ಬೆಂಗಳೂರು, ನವೆಂಬರ್ 14: ನಮ್ಮ ಮೆಟ್ರೋ (Namma Metro) ವೇಗದ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅನುಕೂಲಕಾರಿಯಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಸಂಚಾರ ಸೇವೆಯನ್ನು ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಮಂಡಳಿ (BMRCL) ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಅನ್ನು ಆರಂಭಿಸಿದೆ. ಮೆಟ್ರೋ ಪ್ರಯಾಣಿಕರು ಸೇಫ್ ಕ್ಲಾಕ್ ಸಂಸ್ಥೆಯ ಸ್ಮಾರ್ಟ್ ಡಿಜಿಟಲ್ ಲಾಕರ್‌ನಲ್ಲಿ ತಮ್ಮ ಲಗೇಜ್ ಇಟ್ಟು ಬೇರಡೆ ಹೋಗಬೇಕಿದ್ದ ಸ್ಥಳಕ್ಕೆ ತೆರಳಿ ವಾಪಸ್ ಬರಬಹುದು. ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಕಾರ್ಯ, ಇದನ್ನು ಉಯೋಗಿಸುವುದು ಹೇಗೆ? ಲಗೇಜ್ ಇಡಲು ಎಷ್ಟು ಹಣ ನೀಡಬೇಕು ಎಂಬ ಮಾಹಿತಿ ಇಲ್ಲಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್)ನಲ್ಲಿ ಬುಧವಾರ ಸ್ಮಾರ್ಟ್ ಡಿಜಿಟಲ್ ಲಾಕರ್ ಆರಂಭಗೊಂಡಿದೆ. ಮೆಜೆಸ್ಟಿಕ್ ನಿಲ್ದಾಣದ ‘ಡಿ’ ನಿರ್ಗಮನದಲ್ಲಿ ಸ್ಥಾಪಿಸಲಾಗಿರುವ ಸ್ಮಾರ್ಟ್ ಡಿಜಿಟಲ್ ಲಾಕರ್ಗೆ ಬಿಎಂಆರ್ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕಿ ಕಲ್ಪನಾ ಕೊಟಾರಿಯಾ ಚಾಲನೆ ನೀಡಿದರು. ಪ್ರಯಾಣಿಕರು 2 ರಿಂದ 5 ಬ್ಯಾಗ್‌ಗಳನ್ನು ಸ್ಮಾರ್ಟ್ ಡಿಜಿಟಲ್ ಲಾಕರ್‌ನಲ್ಲಿ ಇಡಬಹುದಾಗಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!
SafeCloak ನ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯವು ಈಗ ಮೆಜೆಸ್ಟಿಕ್ ಮತ್ತು ಇತರ ಆಯ್ದ ನಿಲ್ದಾಣಗಳಲ್ಲಿ ಲಭ್ಯ. ನಿಮ್ಮ ಬ್ಯಾಗ್‌ಗಳನ್ನು 6 ಗಂಟೆಗಳಿಗೆ (ಮಧ್ಯಮ ಗಾತ್ರ) ಕೇವಲ ₹70 ಮತ್ತು ದೊಡ್ಡ ಗಾತ್ರದ ಲಗೇಜ್ ಗೆ ₹100 ನಿಗದಪಡಿಸಲಾಗಿದೆ. #ನಮ್ಮಮೆಟ್ರೋ pic.twitter.com/jEM3iPhc8y— ನಮ್ಮ ಮೆಟ್ರೋ (@OfficialBMRCL) November 13, 2024
ಸ್ಮಾರ್ಟ್ ಡಿಜಿಟಲ್ ಲಾಕರ್‌ನಲ್ಲಿನ ಕಿಯೋಸ್ಟ್‌ನಲ್ಲಿನ ಆಯ್ಕೆಗಳನ್ನು ಭರ್ತಿ ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ, ಒಟಿಪಿ ಬರಲಿದೆ. ಅದನ್ನು ಕಿಯೋಸ್ಟ್‌ನಲ್ಲಿ ಹಾಕಿದರೆ ಬ್ಯಾಗ್‌ಗಳನ್ನು ಇಡಲು ಲಾಕರ್ ದೊರೆಯಲಿದೆ. ನಂತರ, ಲಾಕರ್‌ನಲ್ಲಿ ಬ್ಯಾಗ್ ಇಟ್ಟು ಲಾಕ್ ಮಾಡಬೇಕು. ಅನಂತರ ತೆರೆಯಬೇಕಿದ್ದರೆ ಬ್ಯಾಗ್ ಮಾಲೀಕರೇ ಬಂದು ಒಟಿಪಿ ಹಾಕಬೇಕು. ಆಗ ಲಾಕರ್ ತೆರೆಯುತ್ತದೆ. ಹೀಗಾಗಿ, ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.
ಇದನ್ನೂ ಓದಿ: ಲಾಲ್ ಬಾಗ್ ಆಯ್ತು, ಬಾಲ ಭವನ ಪ್ರವೇಶ ಶುಲ್ಕ ಏರಿಸಲು ಚಿಂತನೆ
2 ರಿಂದ 3 ಬ್ಯಾಗ್‌ಗಳನ್ನು 6 ಗಂಟೆಗಳ ಕಾಲ ಇಡಲು 70 ರೂ. ಹಾಗೂ 4 ರಿಂದ 5 ಬ್ಯಾಗ್‌ಗಳನ್ನು ಇಡಲು 100 ರೂ. ಶುಲ್ಕ ವಿಧಿಸಲಾಗುತ್ತದೆ. ಅದೇ 12 ಗಂಟೆಗಳ ಕಾಲ ಬ್ಯಾಗ್‌ಗಳನ್ನು ಇಟ್ಟರೆ ಕ್ರಮವಾಗಿ 120 ಮತ್ತು 160 ರೂ. ಶುಲ್ಕ ನಿಗದಿ ಮಾಡಲಾಗಿದೆ.
ನೂತನ ಸೇವೆಯು ಸದ್ಯ ಮೆಜೆಸ್ಟಿಕ್ ಕೆಂಪೇಗೌಡ, ಚಿಕ್ಕಪೇಟೆ ಹಾಗೂ ಬೆನ್ನಿಗಾನಹಳ್ಳಿ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆರಂಭಿಸಲಾಗಿದೆ. ಶೀಘ್ರದಲ್ಲೇ ಇತರ ನಿಲ್ದಾಣಗಳಿಗೂ ವಿಸ್ತರಿಸಲು ಸೇಫ್ ಕ್ಲಾಕ್ ಸಂಸ್ಥೆ ಯೋಜಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:07 am, Thu, 14 November 24