AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಪ್ತ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಹಿಂದಿನ ಉದ್ದೇಶವೇನು? ಪರೇಶ್ವರ್ ಹೇಳಿದ್ದೇನು ನೋಡಿ

ಆಪ್ತ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಹಿಂದಿನ ಉದ್ದೇಶವೇನು? ಪರೇಶ್ವರ್ ಹೇಳಿದ್ದೇನು ನೋಡಿ

Ganapathi Sharma
|

Updated on:Oct 13, 2025 | 3:12 PM

Share

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಚಿವರೊಂದಿಗೆ ಏರ್ಪಡಿಸಿರುವ ಭೋಜನ ಕೂಟದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲ ಸಚಿವರ ಪಾಲಿಗೆ ಇದು ಸೆಂಡ್ ಆಫ್ ಮೀಟಿಂಗ್ ಆಗಬಹುದು, ಸಚಿವ ಸಂಪುಟ ಪುನರ್‌ರಚನೆ ಆಗಬಹುದು ಎಂಬ ಊಹಾಪೋಹಗಳಿವೆ. ಆದರೆ, ಗೃಹ ಸಚಿವ ಪರಮೇಶ್ವರ್ ಇದನ್ನು ಮುಖ್ಯಮಂತ್ರಿಗಳ ನಿಯಮಿತ ಸಂಪ್ರದಾಯ ಎಂದು ತಳ್ಳಿಹಾಕಿದ್ದಾರೆ.

ಬೆಂಗಳೂರು, ಅಕ್ಟೋಬರ್ 13: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಚಿವರಿಗಾಗಿ ಆಯೋಜಿಸಿರುವ ಡಿನ್ನರ್ ಮೀಟಿಂಗ್ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅನೇಕ ಸಚಿವರಲ್ಲೂ ಈ ಸಭೆಯ ಉದ್ದೇಶದ ಬಗ್ಗೆ ಕುತೂಹಲ ಮನೆ ಮಾಡಿದೆ. ಎರಡೂವರೆ ವರ್ಷಗಳ ಆಡಳಿತದ ಸನ್ನಿಹಿತ ಹಿನ್ನೆಲೆಯಲ್ಲಿ, ಕೆಲವರಿಗೆ ಇದು ಸಚಿವ ಸಂಪುಟದಿಂದ ಸೆಂಡ್ ಆಫ್ ಆಗಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಸಚಿವ ಸಂಪುಟದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯ ಕುರಿತು ವದಂತಿಗಳು ಕೇಳಿಬರುತ್ತಿವೆ. ಆದರೆ, ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಮುಖ್ಯಮಂತ್ರಿಗಳು ಸಚಿವರನ್ನು ಊಟಕ್ಕೆ ಕರೆಯುವುದು ಸಾಮಾನ್ಯ ಸಂಪ್ರದಾಯ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಆರು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ, ಅಧಿವೇಶನದ ಸಮಯದಲ್ಲಿ ಇಂತಹ ಸಭೆಗಳನ್ನು ನಡೆಸುತ್ತಾರೆ. ಇದನ್ನು ಅಂತಹ ದೊಡ್ಡ ವಿಚಾರ ಎಂದು ಪರಿಗಣಿಸುವ ಅಗತ್ಯವಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.

ಬಿಜೆಪಿ ಈ ಭೋಜನ ಕೂಟವನ್ನು ಟೀಕಿಸಿದ್ದು, ಮುಖ್ಯಮಂತ್ರಿಗಳು ‘ಬಿಹಾರ ಎಲೆಕ್ಷನ್‌ಗೆ ಕಲೆಕ್ಷನ್‌’ ಮಾಡುವ ಉದ್ದೇಶದಿಂದ ಈ ಸಭೆ ಕರೆದಿದ್ದಾರೆ ಎಂದು ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶವರ್, ವಿರೋಧ ಪಕ್ಷದಲ್ಲಿರುವವರು ಏನಾದರೂ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

Published on: Oct 13, 2025 02:13 PM