ಉದ್ಯಮಿ ಗಾಂಧಿಗೆ ವಂಚನೆ: 100 ಕೋಟಿ ಸಾಲದ ಆಸೆ ತೋರಿಸಿ 1.80 ಕೋಟಿ ರೂ ಎಗರಿಸಿ, ಪರಾರಿ!

| Updated By: ಸಾಧು ಶ್ರೀನಾಥ್​

Updated on: Dec 09, 2021 | 12:48 PM

ನಂತರ ಸಾಲವೂ ನೀಡದೆ, ತಾನು ನೀಡಿದ್ದ ಹಣವೂ (ಬಡ್ಡಿ 1 ಕೋಟಿ 80 ಲಕ್ಷ ರೂ) ನೀಡದೆ ಕಂಪನಿ ಅಧುಕಾರಿಗಳು ಎಸ್ಕೇಪ್ ಆಗಿಬಿಟ್ಟಿದ್ದಾರೆ. ಕಂಪನಿಯ ಮುಖ್ಯಸ್ಥ ಕಾರ್ತಿವೇಲನ್ ಪೋನ್ ಸ್ವಿಚ್ ಅಪ್ ಮಾಡಿಕೊಂಡು ಅಡಗಿಕುಳಿತಿದ್ದಾನೆ. ಈ ಹಿನ್ನೆಲೆ, ಮಂಥೆನಾ ತರುಣ್ ಗಾಂಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಉದ್ಯಮಿ ಗಾಂಧಿಗೆ ವಂಚನೆ: 100 ಕೋಟಿ ಸಾಲದ ಆಸೆ ತೋರಿಸಿ 1.80 ಕೋಟಿ ರೂ ಎಗರಿಸಿ, ಪರಾರಿ!
ಉದ್ಯಮಿ ಗಾಂಧಿಗೆ ವಂಚನೆ: 100 ಕೋಟಿ ಸಾಲದ ಆಸೆ ತೋರಿಸಿ 1.80 ಕೋಟಿ ರೂ ಎಗರಿಸಿ, ಪರಾರಿ!
Follow us on

ಬೆಂಗಳೂರು: ಬೆಂಗಳೂರಿನ HSR ಲೇಔಟ್ ನಲ್ಲಿ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪನಿ (Futures Crest Ventures Company) ಹೆಸರಲ್ಲಿ ಭಾರೀ ಮೊತ್ತದ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಸುಮಾರು 100 ಕೋಟಿ ರೂಪಾಯಿ ಆಸೆ ತೋರಿಸಿ 1.80 ಕೋಟಿ ರೂ ಗುಳುಂ ಮಾಡಿರುವುದಾಗಿಯೂ ಉದ್ಯಮಿ ಮಂಥೆನಾ ತರುಣ್ ಗಾಂಧಿ ಎಂಬುವರು ವಂಚನೆಗೊಳಗಾದವರು ಎಂದು ತಿಳಿದುಬಂದಿದೆ.

ಹೈದರಾಬಾದ್ ಮೂಲದ ಉದ್ಯಮಿ ಮಂಥೆನಾ ತರುಣ್ ಗಾಂಧಿ ಎಂಬುವರಿಗೆ ನೂರು ಕೋಟಿ‌ ಸಾಲದ ಆಸೆ ತೋರಿಸಿ 1 ಕೋಟಿ 80 ಲಕ್ಷ ವಂಚನೆ ಮಾಡಿದ್ದಾರೆ. ಈ ಸಂಬಂಧ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಬ್ಯುಸಿನೆಸ್ ಮಾಡುವ ಸಲುವಾಗಿ ತರುಣ್ ಗಾಂಧಿ ಸಾಲಕ್ಕಾಗಿ ಹುಡುಕಾಡುತ್ತಿದ್ದರು. ಈ ವೇಳೆ ಬೆಂಗಳೂರಿನ ಪ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪನಿ ಸಾಲ ಕೊಡುವುದಾಗಿ ಆಸೆ ತೋರಿಸಿದೆ. ಈ ಬಗ್ಗೆ ತರುಣ್ ಗಾಂಧಿ‌ ತಮ್ಮ ಸಂಬಂಧಿಕರಿಂದ ಮಾಹಿತಿ ಪಡೆದಕೊಂಡಿದ್ದಾರೆ.

ಪ್ರಕರಣದ ಮುಖ್ಯ ಆರೋಪಿ‌ ಕಾರ್ತಿವೇಲನ್ ಗಾಗಿ ಹುಡುಕಾಟ:

ಆರೋಪಿ‌ ಕಾರ್ತಿವೇಲನ್ ವಿರುದ್ಧ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ‌ ದೂರು ದಾಖಲಾಗಿ, ಹುಡುಕಾಟ ಶುರುವಾಗಿದೆ.

ಸಂಬಂಧಿಕರ ಮಾಹಿತಿಯನ್ನಾಧರಿಸಿ ಉದ್ಯಮಿ ತರುಣ್ ಗಾಂಧಿ ಕಂಪನಿ ಸಂಪರ್ಕಿಸಿದ್ದರು. ಈ ವೇಳೆ ನೂರು ಕೋಟಿ ಸಾಲ ಕೊಡಬೇಕಾದ್ರೆ ಮೂರು ತಿಂಗಳ ಬಡ್ಡಿ ಮುಂಗಡವಾಗಿ ನೀಡಬೇಕು ಎಂದಿತ್ತು ಕಂಪನಿ. ಅದನ್ನು ನಂಬಿ ಮೂರು ತಿಂಗಳ ಬಡ್ಡಿ 1 ಕೋಟಿ 80 ಲಕ್ಷ ರೂ. ಗಳನ್ನು ತರುಣ್ ಗಾಂಧಿ ತಕ್ಷಣವೇ ನೀಡಿಬಿಟ್ಟಿದ್ದರು.

ಆದರೆ ನಂತರ ಸಾಲವೂ ನೀಡದೆ, ತಾನು ನೀಡಿದ್ದ ಹಣವೂ (ಬಡ್ಡಿ 1 ಕೋಟಿ 80 ಲಕ್ಷ ರೂ) ನೀಡದೆ ಕಂಪನಿ ಅಧಿಕಾರಿಗಳು ಎಸ್ಕೇಪ್ ಆಗಿಬಿಟ್ಟಿದ್ದಾರೆ. ಕಂಪನಿಯ ಮುಖ್ಯಸ್ಥ ಕಾರ್ತಿವೇಲನ್ ಪೋನ್ ಸ್ವಿಚ್ ಅಪ್ ಮಾಡಿಕೊಂಡು ಅಡಗಿಕುಳಿತಿದ್ದಾನೆ. ಈ ಹಿನ್ನೆಲೆ, ಮಂಥೆನಾ ತರುಣ್ ಗಾಂಧಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡು, ಪೊಲೀಸ್ರು ಮೂವರನ್ನು ಬಂಧಿಸಿದ್ದಾರೆ. ಪ್ರಕರಣದ ಮುಖ್ಯ ಆರೋಪಿ‌ ಕಾರ್ತಿವೇಲನ್ ಗಾಗಿ ಹುಡುಕಾಟ ನಡೆಸಿದ್ದಾರೆ.