕ್ಕಿ ರಭಸಕ್ಕೆ ಸವಾರನ ತಲೆ ಭಾಗ ಸಂಪೂರ್ಣ ಛಿದ್ರವಾಗಿದೆ. ಈ ಘಟನೆ ಮೂಲಕ ಆನೇಕಲ್​ನ ಮಿರ್ಜಾ ರಸ್ತೆಯಲ್ಲಿ ಒಂದೇ ವಾರದಲ್ಲಿ 2 ಅಪಘಾತ ಸಂಭವಿಸಿದಂತಾಗಿದೆ. 3-4 ದಿನಗಳ ಹಿಂದೆಯಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದರು. ಅಪಘಾತ ಸ್ಥಳಕ್ಕೆ ಆನೇಕಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:55 am, Fri, 5 April 24