Nice Road accident: ನೈಸ್ ರಸ್ತೆಯಲ್ಲಿ ಸ್ಕಿಡ್ ಆಗಿ ನೆಲಕ್ಕೆ ಬಿದ್ದ ಬೈಕ್ ಸವಾರ; ಲಾರಿ ಹರಿದು ಸ್ಥಳದಲ್ಲೇ ದುರ್ಮರಣ

| Updated By: ಸಾಧು ಶ್ರೀನಾಥ್​

Updated on: Nov 02, 2021 | 8:17 AM

ಗಾಯಿತ್ರಿ ಬ್ರಿಡ್ಜ್ ಬಳಿ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ. ಭಾರಿ ಮಳೆಯ ನಡುವೆ 35 ವರ್ಷದ ಯುವಕ ಬೈಕ್ ನಲ್ಲಿ ತೆರಳುತಿದ್ದ. ಈ ವೇಳೆ ಸ್ಕಿಡ್ ಆಗಿ ಬೈಕ್ ಸವಾರ ನೆಲಕ್ಕೆ ಬಿದ್ದಿದ್ದಾನೆ. ಹಿಂದಿನಿಂದ ಬಂದ ಲಾರಿ ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Nice Road accident: ನೈಸ್ ರಸ್ತೆಯಲ್ಲಿ ಸ್ಕಿಡ್ ಆಗಿ ನೆಲಕ್ಕೆ ಬಿದ್ದ ಬೈಕ್ ಸವಾರ; ಲಾರಿ ಹರಿದು ಸ್ಥಳದಲ್ಲೇ ದುರ್ಮರಣ
ನೈಸ್​ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧ
Follow us on

ಬೆಂಗಳೂರು: ಬೆಂಗಳೂರು ಹೊರವಲಯದ ನೈಸ್ ರಸ್ತೆಯಲ್ಲಿ ಅಪಘಾತವಾಗಿದ್ದು, ಬೈಕ್ ಸವಾರನ ಮೇಲೆ ಲಾರಿ ಹರಿದಿದ್ದು, ಆತ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾನೆ. ಬೈಕ್ ಸವಾರ ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಗೆ ಬಿದ್ದಿದ್ದ. ಆ ವೇಳೆ ಸವಾರನ ಮೇಲೆ ಲಾರಿ ಹರಿದು ದುರ್ಘಟನೆ ಸಂಭವಿಸಿದೆ. ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಗಾಯಿತ್ರಿ ಬ್ರಿಡ್ಜ್ ಬಳಿ ರಾತ್ರಿ 9.30ರ ಸುಮಾರಿಗೆ ಘಟನೆ ನಡೆದಿದೆ. ಭಾರಿ ಮಳೆಯ ನಡುವೆ 35 ವರ್ಷದ ಯುವಕ ಬೈಕ್ ನಲ್ಲಿ ತೆರಳುತಿದ್ದ. ಈ ವೇಳೆ ಸ್ಕಿಡ್ ಆಗಿ ಬೈಕ್ ಸವಾರ ನೆಲಕ್ಕೆ ಬಿದ್ದಿದ್ದಾನೆ. ಹಿಂದಿನಿಂದ ಬಂದ ಲಾರಿ ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ತಾಳೆಕೆರೆ ಗೇಟ್‌ ಬಳಿ 2 ಲಾರಿಗಳ ನಡುವೆ ಡಿಕ್ಕಿ:
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ತಾಳೆಕೆರೆ ಗೇಟ್‌ ಬಳಿ 2 ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ. ಆದರೆ ಅಪಘಾತದಿಂದ ತುಮಕೂರು-ಬೆಂಗಳೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್ ಆಗಿದೆ. ಸಂಚಾರಿ ಪೊಲೀಸರಿಂದ ವಾಹನಗಳ ತೆರವು ಕಾರ್ಯಚರಣೆ ನಡೆದಿದೆ. ನೆಲಮಂಗಲ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Hanagal, Sindagi By Election Counting | ಹಾನಗಲ್​, ಸಿಂದಗಿ ಬೈ ಎಲೆಕ್ಷನ್ ಮತ ಎಣಿಕೆ | Tv9KannadaLive​

(bangalore nice road accident bike skid bike rider died on spot)

Published On - 8:01 am, Tue, 2 November 21