AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬೆಳ್ಳಂದೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ 1 ಗಂಟೆ 45 ನಿಮಿಷ’, ಇದು ಬೆಂಗಳೂರು ಟ್ರಾಫಿಕ್ ಕಥೆ ಎಂದ ​ಮೋಹನ್‌ದಾಸ್ ಪೈ

ಬೆಂಗಳೂರಿನಲ್ಲಿ ಟ್ರಾಫಿಕ್​​​ ವಿಚಾರವಾಗಿ ಹಲವು ಪೋಸ್ಟ್​​​​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತ ಇರುತ್ತದೆ. ಇದೀಗ ಟಿವಿ ಮೋಹನ್‌ದಾಸ್ ಪೈ ಅವರು ಟ್ರಾಫಿಕ್ ವಿಚಾರವಾಗಿ ತಮ್ಮ ಎಕ್ಸ್​​ ಖಾತೆಯನ್ನು ಹೇಳಿಕೊಂಡಿದ್ದಾರೆ. ಬೆಳ್ಳಂದೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಲು 1 ಗಂಟೆ 45 ನಿಮಿಷಗಳನ್ನು ತೆಗೆದುಕೊಂಡಿದೆ. ಇದು ಹುಚ್ಚುತನ ಅಲ್ಲವೇ, ಇದರ ಜತೆಗೆ ರಸ್ತೆಗಳೆಲ್ಲವೂ ಅಗೆದು ಹೊಂಡಗಳಿಂದ ತುಂಬಿವೆ ಎಂದು ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ.

'ಬೆಳ್ಳಂದೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ 1 ಗಂಟೆ 45 ನಿಮಿಷ', ಇದು ಬೆಂಗಳೂರು ಟ್ರಾಫಿಕ್ ಕಥೆ ಎಂದ ​ಮೋಹನ್‌ದಾಸ್ ಪೈ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 13, 2025 | 3:40 PM

Share

ಬೆಂಗಳೂರು, ಅ.13: ಬೆಂಗಳೂರಿನ ಟ್ರಾಫಿಕ್​​ (Bengaluru traffic) ಬಗ್ಗೆ ಒಂದಲ್ಲ ಒಂದು ಪೋಸ್ಟ್​​​ಗಳು ವೈರಲ್​​ ಆಗುತ್ತಾ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕ್ ಬಗ್ಗೆ ಪ್ರತಿದಿನ ಚರ್ಚೆಗೆ ಬಂದೇ ಬರುತ್ತದೆ. ಟ್ರಾಪಿಕ್​​​​ ಬಗ್ಗೆ ಸಾಮಾನ್ಯ ಜನರು ಮಾತನಾಡುವುದು, ಹೇಳಿಕೊಳ್ಳುವುದು ಸಹಜ, ಆದರೆ ಒಬ್ಬ ಉದ್ಯಮಿ ಟ್ರಾಫಿಕ್​ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಖ್ಯಾತ ಉದ್ಯಮಿ ಹಾಗೂ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿವಿ ಮೋಹನ್‌ದಾಸ್ ಪೈ ಬೆಂಗಳೂರು ಟ್ರಾಫಿಕ್​​ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಬೆಳ್ಳಂದೂರಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದಲ್ಲಿ, 50 ಕಿಲೋಮೀಟರ್ ಹೊರ ವರ್ತುಲ ರಸ್ತೆ (ಒಆರ್‌ಆರ್)ಯಲ್ಲಿ ಬೆಂಗಳೂರಿನ ಪ್ರಯಾಣಿಕರು 1 ಗಂಟೆ 45 ನಿಮಿಷಗಳ ಪ್ರಯಾಣ ಸಮಯವನ್ನು ಸಹಿಸಿಕೊಳ್ಳುತ್ತಿದ್ದಾರೆ. ಗುಂಡಿಗಳಿಂದ ಕೂಡಿದ ರಸ್ತೆಗಳು, ನಡೆಯುತ್ತಿರುವ ನಮ್ಮ ಮೆಟ್ರೋ ನಿರ್ಮಾಣ ಮತ್ತು ನಿರಂತರ ಸಂಚಾರ ದಟ್ಟಣೆಯಿಂದಾಗಿ ಜನರಲ್ಲಿ ತಾಳ್ಮೆ ಎಂಬುದು ಉಳಿದುಕೊಳ್ಳಲು ಸಾಧ್ಯವೇ.

ಬೆಳ್ಳಂದೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಲು 1 ಗಂಟೆ 45 ನಿಮಿಷಗಳನ್ನು ತೆಗೆದುಕೊಂಡಿದೆ. ಇದು ಹುಚ್ಚುತನ ಅಲ್ಲವೇ, ಇದರ ಜತೆಗೆ ರಸ್ತೆಗಳೆಲ್ಲವೂ ಅಗೆದು ಹೊಂಡಗಳಿಂದ ತುಂಬಿವೆ. ಬೆಂಗಳೂರಿನಲ್ಲಿ ಭಾರತದ ಅತ್ಯಂತ ಕೆಟ್ಟ ರಸ್ತೆಗಳಿವೆ ಎಂದು ಅನ್ನಿಸುತ್ತದೆ ಎಂದು ಮೋಹನ್‌ದಾಸ್ ಪೈ ಹೇಳಿದ್ದಾರೆ. ಇದು ಮುಂದಿನ 10 ವರ್ಷಗಳಲ್ಲಿ ಪ್ರಯಾಣಿಕರಿಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್​ 130 ಸಾವಿರ ವೀಕ್ಷಣೆಗಳು ಮತ್ತು 2,700 ಲೈಕ್‌ಗಳನ್ನು ಗಳಿಸಿದೆ. ಇನ್ನು ಈ ಪೋಸ್ಟ್​​​ಗೆ ನರೇಶ್​​​ ಎಂಬುವವರು @TopDriverIndia ಖಾತೆಯಿಂದ ರೀಪೋಸ್ಟ್​​ ಮಾಡಲಾಗಿದೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಈ ಪೋಸ್ಟ್​​ನಲ್ಲಿ “ಬೆಂಗಳೂರು ಹುಡುಗರೇ. ನಾನು ನಿಮ್ಮ ನಗರವನ್ನು ಪ್ರೀತಿಸುತ್ತೇನೆ, 70 ರ ದಶಕದಿಂದಲೂ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ನೀವು ನಿಜವಾಗಿಯೂ ನಿಮ್ಮ ರಸ್ತೆಗಳು ಮತ್ತು ಪ್ರಯಾಣದ ಸಮಯದ ಬಗ್ಗೆ ಏನಾದರೂ ಯೋಚನೆ ಮಾಡಬೇಕಾಗಿದೆ. ಹೈದರಾಬಾದ್‌ನಲ್ಲಿ ಈಗ ಪ್ರಯಾಣದ ಸಮಯವನ್ನು ನೋಡಿ 1 ಗಂಟೆ, ನಗರದ ಹೃದಯಭಾಗಕ್ಕೆ 40 ಕಿ.ಮೀ.. ಎಂದು ಹೇಳಿದ್ದಾರೆ. ಈ ಪೋಸ್ಟ್ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಇನ್ನು ಟಿವಿ ಮೋಹನ್‌ದಾಸ್ ಪೈ ಅವರು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವರಿ ಸಚಿವರಾಗಿರುವ ಡಿಕೆ ಶಿವಕುಮಾರ್ ಅವರನ್ನು ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಟ್ಯಾಗ್​​ ಮಾಡಿ ಇದು ಬೆಳವಣಿಗೆಯ ಪರಿಣಾಮವಲ್ಲ, ಆದರೆ ಭಾರಿ ಭ್ರಷ್ಟಾಚಾರ ಮತ್ತು ಕೆಟ್ಟ ಆಡಳಿತದ ಪರಿಣಾಮವಾಗಿದೆ. ದಯವಿಟ್ಟು @GBA_office @GBAChiefComm ಗೆ ಸಹಾಯ ಮಾಡಿ, ಗುಂಡಿಗಳಿಲ್ಲದೆ ನಾವು ರಸ್ತೆಗಳನ್ನು ಹೊಂದಲು ಸಾಧ್ಯವಿಲ್ಲವೇ? ಇದು AI ಕೆಲಸವಲ್ಲ ಎಂದು ಖಡಕ್​​ ಆಗಿ ಹೇಳಿದ್ದಾರೆ.

ಇದನ್ನೂ ಓದಿ: 4 ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿದ್ದ ಬೆಂಗಳೂರು ಮೂಲದ ವ್ಯಕ್ತಿ, ಅದರಿಂದ ಹೊರಬಂದದ್ದು ಹೇಗೆ ಗೊತ್ತಾ?

ಅನೇಕ ಬೆಂಗಳೂರಿನ ನಿವಾಸಿಗಳು ವಿಮಾನ ನಿಲ್ದಾಣವನ್ನು ತಲುಪಲು 1 ಗಂಟೆ 45 ನಿಮಿಷಗಳು ವಾಸ್ತವವಾಗಿ ಸಮಂಜಸವಾದ ಸಮಯ ಮತ್ತು ಇದರ ಬಗ್ಗೆ ಅವರಿಗೆ ಅನುಭವವಿದೆ. ರಸ್ತೆಗಳನ್ನು ಅಗೆದು ಹಾಕದಿದ್ದರೂ ಮತ್ತು ರಸ್ತೆಗಳು ಖಾಲಿಯಾಗಿದ್ದಾಗಲೂ ಸಹ, ಬೆಳ್ಳಂದೂರಿನಿಂದ ವಿಮಾನ ನಿಲ್ದಾಣವನ್ನು ತಲುಪಲು 55 ನಿಮಿಷಗಳನ್ನು ತೆಗೆದುಕೊಳ್ಳುತ್ತಿತ್ತು. ಮುಂದಿನ ದಿನಗಳಲ್ಲಿ ಮೆಟ್ರೋ ಮಾರ್ಗ ಬರುತ್ತದೆ ಎಂದು ಕಮೆಂಟ್​​ ಮಾಡಿದ್ದಾರೆ. ವಾವ್… ನೀವು 1.45 ಗಂಟೆಗಳಲ್ಲಿ ಇದನ್ನು ಮಾಡಿದ್ದೀರಿ, ಅದೃಷ್ಟವಂತರು… ಕನಿಷ್ಠ 2.5 ಗಂಟೆಗಳಾದರೂ ಆಗಬೇಕಿತ್ತು ಎಂದು ಮತ್ತೊಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾರೆ.

ಬೆಂಗಳೂರು​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ