
ಬೆಂಗಳೂರ, ಅ.13:ಬೆಂಗಳೂರಿನ ರೈತರೊಬ್ಬರು (bangalore farmer) ಎತ್ತಿನ ಗಾಡಿಯಲ್ಲಿ ಬಂದು ಐಷಾರಾಮಿ ಕಾರು ಖರೀದಿಸಿ, ಅಚ್ಚರಿಗೊಳಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎತ್ತಿನ ಗಾಡಿಯಲ್ಲಿ ಬೆಂಗಳೂರಿನ ಸಿಟಿಯನ್ನು ಸುತ್ತಿದ್ದು, ಎಲ್ಲರ ಗಮನ ಸೆಳೆದಿದೆ. ಎಸ್‌ಎಸ್‌ಆರ್ ಸಂಜು ಎಂಬ ರೈತ ಎತ್ತಿನ ಗಾಡಿಯಲ್ಲಿ ಬಂದು ಟೊಯೋಟಾ ವೆಲ್‌ಫೈರ್ ಕಾರನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಎಸ್‌ಎಸ್‌ಆರ್ ಸಂಜು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈಗಾಗಲೇ ಸಂಜು ಅವರಲ್ಲಿ ಹೊಸ ಹೊಸ ಕಾರಿನ ಸಂಗ್ರಹಗಳು ಇದೆ ಎಂದು ಹೇಳಲಾಗಿದೆ. ತಾನು ಕಾರು ಖರೀದಿ ಮಾಡುವುದು ಒಂದು ಅವಿಸ್ಮರಣಿವಾಗಿರಬೇಕು. ಹಾಗೂ ರೈತರಿಗೂ ಕಾರು ಖರೀದಿ ಮಾಡಲು ಗೊತ್ತು, ಎತ್ತಿನ ಗಾಡಿ ಓಡಿಸಲು ಗೊತ್ತು ಎಂಬ ಸಂದೇಶ ತಿಳಿಸಲು ಸಂಜು ಅವರು ವಿಭಿನ್ನ ರೀತಿಯಲ್ಲಿ ಕಾರು ಖರೀದಿ ಮಾಡಲು ಬಂದಿದ್ದಾರೆ.
ಯೂಟ್ಯೂಬ್ ವೀಡಿಯೊವೊಂದರಲ್ಲಿ ರೈತ ಐಷಾರಾಮಿ ಕಾರು ಖರೀದಿಸುತ್ತಿದ್ದಾರೆ ಎಂದು ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸಂಜು ಅವರು ಈ ವಿಡಿಯೋದಲ್ಲಿ ತಮ್ಮ ಹುಡುಗರ ಜತೆ ಬಂದು ಕಾರು ಖರೀದಿ ಮಾಡುವುದನ್ನು ಕಾಣಬಹುದು. ಎತ್ತಿನ ಗಾಡಿಯನ್ನು ಹಿಂಬಾಲಿಸಿಕೊಂಡು ಸಾಲು ಸಾಲು ಐಷರಾಮಿ ಕಾರುಗಳಾದ ಹಳದಿ ಪೋರ್ಷೆ ಪನಾಮೆರಾ, ಫೋರ್ಡ್ ಮಸ್ಟಾಂಗ್, ಮಾಸೆರಾಟಿ ಲೆವಾಂಟೆ, ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಟೊಯೋಟಾ ಫಾರ್ಚೂನರ್ ಬರುವುದನ್ನು ಕಾಣಬಹುದು. ಜತೆಗೆ ಈ ರೈತನಿಗೆ ರಕ್ಷಣಾ ಸಿಬ್ಬಂದಿಗಳು ಕೂಡ ಇದ್ದಾರೆ. ಈ ವಿಡಿಯೋದಲ್ಲಿ ಅವರು ಕಚೇರಿಯೊಂದರಲ್ಲಿ ಕೂತು ತನ್ನ ಹುಡುಗರಿಗೆ ಕೆಲವೊಂದು ಸೂಚನೆಯನ್ನು ನೀಡುವುದನ್ನು ಕೂಡ ಕಾಣಬಹುದು.
ಇದನ್ನೂ ಓದಿ: ‘ಬೆಳ್ಳಂದೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ 1 ಗಂಟೆ 45 ನಿಮಿಷ’, ಇದು ಬೆಂಗಳೂರು ಟ್ರಾಫಿಕ್ ಕಥೆ ಎಂದ ಮೋಹನ್‌ದಾಸ್ ಪೈ
ನಂತರ ಅಲ್ಲಿಂದ ಕುರ್ತಾ ಮತ್ತು ಧೋತಿಯನ್ನು ಧರಿಸಿ, ದಪ್ಪ ಚಿನ್ನದ ಸರವನ್ನು ಹಾಕಿಕೊಂಡು ಎತ್ತಿನಗಾಡಿಯಲ್ಲಿ ಹೋಗುವುದನ್ನು ಕಾಣಬಹುದು. ಅಲ್ಲಿಂದ ನೇರವಾಗಿ ಸಂಜು ಅವರು ಟೊಯೋಟಾ ಡೀಲರ್‌ಶಿಪ್ ಶೋ ರೂಮ್ಗೆ ಬರುತ್ತಾರೆ. ಇವರು ಎತ್ತಿನ ಗಾಡಿಯಲ್ಲಿ ಬರುವುದನ್ನು ಕಂಡು ಬಿದಿಯಲ್ಲಿ ನಿಂತ ಜನ ಅಚ್ಚರಿಯಿಂದ ನೋಡುವದನ್ನು ಕೂಡ ಈ ವಿಡಿಯೋದಲ್ಲಿ ಕಾಣಬಹುದು. ಸಂಜು ಟೊಯೋಟಾ ಡೀಲರ್‌ಶಿಪ್ ಮ್ಯಾನೇಜರ್ ಜತೆಗೆ ಮಾತನಾಡುತ್ತಾ ಶೋ ರೂಮ್ ಒಳಗಡೆ ಹೋಗುತ್ತಾರೆ. ಅಲ್ಲಿಂದ ಕಾರು ಖರೀದಿಗೆ ಬೇಕಾದ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿ ಕಾರು ಖರೀದಿ ಮಾಡುತ್ತಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ